ವಾಷಿಂಗ್ಟನ್: ಅಮೆರಿಕಾ ಸರ್ಕಾರದ ಪ್ರಬಲ ಫೆಡರಲ್ ಕಮ್ಯುನಿಕೇಷನ್ಸ್ ಆಯೋಗದ ಮೊದಲ ಮಹಿಳಾ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಭಾರತೀಯ-ಅಮೆರಿಕನ್ ಡಾ.ಮೋನಿಶಾ ಘೋಷ್ ಅವರು ಆಯ್ಕೆಯಾಗಿದ್ದಾರೆ.
ಅವರು ಎಫ್ಸಿಸಿಯ ಭಾರತೀಯ ಮೂಲದ ಅಧ್ಯಕ್ಷ ಅಜಿತ್ ಪೈ ಅವರಿಗೆ ಮತ್ತು ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ವಿಷಯಗಳ ಬಗ್ಗೆ ಏಜೆನ್ಸಿಗೆ ಸಲಹೆ ನೀಡಲಿದ್ದಾರೆ. ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಚೇರಿಯೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದಾರೆ. ಘೋಷ್ ಮುಂದಿನ ವರ್ಷ ಜನವರಿ 13 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಅವಳು ಡಾ.ಎರಿಕ್ ಬರ್ಗರ್ ಅವರನ್ನು ರಿಪ್ಲೇಸ್ ಮಾಡಿ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಎಫ್ಸಿಸಿ ಎಲ್ಲಾ 50 ರಾಜ್ಯಗಳು, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಮತ್ತು ಯುಎಸ್ ಪ್ರಾಂತ್ಯಗಳಲ್ಲಿ ರೇಡಿಯೋ, ಟೆಲಿವಿಷನ್, ವೈಯರ್, ಉಪಗ್ರಹ ಮತ್ತು ಕೇಬಲ್ ಮೂಲಕ ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಸಂವಹನಗಳನ್ನು ನಿಯಂತ್ರಿಸುತ್ತದೆ.
ಅಮೆರಿಕಾ ಸಂಸತ್ತು ಕಾಂಗ್ರೆಸ್ ಮೇಲ್ವಿಚಾರಣೆಯ ಸ್ವತಂತ್ರ ಯು.ಎಸ್. ಸರ್ಕಾರಿ ಸಂಸ್ಥೆ ಎಫ್ಸಿಸಿ ಆಗಿದ್ದು, ಅಮೆರಿಕದ ಸಂವಹನ ಕಾನೂನು ಮತ್ತು ನಿಬಂಧನೆಗಳನ್ನು ಅನುಷ್ಠಾನಗೊಳಿಸುವ ಮತ್ತು ಜಾರಿಗೊಳಿಸುವ ಜವಾಬ್ದಾರಿಯುತ ಫೆಡರಲ್ ಏಜೆನ್ಸಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.