ನವದೆಹಲಿ: ಎನ್ ಆರ್ ಸಿ (ನ್ಯಾಷನಲ್ ರಿಜಿಸ್ಟಾರ್ ಆಫ್ ಸಿಟಿಜನ್ಸ್) ಅನ್ನು ಧಾರ್ಮಿಕ ಆಧಾರದಲ್ಲಿ ನಡೆಸಲಾಗುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಪಷ್ಟಪಡಿಸಿದ್ದಾರೆ.
“ಎನ್ ಆರ್ ಸಿ ಅಡಿಯಲ್ಲಿ ಯಾರಾದರು ವಿದೇಶಿಗಳು ಎಂದು ಪತ್ತೆಯಾದರೆ ಅವರನ್ನು ವಾಪಾಸ್ ಕಳುಹಿಸಲಾಗುವುದು. ಎನ್ ಆರ್ ಸಿ ಮುಸ್ಲಿಮರ ವಿರುದ್ಧವಾಗಿದೆ ಎಂದರೆ ಅದು ತಪ್ಪು” ಎಂದಿದ್ದಾರೆ.
“ಇಷ್ಟಕ್ಕೂ ಎನ್ ಆರ್ ಸಿ ಅನ್ನು ತಂದವರು ಯಾರು? ಈ ಪ್ರಶ್ನೆಯನ್ನು ನಾನು ಪ್ರತಿಭಟನಾಕಾರರಿಗೆ, ಕಾಂಗ್ರೆಸ್ ಅಧ್ಯಕ್ಷರಿಗೆ ಮತ್ತು ಗುಲಾಮ್ ನಬಿ ಆಜಾದ್ ಅವರಿಗೆ ಕೇಳಲು ಬಯಸುತ್ತೇನೆ” ಎಂದಿದ್ದಾರೆ.
1985 ರಲ್ಲಿ, ಅಸ್ಸಾಂ ಒಪ್ಪಂದದ ನಂತರ ಎನ್ಆರ್ಸಿಯ ಪ್ರಸ್ತಾಪವನ್ನು ಅಂಗೀಕರಿಸಲಾಯಿತು, ಮತ್ತು 2004 ರಲ್ಲಿ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು. ಇದಲ್ಲದೆ, 2009 ರಲ್ಲಿ ನಿಯಮ 4 ಅನ್ನು ಸೇರಿಸಲಾಯಿತು. ಯುಪಿಎ ಅಧಿಕಾರದಲ್ಲಿದ್ದಾಗ ಈ ಎಲ್ಲಾ ಬದಲಾವಣೆಗಳು ಸಂಭವಿಸಿದವು. ಈಗ ಅವರು ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಅವರು ರೂಪಿಸಿದ ಕಾನೂನಿನ ಕುರಿತು ಅವರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದಿದ್ದಾರೆ.
“ನೀವು ಪ್ರತಿಭಟನೆ ನಡೆಸಲು ಈ ಕಾನೂನನ್ನು ಮಾಡಿದ್ದೀರಾ? ನೀವು ಅದನ್ನು ಅಗತ್ಯವೆಂದು ಪರಿಗಣಿಸಿಲ್ಲ ಎಂದಾದರೆ, ನೀವು ಕಾನೂನನ್ನು ಏಕೆ ಅಂಗೀಕರಿಸಿದ್ದೀರಿ? ”ಎಂದು ಶಾ ಪ್ರಶ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.