ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ತನ್ನ ಸಿಬ್ಬಂದಿ ಮತ್ತು ವಿಧವೆಯರಾದ ಸಿಬ್ಬಂದಿಗೆ ಮದುವೆಯಾಗಲು ಸೂಕ್ತವಾದ ಸಂಗಾತಿಯನ್ನು ಹುಡುಕಲು ಸಹಾಯ ಮಾಡುವ ಸಲುವಾಗಿ ಮ್ಯಾಟ್ರಿಮೋನಿಯನ್ ಸೈಟ್ (ವಧು ವರರ ವೇದಿಕೆ) ಅನ್ನು ಆರಂಭಿಸಿದೆ. ಕಳೆದ ವಾರ ಪ್ರಾರಂಭಿಸಲಾದ ವೆಬ್ಸೈಟ್ ಅನ್ನು ಐಟಿಬಿಪಿ ನಿರ್ವಹಿಸಲಿದ್ದು, ಅದರ ಸಿಬ್ಬಂದಿಗಳಿಗೆ ಮಾತ್ರ ಅದರ ಸೇವೆಗಳನ್ನು ಪಡೆಯಲು ಸಾಧ್ಯವಾಗಲಿದೆ.
ಐಟಿಬಿಪಿ ವೆಬ್ಸೈಟ್ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಮೊದಲ ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಆಗಿದೆ. ಅತ್ಯುತ್ತಮ ರೀತಿಯಲ್ಲಿ ಇದನ್ನು ನಿರ್ವಹಣೆ ಮಾಡಲಾಗುತ್ತಿದೆ. ಯೋಧರಿಗೆ ಸಮರ್ಪಿತವಾಗಿ ಇದು ಕಾರ್ಯನಿರ್ವಹಿಸುತ್ತಿದೆ. ಮ್ಯಾಟ್ರಿಮೋನಿ ಪೋರ್ಟಲ್ ಅನ್ನು ಡಿಸೆಂಬರ್ 9 ರಂದು ಪ್ರಾರಂಭಿಸಲಾಯಿತು.
ಐಟಿಬಿಪಿ ವಕ್ತಾರ ವಿವೇಕ್ ಪಾಂಡೆ ಅವರ ಪ್ರಕಾರ, ಪಡೆಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಅವಿವಾಹಿತ ಸಿಬ್ಬಂದಿ ಇದ್ದಾರೆ ಮತ್ತು 1,000 ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಗಳು ಅವಿವಾಹಿತರಾಗಿದ್ದಾರೆ.
ಕಠಿಣ ಸೇವೆಯಿಂದಾಗಿ, ಐಟಿಬಿಪಿ ಸಿಬ್ಬಂದಿಗೆ ಸೂಕ್ತವಾದ ಸಂಗಾತಿಯನ್ನು ಹುಡುಕಲು ಸಮಯ ಸಿಗುತ್ತಿಲ್ಲ, ಹೀಗಾಗಿ ಈ ಸಮಸ್ಯೆಯನ್ನು ಸರಿದೂಗಿಸಲು ವೆಬ್ಸೈಟ್ ಪ್ರಾರಂಭಿಸಲಾಗಿದೆ ಎಂದು ಪಾಂಡೆ ಹೇಳಿದ್ದಾರೆ.
ಹೊಸದಾಗಿ ಪ್ರಾರಂಭಿಸಲಾದ ಮ್ಯಾಟ್ರಿಮೋನಿ ಪೋರ್ಟಲ್ ಹೆಚ್ಚು ಸುರಕ್ಷಿತವಾಗಿದೆ ಮತ್ತು ಅದರ ಸಿಬ್ಬಂದಿ ಮತ್ತು ಸಿಬ್ಬಂದಿಯನ್ನು ಹನಿಟ್ರಾಪ್ನಲ್ಲಿ ಸಿಕ್ಕಿ ಬೀಳದಂತೆ ರಕ್ಷಿಸುತ್ತದೆ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.