ಲಂಡನ್ : ಭಾರತೀಯ ಮೂಲದ ಯುಕೆ ಹೌಸ್ ಆಫ್ ಕಾಮನ್ಸ್ ಪ್ರತಿನಿಧಿಗಳಾದ ಅಲೋಕ್ ಶರ್ಮಾ, ರಿಷಿ ಸುನಕ್ ಅವರು ಯುಕೆ ಹೌಸ್ ಆಫ್ ಕಾಮನ್ಸ್ನಲ್ಲಿ ಭಗವದ್ಗೀತೆಯ ಮೇಲೆ ಪ್ರಮಾಣ ವಚನವನ್ನು ಸ್ವೀಕರಿಸಿದರು.
ಬ್ರಿಟಿಷ್ ಸಂಪುಟ ಸಚಿವ ಅಲೋಕ್ ಶರ್ಮಾ ಮತ್ತು ಖಜಾನೆಯ ಮುಖ್ಯ ಕಾರ್ಯದರ್ಶಿ ರಿಷಿ ಸುನಕ್ ಅವರು ಹೊಸ ಹೌಸ್ ಆಫ್ ಕಾಮನ್ಸ್ ಸಭೆಯಲ್ಲಿ ಮಂಗಳವಾರ ಭಗವದ್ಗೀತೆಯನ್ನು ಹಿಡಿದು ಸಂಸತ್ತಿನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದು ಇತ್ತೀಚಿನ ವರ್ಷಗಳಲ್ಲಿ ಬ್ರಿಟಿಷ್ ಸಂಸತ್ತಿನಲ್ಲಿ ಹೆಚ್ಚುತ್ತಿರುವ ವೈವಿಧ್ಯತೆಯನ್ನು ಪ್ರತಿಬಿಂಬಿಸಿದೆ.
ಯುಕೆಯ ಅಂತಾರಾಷ್ಟ್ರೀಯ ಅಭಿವೃದ್ಧಿ ಕಾರ್ಯದರ್ಶಿಯಾಗಿರುವ ಆಗ್ರಾ ಮೂಲದ ಶರ್ಮಾ ನಾಲ್ಕನೇ ಬಾರಿಗೆ ರೀಡಿಂಗ್ ವೆಸ್ಟ್ನಿಂದ ಸಂಸದರಾಗಿ ಆಯ್ಕೆಯಾದರೆ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿಯವರ ಅಳಿಯ ಸುನಾಕ್ ಮೂರನೇ ಬಾರಿಗೆ ಯಾರ್ಕ್ಷೈರ್ನ ರಿಚ್ಮಂಡ್ನಿಂದ ಪುನರಾಯ್ಕೆಯಾಗಿದ್ದಾರೆ.
ಭಗವದ್ಗೀತೆಯ ಪ್ರತಿ ಹಿಡಿದು, ಶರ್ಮಾ ಮತ್ತು ಸುನಾಕ್ ಪ್ರಮಾಣವಚನ ಪಡೆದುಕೊಳ್ಳುವ ವೇಳೆ, “ನಾನು ಸರ್ವಶಕ್ತ ದೇವರ ಮೇಲೆ ಪ್ರಮಾಣ ಮಾಡುತ್ತೇನೆ, ನಾನು ನಂಬಿಗಸ್ಥನಾಗಿರುತ್ತೇನೆ ಮತ್ತು ರಾಣಿ ಎಲಿಜಬೆತ್ ಮತ್ತು ಉತ್ತರಾಧಿಕಾರಿಗಳಿಗೆ ಕಾನೂನಿನ ಅನ್ವಯ ನಿಜವಾದ ನಿಷ್ಠೆಯನ್ನು ಹೊಂದುತ್ತೇನೆ. ದೇವರೇ ನನಗೆ ಸಹಾಯ ಮಾಡಿ ” ಎಂದು ಹೇಳಿದ್ದಾರೆ.
ಹೌಸ್ ಆಫ್ ಕಾಮನ್ಸ್ ಮತ್ತು ಹೌಸ್ ಆಫ್ ಲಾರ್ಡ್ಸ್ ಸದಸ್ಯರು ರಾಜ ಮನೆತನಕ್ಕೆ ನಿಷ್ಠರಾಗಿದ್ದೇವೆ ಎಂದು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಸದಸ್ಯರು ಯಾವ ಗ್ರಂಥದ ಮೇಲೆ ಪ್ರಮಾಣ ವಚನ ಸ್ವೀಕರಿಸಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ.
ಗುರುವಾರ ನಡೆದ ಚುನಾವಣೆಯಲ್ಲಿ ಚುನಾಯಿತವಾದ ಹೌಸ್ ಆಫ್ ಕಾಮನ್ಸ್ ಬ್ರಿಟಿಷ್ ಇತಿಹಾಸದಲ್ಲಿ ಜನಾಂಗೀಯ ಅಲ್ಪಸಂಖ್ಯಾತ ಸಮುದಾಯಗಳ ಅತಿ ಹೆಚ್ಚು ಸೇರ್ಪಡೆಗೊಂಡಿದೆ ಹೆಚ್ಚು ವೈವಿಧ್ಯಮಯವಾಗಿದೆ. 65 ಬಿಳಿಯರಲ್ಲದವರು ಮತ್ತು 19 ಭಾರತೀಯರು ಮೊದಲ ಬಾರಿಗೆ ಸಂಸದರಾಗಿದ್ದಾರೆ.
ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಸೇರಿದಂತೆ ಹೆಚ್ಚಿನ ಸದಸ್ಯರು ಬೈಬಲ್ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.