ನವದೆಹಲಿ: 13 ವರ್ಷದ ಬಾಲೆಯೊಬ್ಬಳು ಲೇಹ್ನ ಸ್ಟೋಕ್ ಕಂಗ್ರಿ ಪರ್ವತದ ತುತ್ತ ತುದಿಯನ್ನು ಏರುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದ್ದಾಳೆ.
ಪರ್ವತಾರೋಹಣದಲ್ಲಿ ಅತೀವ ಆಸಕ್ತಿ ಹೊಂದಿರುವ ಜಾಹ್ನವಿ 6100ಮೀಟರ್ ಎತ್ತರದಲ್ಲಿರುವ ಕಂಗ್ರಿಯನ್ನೇರಿದ ಸಾಹಿಸಿ. ಇದೀಗ ಆಕೆ ರಷ್ಯಾದ ಮೌಂಟ್ ಎಲ್ಬಸ್ ಏರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾಳೆ. ಇದರಲ್ಲಿ ಯಶಸ್ವಿಯಾದರೆ ಆಕೆ ದೇಶ ಮತ್ತು ವಿದೇಶದ ಏಳು ಶೃಂಗಗಳನ್ನೇರಿದ ಅತಿ ಕಿರಿಯ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾಳೆ.
ಸ್ಟೋಕ್ ಕಂಗ್ರಿಯನ್ನೇರಿ ಮೊದಲ ವಿಶ್ವ ದಾಖಲೆ ಮಾಡಿರುವ ಆಕೆ, ಏಳು ಶೃಂಗಗಳನ್ನೇರುವ ಮೂಲಕ ಎರಡನೆ ವಿಶ್ವ ದಾಖಲೆ ಬರೆಯಲು ಹೊರಟಿದ್ದಾಳೆ.
ಆದರೆ ಈ ಸಾಧನೆ ಮಾಡಲು ಆಕೆಗೆ ಸಾಕಷ್ಟು ಹಣದ ಅವಶ್ಯಕತೆ ಇದೆ, ಆಕೆಯ ಪೋಷಕರು ಸರ್ಕಾರದಿಂದ ಧನಸಹಾಯದ ನಿರೀಕ್ಷೆಯಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.