ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಪ್ರತಿವರ್ಷ ಜುಲೈ 13ರಂದು ಹುತಾತ್ಮ ದಿನವನ್ನು ಆಚರಿಸಲಾಗುತ್ತದೆ. ಪ್ರತಿವರ್ಷವೂ ಈ ದಿನ ಪ್ರತ್ಯೇಕತಾವಾದಿಗಳು ಬಂದ್ಗೆ ಕರೆ ನೀಡುತ್ತಾರೆ. ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಾರೆ. ಆದರೆ 25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬಂದ್ಗೆ ಕರೆ ನೀಡಲಾಗಿಲ್ಲ. ರಂಜಾನ್ ಉಪವಾಸ ಇರುವುದೇ ಇದಕ್ಕೆ ಕಾರಣ.
1931ರ ಜುಲೈ 13ರಂದು ಶ್ರೀನಗರ ಹೊರ ವಲಯದ ಸೆಂಟ್ರಲ್ ಜೈಲ್ ಸಮೀಪ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 21 ಮಂದಿಯನ್ನು ದೋಗ್ರಾ ಸೇನಾ ಪಡೆ ಕೊಂದು ಹಾಕಿತ್ತು. ಇದರ ಸ್ಮರಣಾರ್ಥ ಪ್ರತಿವರ್ಷ ಈ ದಿನವನ್ನು ಹುತಾತ್ಮ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ಬಲಿದಾನವನ್ನು ಸ್ಮರಿಸುವುದಕ್ಕಾಗಿ ಈ ದಿನ ಅಧಿಕೃತ ರಜಾ ದಿನವನ್ನಾಗಿ ಘೋಷಣೆ ಮಾಡಲಾಗಿದೆ, 1990ರಿಂದ ಪ್ರತ್ಯೇಕತಾವಾದಿಗಳು ಈ ದಿನ ಬಂದ್ಗೆ ಕರೆ ನೀಡುತ್ತಾರೆ. ಆದರೆ ರಂಜಾನ್ ಪ್ರಯುಕ್ತ 2015ರ ಹುತಾತ್ಮ ದಿನದಂದು ಬಂದ್ ಆಚರಿಸದಿರಲು ಪ್ರತ್ಯೇಕತಾವಾದಿಗಳು ನಿರ್ಧರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.