ನವದೆಹಲಿ: ಸ್ವಾವಲಂಬನೆಯ ತತ್ವಗಳನ್ನು ಹರಡಲು ಮತ್ತು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಭಾರತವು ಪ್ಯಾಲೇಸ್ಟೈನಿನ ಪ್ರಾಥಮಿಕ ಶಾಲೆಯ ಹಿಂದುಳಿದ ಬೆಡೋಯಿನ್ ಸಮುದಾಯದ ಮಕ್ಕಳಿಗೆ ಸೌರಶಕ್ತಿ ಚಾಲಿತ ಸ್ಟಡಿ ಲ್ಯಾಂಪ್ಗಳನ್ನು (ಅಧ್ಯಯನ ದೀಪ)ಗಳನ್ನು ವಿತರಣೆ ಮಾಡಿದೆ.
ಸ್ವಾವಲಂಬನೆಯ ತತ್ವಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಲು ಮತ್ತು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು 150 ನೇ ಗಾಂಧಿ ಜಯಂತಿ ಸಂದರ್ಭದಲ್ಲಿ ನಡೆಸಲಾಗುತ್ತಿರುವ ವಿದ್ಯಾರ್ಥಿಗಳ ಸೌರ ರಾಯಭಾರಿ ಕಾರ್ಯಾಗಾರದ ಅಂಗವಾಗಿ ದೀಪಗಳನ್ನು ದಾನ ಮಾಡಲಾಗಿದೆ.
ಮಹಾತ್ಮ ಗಾಂಧಿಯವರ 150 ನೇ ಜನ್ಮದಿನಾಚರಣೆಯ ಅಂಗವಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆ ತಯಾರಿಸಿದ ಸೌರಶಕ್ತಿ ಚಾಲಿತ ಅಧ್ಯಯನ ದೀಪಗಳು ವಿದ್ಯಾರ್ಥಿ ಫಲಾನುಭವಿಗಳನ್ನು ನವೀಕರಿಸಬಹುದಾದ ಶಕ್ತಿಯ ಭವಿಷ್ಯದ ಪ್ರಚಾರಕರನ್ನಾಗಿ ಮಾಡುವ ಗುರಿಯನ್ನು ಹೊಂದಿವೆ.
ಪ್ಯಾಲೇಸ್ಟೈನಿಯನ್ ರಾಷ್ಟ್ರೀಯ ಪ್ರಾಧಿಕಾರದ (ಪಿಎನ್ಎ) ಭಾರತದ ಪ್ರತಿನಿಧಿ ಸುನಿಲ್ ಕುಮಾರ್ ಅವರು ಸೋಮವಾರ ಜೆರಿಕೊ ಮತ್ತು ಜೋರ್ಡಾನ್ ಕಣಿವೆಯ ಗವರ್ನರೇಟ್ಗೆ ಭೇಟಿ ನೀಡಿದರು, ಅಲ್ಲಿ ಅವರನ್ನು ಜೆರಿಕೊ ಡೈರೆಕ್ಟರೇಟ್ ಶಿಕ್ಷಣ ನಿರ್ದೇಶಕ ಗವರ್ನರ್ ಜೆಹಾದ್ ಅಬು ಅಲ್-ಅಸಲ್ ಸ್ವಾಗತಿಸಿದರು. ಸ್ಥಳೀಯ ಸಮುದಾಯ ಜನರು ಈ ವೇಳೆ ಹಾಜರಿದ್ದರು. ಈ ಸಂದರ್ಭದಲ್ಲಿ ಸ್ಟಡಿ ಲ್ಯಾಂಪ್ಗಳನ್ನು ವಿತರಣೆ ಮಾಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.