ನವದೆಹಲಿ: ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್ಸಿ) ಮೂಲಕ ರಾಷ್ಟ್ರವ್ಯಾಪಿ ನಡೆಸಲಾಗುತ್ತಿರುವ 7 ನೇ ಆರ್ಥಿಕ ಗಣತಿಯನ್ನು ಮಾರ್ಚ್ 2020 ರೊಳಗೆ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಅಂಕಿ-ಅಂಶ ಕಚೇರಿ ಮಹಾನಿರ್ದೇಶಕ ಎ ಕೆ ಸಾಧು ತಿಳಿಸಿದ್ದಾರೆ.
ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) 7 ನೇ ಆರ್ಥಿಕ ಗಣತಿಗಾಗಿ ಸಿಎಸ್ಸಿ ಇ-ಆಡಳಿತ ಸೇವೆಯೊಂದಿಗೆ ಕೈಜೋಡಿಸಿದೆ. ದೆಹಲಿಯಲ್ಲಿ ಶುಕ್ರವಾರ ಈ ಸಮೀಕ್ಷೆಯನ್ನು ಪ್ರಾರಂಭಿಸಲಾಯಿತು.
ಮೊದಲ ಬಾರಿಗೆ, ಸಂಪೂರ್ಣ ಗಣತಿಯನ್ನು ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಹೆಚ್ಚಿನ ನಿಖರತೆ ಮತ್ತು ಡೇಟಾ ಸುರಕ್ಷತೆಯನ್ನು ಖಾತ್ರಿಪಡಿಸುವ ಅಪ್ಲಿಕೇಶನ್ನ ಬಳಕೆಯಿಂದ ನಡೆಸಲಾಗುತ್ತಿದೆ.
“ದೆಹಲಿಯಲ್ಲಿ, ಇಡೀ ಪ್ರಕ್ರಿಯೆಯು ಪೂರ್ಣಗೊಳ್ಳಲು ಸುಮಾರು ಮೂರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ, ಅಲ್ಲಿ ಗಣತಿ ನಡೆಸುವವರು ಸುಮಾರು 45 ಲಕ್ಷ ಸಂಸ್ಥೆಗಳು ಮತ್ತು ಮನೆಗಳನ್ನು ಸಮೀಕ್ಷೆ ಮಾಡಲಿದ್ದಾರೆ” ಎಂದು ಸಾಧು ದೆಹಲಿಯ ಸಮೀಕ್ಷೆಯನ್ನು ಆರಂಭಿಸಿದ ನಂತರ ಹೇಳಿದರು.
ಸಮೀಕ್ಷೆಯನ್ನು ಪ್ರಾರಂಭಿಸಿದ 26 ನೇ ರಾಜ್ಯ ದೆಹಲಿಯಾಗಿದ್ದು, ಈಗಾಗಲೇ 20 ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಾಧು ಹೇಳಿದ್ದಾರೆ.
ಆಳವಾದ ಸಮೀಕ್ಷೆ ಮತ್ತು ದತ್ತಾಂಶ ಸಂಕಲನವನ್ನು ಒಳಗೊಂಡ ಬೃಹತ್ ಕಾರ್ಯವನ್ನು ಈ ಗಣತಿಯು ಒಳಗೊಂಡಿದೆ. 1977 ರಲ್ಲಿ ಪ್ರಾರಂಭವಾದ ಈ ಗಣತಿ ಇದುವರೆಗೆ ಕೇವಲ ಆರು ಬಾರಿ ಮಾತ್ರ ನಡೆದಿದೆ.
ಡಿಜಿಟಲ್ ಪ್ಲಾಟ್ಫಾರ್ಮ್ ಬಳಸಿ ಆರ್ಥಿಕ ಜನಗಣತಿಯನ್ನು ನಡೆಸುತ್ತಿರುವುದು ಇದೇ ಮೊದಲು, ಇದು ಸಮೀಕ್ಷೆಯ ಸಮಯವನ್ನು ಎರಡು ವರ್ಷಗಳಿಂದ ಆರು ತಿಂಗಳುಗಳ ಅವಧಿಗೆ ಇಳಿಸಲಿದೆ.
ಆರ್ಥಿಕ ಗಣತಿ ನಡೆಸುವ ಸಲುವಾಗಿ 1.5 ಲಕ್ಷಕ್ಕೂ ಅಧಿಕ ತರಬೇತಿ ಹೊಂದಿದ ಜನರನ್ನು ನಿಯೋಜನೆಗೊಳಿಸಲಾಗಿದೆ. ಇವರುಗಳು ದೇಶವ್ಯಾಪಿಯಾಗಿ 35 ಕೋಟಿ ಸಂಸ್ಥೆಗಳು ಮತ್ತು ಮನೆಗಳಿಗೆ ಭೇಟಿ ನೀಡಿ ಗಣತಿಯನ್ನು ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.