News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬೆಂಗಳೂರು: ಸಾರಿಗೆ ನಿಯಮ ಉಲ್ಲಂಘನೆ ತಡೆಗೆ ಆಳೆತ್ತರದ ಪೊಲೀಸ್ ವೇಷಧಾರಿ ಗೊಂಬೆ ನಿಯೋಜನೆ

ಬೆಂಗಳೂರು: ಬೆಂಗಳೂರು ಸಾರಿಗೆ ಪೊಲೀಸರು ಸಾರಿಗೆ ನಿಮ್ಮ ಉಲ್ಲಂಘನೆ ಪ್ರಕರಣಗಳನ್ನು ತಗ್ಗಿಸುವ ಸಲುವಾಗಿ ಪ್ರಮುಖ ಜಂಕ್ಷನ್­ಗಳಲ್ಲಿ ಆಳೆತ್ತರದ ಪೊಲೀಸ್ ಸಮವಸ್ತ್ರಧಾರಿ ಗೊಂಬೆಗಳನ್ನು ನಿಯೋಜನೆಗೊಳಿಸಿದ್ದಾರೆ.

ರಿಫ್ಲೆಕ್ಟರ್ ಜಾಕೆಟ್, ಬಿಳಿ ಶರ್ಟ್, ಖಾಕಿ ಪ್ಯಾಂಟ್, ಬಿಳಿ ಹ್ಯಾಟ್ ಮತ್ತು ಕಪ್ಪು ಶೂ ಧರಿಸಿದ ಮ್ಯಾನಿಕ್ವಿನ್ ಅನ್ನು ನಗರದ ವಿವಿಧ ಜಂಕ್ಷನ್­ಗಳಲ್ಲಿ ನಿಯೋಜನೆಗೊಳಿಸಿದ್ದಾರೆ.

ಈ ಮ್ಯಾನಿಕ್ವಿನ್‌ಗಳಿಗೆ ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆ ಇದೆ ಎಂದು ಬೆಂಗಳೂರು ನಗರ ಜಂಟಿ ಸಾರಿಗೆ ಪೊಲೀಸ್ ಆಯುಕ್ತ ಡಾ. ಬಿ ಆರ್ ರವಿಕಾಂತೇಗೌಡ ಹೇಳಿದ್ದಾರೆ.

“ನಮ್ಮ ಈ ಕಾರ್ಯಕ್ಕೆ ಜನರಿಂದ ಸಕಾರಾತ್ಮಕ ಸ್ಪಂದನೆಗಳು ವ್ಯಕ್ತವಾಗುತ್ತಿವೆ. ಮ್ಯಾನಿಕ್ವಿನ್ ಜೊತೆಗೆ ಜನರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಭವಿಷ್ಯದಲ್ಲಿ ಈ ಗೊಂಬೆಗಳಿಗೆ ನಾವು ಕ್ಯಾಮರಾ ಅಳವಡಿಸುವ ಯೋಜನೆಯನ್ನು ಹಾಕಿಕೊಳ್ಳುತ್ತಿದ್ದೇವೆ. ಇದರಿಂದ ಸಾರಿಗೆ ನಿಯಮ ಉಲ್ಲಂಘನೆಗಳನ್ನು ಇವುಗಳು ರೆಕಾರ್ಡ್ ಮಾಡಲು ಸಾಧ್ಯವಾಗಲಿದೆ. ಸಂಪರ್ಕರಹಿತ ಕ್ರಮ ಇದರಿಂದ ಸಾಧ್ಯವಾಗಲಿದೆ” ಎಂದು ಅವರು ಹೇಳಿದ್ದಾರೆ.

ಸಾರಿಗೆ ನಿಯಮ ಉಲ್ಲಂಘಿಸುವವರನ್ನು ಹತ್ತಿಕ್ಕುವ ಪ್ರಯತ್ನವನ್ನು ನಿಯೋಜನೆಗೊಂಡಿರುವ ಸಮವಸ್ತ್ರಧಾರಿ ಮ್ಯಾನಿಕ್ವಿನ್‌ಗಳು ಮಾಡಲಿವೆ ಎಂದು ಜನರು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಈ ಮ್ಯಾನಿಕ್ವಿನ್‌ಗಳು ಪೊಲೀಸರಂತೆ ಕಂಡುಬರುವ ಹಿನ್ನೆಲೆಯಲ್ಲಿ ಜನರು ಪೊಲೀಸರು ಎಂದೇ ಭಾವಿಸಿ ಸಾರಿಗೆ ನಿಯಮವನ್ನು ಪಾಲನೆ ಮಾಡಲಿದ್ದಾರೆ ಎಂದು ಜನರು ಹೇಳುತ್ತಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top