ನವದೆಹಲಿ: ಭಾರತಕ್ಕೆ ವಿಶಾಲ ಹೃದಯವಿದೆ, ಕಠಿಣ ಸಂದರ್ಭಗಳಲ್ಲಿ ಅದು ಮಾಲ್ಡೀವ್ಸ್ಗೆ ಬೆಂಬಲವನ್ನು ನೀಡುತ್ತಾ ಬಂದಿದೆ ಎಂದು ಭಾರತ ಪ್ರವಾಸದಲ್ಲಿರುವ ಮಾಲ್ಡಿವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಹೀದ್ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, “ಮಾಲ್ಡಿವ್ಸ್ ಹಿಂದೆ ಅನುಭವಿಸಿದ ಕಷ್ಟದ ಪರಿಸ್ಥಿತಿಗಳನ್ನು ಮತ್ತು ಅದಕ್ಕೆ ಸಹಾಯ ಮಾಡಲು ಮುಂದೆ ಬಂದ ರಾಷ್ಟ್ರಗಳ ಬಗ್ಗೆ ಒಂದು ಬಾರಿ ಮೆಲುಕು ಹಾಕಿದರೆ ಮೊದಲು ಕಣ್ಣಮುಂದೆ ಬರುವ ರಾಷ್ಟ್ರ ಭಾರತ. ಪ್ರತಿಬಾರಿಯೂ ಭಾರತ ಮಾಲ್ಡೀವ್ಸ್ಗೆ ಸಹಾಯ ಮಾಡಲು ಮುಂದೆ ಬಂದಿದೆ” ಎಂದಿದ್ದಾರೆ.
ಭಾರತ ಮತ್ತು ಮಾಲ್ಡಿವ್ಸ್ ಅತ್ಯದ್ಭುತವಾದ ಸಂಬಂಧವನ್ನು ಹೊಂದಿದೆ ಎಂಬುದನ್ನು ಪುನರುಚ್ಚರಿಸಿದ ಅವರು, ” ನಾವು ಜೊತೆಯಾಗಿದ್ದಾರೆ ಎಲ್ಲವೂ ಸಾಧ್ಯ ಎಂಬುದನ್ನು ಕಳೆದ ವರ್ಷಗಳಲ್ಲಿ ಎರಡು ರಾಷ್ಟ್ರಗಳ ಸರ್ಕಾರಗಳು ಮತ್ತು ಜನರು ತೋರಿಸಿಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಮಾಲ್ಡಿವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸೊಲಿಹ್ ಅವರು 2018 ರ ಡಿಸೆಂಬರ್ 17ರಂದು ನವದೆಹಲಿಯಲ್ಲಿ ಇದ್ದರು. ತಮ್ಮ ಮರುಆಯ್ಕೆ ಬಳಿಕ ಮೋದಿಯವರು ಮಾಲೆಯಲ್ಲಿ ಸೊಲಿಹ್ ಅವರನ್ನು ಭೇಟಿಯಾದರು. ನಂತರ ನ್ಯೂಯಾರ್ಕ್ ನಲ್ಲಿ ಇಬ್ಬರು ಭೇಟಿಯಾದರು” ಎಂದಿದ್ದಾರೆ.
ಭಾರತ ಮತ್ತು ಮಾಲ್ಡಿವ್ಸ್ ನಡುವನ ಜಂಟಿ ಆಯೋಗದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ಶಹೀದ್ ಭಾರತಕ್ಕೆ ಆಗಮಿಸಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನೂ ಶಹೀದ್ ಭೇಟಿಯಾಗಲಿದ್ದಾರೆ.
“ಭಾರತ ಮತ್ತು ಮಾಲ್ಡೀವ್ಸ್ ನಡುವಣ ಜಂಟಿ ಆಯೋಗದಲ್ಲಿ ಭಾಗ್ಯ ಆಗುವ ಸಲುವಾಗಿ ನಾನು ಭಾರತಕ್ಕೆ ಬಂದಿದ್ದೇನೆ. ಎರಡು ವರ್ಷಗಳಿಗೊಮ್ಮೆ ಆಯೋಗವು ಸಭೆ ಸೇರುತ್ತದೆ. ಕೊನೆಯ ಬಾರಿಗೆ 2015ರಲ್ಲಿ ಸಭೆ ನಡೆಸಲಾಗಿದೆ. ಕೆಲವೊಂದು ಕಾರಣಗಳಿಂದಾಗಿ ಸಭೆಯು ವಿಳಂಬವಾಗಿದೆ. ದ್ವಿಪಕ್ಷೀಯ ಸಂಬಂಧವನ್ನು ಅತ್ಯಂತ ರಚನಾತ್ಮಕ ರೀತಿಯಲ್ಲಿ ಹೊಂದಲು ಆಯೋಗವು ಅತ್ಯಂತ ಪ್ರಮುಖವಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.