News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಕ್ಟೋಬರ್-ಮಾರ್ಚ್‌ನಲ್ಲಿ ಶೇ. 7.12ರಷ್ಟು ಪ್ರಗತಿ ಕಾಣಲಿದೆ ಭಾರತದ ಉದ್ಯೋಗ ಸೃಷ್ಟಿ

ನವದೆಹಲಿ: 2019-20ರ ಹಣಕಾಸು ವರ್ಷದ ಎರಡನೇ ಭಾಗದಲ್ಲಿ ಭಾರತದ ಉದ್ಯೋಗ ಸೃಷ್ಟಿಯೂ ಶೇಕಡ 7.12 ರಷ್ಟು ಪ್ರಗತಿಯನ್ನು ಕಾಣಲಿದೆ ಎಂದು ವರದಿಗಳು ಹೇಳಿವೆ.

ಹ್ಯೂಮನ್ ರಿಸೋರ್ಸ್ ಕಂಪನಿ ಟೀಮ್‌ಲೀಸ್ 2019ರ ಅಕ್ಟೋಬರ್ ಮತ್ತು ಮಾರ್ಚ್ 2020ರ  ನಡುವಣ ತನ್ನ ದ್ವೈವಾರ್ಷಿಕ ಉದ್ಯೋಗ ಹೊರನೋಟ ವರದಿಯಲ್ಲಿ, ಕೇಂದ್ರವೂ ತಂದ ಸುಧಾರಣಾ ಕ್ರಮಗಳಿಂದ ಸಮೀಕ್ಷೆಗೊಳಪಟ್ಟ 19 ಉದ್ಯೋಗ ವಲಯಗಳ ಪೈಕಿ 7 ವಲಯಗಳು ಸಕಾರಾತ್ಮಕ ಬೆಳವಣಿಗೆಯನ್ನು ತೋರಿಸಿದೆ ಎಂದು ಉಲ್ಲೇಖಿಸಿದೆ. ಆದರೆ ಒಂಬತ್ತು ವಲಯಗಳು ಕಡಿಮೆ ಪ್ರಗತಿಯನ್ನು ದಾಖಲಿಸಿದೆ.

2019-20 ರ ಹಣಕಾಸು ವರ್ಷದ ಅಕ್ಟೋಬರ್‌ನಿಂದ ಮಾರ್ಚ್ ತಿಂಗಳ ನಡುವೆ ಎರಡನೇ ಭಾಗದಲ್ಲಿ ಶೇ.7.12ರಷ್ಟು ಪ್ರಗತಿಯನ್ನು ಕಾಣಲಿದೆ ಎಂದು ವರದಿ ಹೇಳಿದೆ.

ಆರೋಗ್ಯ ವಲಯ, ಫಾರ್ಮಸಿಟಿಕಲ್ಸ್, ಮಾಹಿತಿ ತಂತ್ರಜ್ಞಾನ, ಇ-ಕಾಮರ್ಸ್, ಟೆಕ್ ಸ್ಟಾರ್ಟ್ ಅಪ್, ಶೈಕ್ಷಣಿಕ ಸೇವೆ, ನಾಲೆಜ್ ಪ್ರಾಸೆಸ್ ಔಟ್‌ಸೋರ್ಸಿಂಗ್, ಪವರ್ ಆಂಡ್ ಎನರ್ಜಿ, ಲಾಜಿಸ್ಟಿಕ್ಸ್ ವಲಯಗಳು ಉದ್ಯೋಗ ಸೃಷ್ಟಿಯಲ್ಲಿ ಅತ್ಯಂತ ಸಕಾರಾತ್ಮಕ ಪ್ರಗತಿಯನ್ನು ದಾಖಲಿಸಿದೆ.

ಆರ್ಥಿಕತೆಯ ಏರಿಳಿತದ ನಡುವೆಯೂ ಭಾರತದಲ್ಲಿ ಉದ್ಯೋಗ ಸೃಷ್ಟಿಯೂ ಶೇಕಡ 7 ರಷ್ಟು ಪ್ರಗತಿಯನ್ನು ದಾಖಲಿಸಿದೆ ಎಂಬುದನ್ನು ವರದಿಯು ಉಲ್ಲೇಖಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top