ನವದೆಹಲಿ: ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವ ಗುರಿಯೊಂದಿಗೆ, ಭಾರತೀಯ ರೈಲ್ವೆ 2019 ರ ನವೆಂಬರ್ 28 ರಿಂದ ಜಾರಿಗೆ ಬರುವಂತೆ ಬಿಹಾರದ ಭಾರತೀಯ ರೈಲ್ ಬಿಜ್ಲಿ ಕಂಪನಿ ಲಿಮಿಟೆಡ್ (ಬಿಆರ್ಬಿಸಿಎಲ್) ನಿಂದ ಹೆಚ್ಚುವರಿ 50 ಮೆಗಾವ್ಯಾಟ್ ವಿದ್ಯುತ್ (ಒಟ್ಟು 100 ಮೆಗಾವ್ಯಾಟ್) ಹರಿವನ್ನು ಪ್ರಾರಂಭಿಸಿದೆ. ಇದು ಮರುಕಳಿಸುವ ಆಧಾರದ ಮೇಲೆ ವಾರ್ಷಿಕ 110 ಕೋಟಿ ರೂಪಾಯಿ ಉಳಿತಾಯ ಮಾಡಲಿದೆ.
ಬಿಆರ್ಬಿಸಿಎಲ್ನಿಂದ ಹೆಚ್ಚುವರಿ 10 ಮೆಗಾವ್ಯಾಟ್ ವಿದ್ಯುತ್ ಹರಿವು ರಾಜಸ್ಥಾನದಲ್ಲಿ ನವೆಂಬರ್ 20 ರಿಂದ ಆರಂಭವಾಗಿದ್ದು, ಇದು ವಾರ್ಷಿಕ ರೂ.11.50 ಕೋಟಿ ಉಳಿತಾಯ ಮಾಡಲಿದೆ.
ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೋಮವಾರ ಈ ಬಗ್ಗೆ ಟ್ವಿಟ್ ಮಾಡಿದ್ದು, “ವಿದ್ಯುತ್ ಬಿಲ್ ಕಡಿತಗೊಳಿಸಲು ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ರೈಲ್ವೆ ನಿರ್ಣಾಯಕ ಹೆಜ್ಜೆ ಇಡುತ್ತಿದೆ. ಬಿಹಾರ ಮತ್ತು ರಾಜಸ್ಥಾನಗಳಿಂದ ಹೆಚ್ಚುವರಿ ವಿದ್ಯುತ್ ಹರಿವನ್ನು ರೈಲ್ವೆ ಭದ್ರಪಡಿಸಿದ್ದು, ವಾರ್ಷಿಕವಾಗಿ 121 ಕೋಟಿ ರೂಪಾಯಿಗಳ ಉಳಿತಾಯ ಮಾಡುತ್ತಿದೆ” ಎಂದಿದ್ದಾರೆ.
ಭಾರತೀಯ ರೈಲ್ವೆ ಸುಮಾರು 1475 ಮೆಗಾವ್ಯಾಟ್ ವಿದ್ಯುತ್ ಅನ್ನು 11 ರಾಜ್ಯಗಳಿಂದ ಮತ್ತು ದಾಮೋದರ್ ವ್ಯಾಲಿ ಕಾರ್ಪೊರೇಷನ್ (ಡಿವಿಸಿ) ಪ್ರದೇಶದಿಂದ ಡೀಮ್ಡ್ ಲೈಸೆನ್ಸಿಯಾಗಿ ಮುಕ್ತ ಪ್ರವೇಶದಿಂದ ತೆಗೆದುಕೊಳ್ಳುತ್ತದೆ. ಈ ಪ್ರಯತ್ನಗಳು ವಾರ್ಷಿಕ 3600 ಕೋಟಿ ರೂಪಾಯಿ ಉಳಿತಾಯ ಮಾಡುತ್ತದೆ. ಸಾಮಾನ್ಯ ಮಾದರಿಯ ವ್ಯವಹಾರದ ಅಡಿಯಲ್ಲಿ ನವೆಂಬರ್ 2015 ರಿಂದ ಜಾರಿಗೆ ಬರುವಂತೆ ಮುಕ್ತ ಪ್ರವೇಶದ ಅಡಿಯಲ್ಲಿ ವಿದ್ಯುತ್ ಹರಿವು ಪ್ರಾರಂಭವಾದಾಗಿನಿಂದ, ಉಳಿತಾಯ ಒಟ್ಟು ರೂ. 12400 ಕೋಟಿ ರೂಪಾಯಿಗಳಿಗೆ ಏರಿದೆ.
ಭಾರತೀಯ ರೈಲ್ ಬಿಜ್ಲಿ ಕಂಪನಿ ಲಿಮಿಟೆಡ್ (ಬಿಆರ್ಬಿಸಿಎಲ್)ಯು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್ಟಿಪಿಸಿ) ಮತ್ತು ರೈಲ್ವೆ ಸಚಿವಾಲಯದ ಜಂಟಿ ಉದ್ಯಮ ಕಂಪನಿಯಾಗಿದ್ದು, ಕಡಿಮೆ ವೆಚ್ಚದಲ್ಲಿ ರೈಲ್ವೆಗೆ ಟ್ರ್ಯಾಕ್ಷನ್ ಉದ್ದೇಶಕ್ಕಾಗಿ ವಿದ್ಯುತ್ ಉತ್ಪಾದಿಸುತ್ತದೆ.
ನಾಲ್ಕು ಘಟಕಗಳಲ್ಲಿ (ತಲಾ 250 ಮೆಗಾವ್ಯಾಟ್), ಮೂರು ಘಟಕಗಳಿಂದ ವಿದ್ಯುತ್ ಹರಿವನ್ನು ಈಗಾಗಲೇ ಭಾರತೀಯ ರೈಲ್ವೆಗೆ ಪ್ರಾರಂಭಿಸಲಾಗಿದೆ. ಮೊದಲ ಘಟಕವು 2017 ರ ಜನವರಿಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.