ಪುಣೆ: ಪ್ರತಿ ಕುಟುಂಬವು ಗೋ ಸಾಗಾಣಿಕೆಯನ್ನು ಮಾಡಿದರೆ ಸಮಾಜದಲ್ಲಿ ಮಹತ್ತರವಾದ ಪರಿವರ್ತನೆಯನ್ನು ತರಲು ಸಾಧ್ಯವಾಗಬಲ್ಲದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರಾದ ಮೋಹನ್ ಭಾಗವತ್ ಹೇಳಿದ್ದಾರೆ.
ಪುಣೆಯಲ್ಲಿ ಜರುಗಿದ ಶ್ರದ್ಧೇಯ ಮೋರೋಪಂಥ್ ಪಿಂಗಲೆ ಗೋ ಸೇವಾ ಪುರಸ್ಕಾರ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಗೋವು ಸಾಕಾಣಿಕೆಯಿಂದ ಸಮಾಜದಲ್ಲಿ ಮಹತ್ತರವಾದ ಪರಿವರ್ತನೆ ಆಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
“ಒಂದು ವೇಳೆ ಪ್ರತಿ ಕುಟುಂಬವು ಗೋವನ್ನು ಸಾಕಿದರೆ ಮತ್ತು ಪೋಷಿಸಿದರೆ ದೇಶವು ಮಹತ್ತರ ಪರಿವರ್ತನೆಗೆ ಸಾಕ್ಷಿಯಾಗಲಿದೆ. ಇಡೀ ಸಮಾಜವೇ ಜಾಗೃತವಾಗಿ ಮಾನವ ಬದುಕಿನಲ್ಲಿ ಪರಿವರ್ತನೆಯಾಗಬಲ್ಲದು. ಭಾರತೀಯ ಸಂಸ್ಕೃತಿಯಲ್ಲಿ ಗೋವನ್ನು ವಿಶ್ವ ಮಾತಾ ಎಂದು ಪರಿಗಣಿಸಲಾಗುತ್ತದೆ. ನಮ್ಮ ಸಂಸ್ಕೃತಿಯು ಗೋವನ್ನು ಕಾಮಧೇನು ಆಗಿ ನೋಡುತ್ತದೆ. ಇದೇ ಗೋವನ್ನು ವಧಾಗಾರಕ್ಕೆ ಕೊಂಡೊಯ್ಯುವ ಹಿಂದುಗಳೂ ಇದ್ದಾರೆ” ಎಂದು ಭಾಗವತ್ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವತ್ ಅವರು, ಗೋ ಸೇವೆಯಲ್ಲಿ ನಿರತರಾದ ಹಲವಾರು ಸಂಘ ಸಂಸ್ಥೆಗಳನ್ನು ಮತ್ತು ವ್ಯಕ್ತಿಗಳನ್ನು ಪುರಸ್ಕರಿಸಿದರು. ಒಂದು ಲಕ್ಷ ರೂಪಾಯಿ ನಗದು ಬಹುಮಾನ, ಸ್ಮರಣಿಕೆ, ಶಾಲುಗಳನ್ನು ನೀಡಿ ಸನ್ಮಾನಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.