ನವದೆಹಲಿ: ದೇಶದಾದ್ಯಂತದ 5500 ರೈಲ್ವೇ ನಿಲ್ದಾಣಗಳಿಗೆ ಉಚಿತ ವೈಫೈಗಳನ್ನು ಒದಗಿಸಲಾಗಿದೆ ಎಂದು ರಾಷ್ಟ್ರೀಯ ಸಾರಿಗೆಯ ಡಿಜಿಟಲ್ ಅಂಗ ರೈಲ್ಟೆಲ್ ಹೇಳಿದೆ. ಈಸ್ಟ್ ಸೆಂಟ್ರಲ್ ರೈಲ್ವೆ ವಲಯದ ಅಧೀನಕ್ಕೆ ಬರುವ ಜಾರ್ಖಂಡಿನ ಮಹುಮಿಲನ್ ರೈಲು ನಿಲ್ದಾಣ ಉಚಿತ ವೈಫೈ ಸೌಲಭ್ಯ ಪಡೆದ ದೇಶದ 5,500ನೇ ರೈಲು ನಿಲ್ದಾಣವಾಗಿ ಹೊರಹೊಮ್ಮಿದೆ.
2016ರ ಜನವರಿಯಿಂದ ಮುಂಬೈ ಸೆಂಟ್ರಲ್ ಸ್ಟೇಷನ್ ಮೂಲಕ ರೈಲ್ವೆಯು ಉಚಿತ ವೈಫೈ ಸೇವೆಯನ್ನು ಒದಗಿಸುವ ಕಾರ್ಯವನ್ನು ಆರಂಭಿಸಿತು. ಇದೀಗ 46 ತಿಂಗಳುಗಳ ಅವಧಿಯಲ್ಲಿ ರೈಲ್ಟೆಲ್ 5500 ರೈಲು ನಿಲ್ದಾಣಗಳಿಗೆ ಉಚಿತ ವೈಫೈ ಸೇವೆಯನ್ನು ಒದಗಿಸುವ ಕಾರ್ಯವನ್ನು ಮಾಡಿ ಪೂರೈಸಿದೆ.
ಗೂಗಲ್, ಟಾಟಾ ಟ್ರಸ್ಟ್, ಪಿಜಿಸಿಐಎಲ್ ಮುಂತಾದವುಗಳನ್ನು ರೈಲ್ಟೆಲ್ ಹಲವು ಭಾಗಗಳಲ್ಲಿ ಯೋಜನೆಯ ಭಾಗವನ್ನಾಗಿ ಮಾಡಿದೆ. ಮಾತ್ರವಲ್ಲದೆ 200 ನಿಲ್ದಾಣಗಳಿಗೆ ಟೆಲಿಕಾಂ ಯುಎಸ್ಂಎಫ್ ಇಲಾಖೆಯಿಂದ ಫಂಡಿಂಗ್ ಮಾಡಿಸುತ್ತಿದೆ. ರೈಲ್ವೈರ್ ಎನ್ನುವ ಬ್ರಾಂಡ್ ಹೆಸರಿನ ಮೂಲಕ ಉಚಿತ ವೈಫೈ ಸೇವೆಯನ್ನು ಒದಗಿಸಲಾಗುತ್ತಿದೆ. ಇದು ರೈಲ್ಟೆಲ್ನ ಬ್ರಾಡ್ ಬ್ಯಾಂಡ್ ಸೇವೆ ಆಗಿದೆ.
2019ರ ಅಕ್ಟೋಬರ್ ತಿಂಗಳಲ್ಲಿ ರೈಲ್ವೈರ್ ವೈಫೈ ಸೇವೆಗೆ 1.5 ಕೋಟಿ ಜನರು ಲಾಗಿನ್ ಆಗಿದ್ದಾರೆ. ಎಲ್ಲಾ ನಿಲ್ದಾಣಗಳಲ್ಲಿ 10242TB ಡಾಟಾ ವ್ಯಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.