ಬೆಳ್ತಂಗಡಿ : ಪಂಚಾಯತ್ರಾಜ್ನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ರಮೇಶ್ ಕುಮಾರ್ ವರದಿಯನ್ನು ಸರಕಾರ ಕೂಡಲೇ ಸ್ವೀಕರಿಸುವಂತೆ ಜನಪ್ರತಿನಿಧಿಗಳು ಒತ್ತಾಯಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶನಿವಾರ ಚಾರ್ಮಾಡಿ ಪಂಚಾಯತ್ ಸಭಾಭವನದಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ, ಮಂಗಳೂರು ಸೈಂಟ್ ಆಗ್ನೆಸ್ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಪಂಚಾಯತ್ಗಳ ನೂತನ ಸದಸ್ಯರ ಅಭಿನಂದನ-ತರಬೇತಿ ಹಾಗು ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಕೂಡಿದುಡಿಯುವ ಪ್ರೇರಣಾ ಶಿಬಿರನ್ನು ಉದ್ಘಾಟಿಸಿ ಮಾತನಾಡಿದರು.
ಸಾಂಸದರಿಂದ ಹಿಡಿದುಗ್ರಾಮ ಪಂ.ಸದಸ್ಯರ ತನಕ ರಾಜ್ಯದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನಪ್ರತಿನಿಧಿಗಳಿದ್ದಾರೆ.ಇವರೆಲ್ಲರೂ ವಿಧಾನಸೌಧದ ಮುಂದೆ ಒಕ್ಕೂರಲಿನಿಂದ ರಮೇಶ್ಕುಮಾರ್ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದರೆ ಕ್ಷಣ ಮಾತ್ರದಲ್ಲಿ ಸರಕಾರ ವರದಿಯನ್ನು ಸ್ವೀಕರಿಸಲೇ ಬೇಕಾಗುತ್ತದೆ ಎಂದರು.
ಗ್ರಾ.ಪಂ.ಸದಸ್ಯರು ಪಂ.ಸಭೆಗಳಲ್ಲಿ ಅಭಿವೃದ್ದಿಯ ಹೊರತಾಗಿ ರಾಜಕೀಯ ಮಾಡಿದರೆ ಆ ಸಭೆ ವಿಧಾನಸಭೆಗಿಂತಲೂ ಕೆಳಮಟ್ಟದ್ದಾಗುತ್ತದೆ. ಸದಸ್ಯರು ಪಂ.ನ್ನುತನ್ನ ಮನೆಯೆಂಬಂತೆ ಸ್ವೀಕರಿಸಿ ಗ್ರಾಮದ ಮೂಲಭೂತ ಸಮಸ್ಯೆಗಳ ಕಡೆಗೆ ಗಮನ ಕೊಡಬೇಕು. ಎಲ್ಲರೂ ಪಂ.ನಿಯಮಗಳನ್ನು ಕೂಲಂಕುಷ ಅಧ್ಯಯನ ಮಾಡಿ. ಅಧಿಕಾರ ವಿಕೇಂದ್ರಿಕರಣ ಆಡಳಿತವೆಂದರೆ ದೆಹಲಿ, ಬೆಂಗಳೂರಿನಿಂದಲ್ಲ. ಗ್ರಾಮ ಸಭೆಯಿಂದ ಶಿಫಾರಸ್ಸು ಪಡೆದು ಮುಂದಕ್ಕೆ ಹೋಗಬೇಕು. ಸಂಸದ, ಶಾಸಕರಿಗೆಇರುವಷ್ಟೇ ಹಕ್ಕು, ಅಧಿಕಾರಗೌರವ ಪಂ.ಸದಸ್ಯರಿಗೂ ಇದೆ. ಸದಸ್ಯರು ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ ಎಂದರು.
ಮನೆಯಲ್ಲಿ ತನ್ನ ಕುಟುಂಬದವರಿಗೆ ಅಡುಗೆ ಮಾಡುತ್ತಿದ್ದ, ಯಾರದೋ ಕೊಟ್ಟಿಗೆಗೆ ಸೆಗಣಿ ಬಳಿದು ದಿನ ದೂಡುತ್ತಿದ್ದ ಸಹೋದರಿಯರು ಇಂದು ಪಂ.ಅಧ್ಯಕ್ಷ, ಸದಸ್ಯರಾಗಿದ್ದಾರೆ. ಇದು ಪ್ರಜಾಪ್ರಭುತ್ವದ ಸೊಬಗು ಎಂದು ವಿಶ್ಲೇಷಿದ ಕೋಟ ಅವರು ಜನರಿಂದ ಆಯ್ಕೆಯಾಗಿದ್ದ ರೂತಾವು ಏನೂ ಮಾಡಬಹುದೆಂಬ ಹಕ್ಕು ಸದಸ್ಯರಿಗಿಲ್ಲ ಎಂದು ಎಚ್ಚರಿಸಿದರು. ಈ ಸಂದರ್ಭ ಅವರು ಮುಂಡಾಜೆ ಸಹಕಾರಿ ಬ್ಯಾಂಕಿನ ಜೀರೋ ಬ್ಯಾಲೆನ್ಸ್ ಉಳಿತಾಯ ಖಾತೆ ಅಭಿಯಾನಕ್ಕೆ ಚಾಲನೆ ನೀಡಿದರು.
ಅಧ್ಯಕ್ಷತೆಯನ್ನು ಮುಂಡಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಎಸ್.ಗೋಖಲೆ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ.ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ.ಸದಸ್ಯರಾದ ಸರೋಜಿನಿ, ಹೇಮಾವತಿ, ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್.ಕುಲಾಲ್, ಸಹಕಾರಿ ಸಂಘದ ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು. ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಚಂದ್ರಮೋಹನ ಮರಾಠೆ ಕಾರ್ಯಕ್ರಮ ನಿರ್ವಹಿಸಿದರು.
ಪಂಚಾಯತ್ ಸದಸ್ಯರಿಗೆ ಸರಕಾರತರ ಬೇತಿ ವ್ಯವಸ್ಥೆ ಮಾಡುತ್ತದೆ.ಈ ಬಾರಿಜಿಲ್ಲಾ ಮಟ್ಟದಲ್ಲಿ ಅಥವಾ ಹೋಬಳಿ ಮಟ್ಟದಲ್ಲಿ ತರಬೇತಿ ನಡೆಯಲಿದೆ. ತರಬೇತಿಯಲ್ಲಿ ಎಲ್ಲಾ ಸದಸ್ಯರು ಕಡ್ಡಾಯವಾಗಿ, ಪೂರ್ಣಪ್ರಮಾಣದಲ್ಲಿ ಭಾಗವಹಿಸಬೇಕು. ಪ್ರಶ್ನೆ ಕೇಳಬೇಕು. ಇದುಅನುಭವ, ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮತ್ತು ಮುಂದಿನ ಕಾರ್ಯನಿರ್ವಹಣೆಗೆಆಧಾರ ಸ್ಥಂಭ- ಕೋಟ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.