ಪೊಖರ: ನೇಪಾಳದ ಅಂಜಲಿ ಚಾಂದ್ ಅವರು ಸೋಮವಾರ ಮಾಲ್ಡಿವ್ಸ್ ವಿರುದ್ಧದ T20 ಪಂದ್ಯದಲ್ಲಿ ಒಂದೂ ರನ್ ನೀಡದೆ 6 ವಿಕೆಟ್ಗಳನ್ನು ಪಡೆಯುವ ಮೂಲಕ ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ.
ಸೌತ್ ಏಷ್ಯನ್ ಗೇಮ್ಸ್ ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಮಾಲ್ಡೀವ್ಸ್ ಮೊದಲು ಬ್ಯಾಟಿಂಗ್ ಅನ್ನು ಮಾಡಿತು. ನೇಪಾಳದ ಬೌಲರ್ಗಳ ಎದುರು ಮಾಲ್ಡಿವ್ಸ್ ಬ್ಯಾಟಿಂಗ್ ಪಟುಗಳು ಒದ್ದಾಡಿದರು.
ಈ ಪಂದ್ಯದಲ್ಲಿ 2.1 ಓವರ್ ಬೌಲಿಂಗ್ ಮಾಡಿದ ಅಂಜಲಿ ಒಂದೇ ಒಂದು ರನ್ ಗಳಿಸಲು ನೀಡದೆ ಆರು ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದು ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಅತ್ಯುತ್ತಮ ಸಾಧನೆಯಾಗಿದೆ.
ಅಂಜಲಿ ಅವರ ಸಾಧನೆಯ ಫಲವಾಗಿ ನೇಪಾಳ ಪಂದ್ಯವನ್ನು ಗೆದ್ದುಕೊಂಡಿದೆ.
ಈ ಟೂರ್ನಿಯಲ್ಲಿ ನೇಪಾಳ ಮತ್ತು ಮಾಲ್ಡಿವ್ಸ್ ಮಾತ್ರವಲ್ಲದೇ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕೂಡ ಆಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.