ದುಬೈ : ವಿಶ್ವದ ಅತಿ ಉದ್ದದ ಹೂವಿನ ಕಾರ್ಪೆಟ್ ನಿರ್ಮಾಣ ಮಾಡುವ ಸಲುವಾಗಿ ಬೆಂಗಳೂರಿನಿಂದ ದುಬೈಗೆ 41 ಟನ್ ಮಾರಿಗೋಲ್ಡ್ (ಚೆಂಡು ಹೂವು) ಹೂಗಳನ್ನು ದುಬೈಗೆ ರಫ್ತು ಮಾಡಲಾಗಿದೆ.
ದುಬೈ ಫೆಸ್ಟಿವಲ್ ಸಿಟಿಯಲ್ಲಿ “ಫ್ಲವರ್ಸ್ ಆಫ್ ಟಾಲರೆನ್ಸ್”ನಲ್ಲಿ ಈ ಹೂಗಳನ್ನು ಹಾಕಲಾಗಿದೆ. ಇದು ಅತಿ ಉದ್ದದ ನೈಸರ್ಗಿಕ ಹೂಗಳ ಕಾರ್ಪೆಟ್ ಎಂಬ ಗಿನ್ನೆಸ್ ದಾಖಲೆಯನ್ನು ಮಾಡಿದೆ. ಬೆಂಗಳೂರು, ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಬೆಳೆದ ಹೂಗಳನ್ನು ದುಬೈಗೆ ಕಳುಹಿಸಿಕೊಡಲಾಗಿತ್ತು.
ದುಬೈನಲ್ಲಿ 5,426.65 ಚದರ ಅಡಿಯ ಕಾರ್ಪೆಟ್ಟನ್ನು ನಿರ್ಮಾಣ ಮಾಡಲಾಗಿದೆ. 2016ರಲ್ಲಿ ಇಟಲಿಯಲ್ಲಿ 3980.84 ಚದರಡಿಯ ಹೂವಿನ ಕಾರ್ಪೆಟ್ ಅನ್ನು ನಿರ್ಮಾಣ ಮಾಡಲಾಗಿತ್ತು. ಈ ದಾಖಲೆಯನ್ನು ಈಗ ದುಬೈ ಕಾರ್ಪೆಟ್ ಮುರಿದಿದೆ.
ಶುಕ್ರವಾರ ಡಿಎಚ್ಎಲ್ ಗ್ಲೋಬಲ್ ಫಾರ್ವರ್ಡಿಂಗ್ ಬೆಂಗಳೂರಿನಿಂದ ಚಾರ್ಟೆಡ್ ಬೋಯಿಂಗ್ 777 ಫ್ರೈಟರ್ ಮೂಲಕ ದುಬೈಗೆ ಹೂವನ್ನು ಕಳುಹಿಸಿಕೊಟ್ಟಿತ್ತು. ಟೆಂಪರೇಚರ್ ಮಾನಿಟರಿಂಗ್ ಮೂಲಕ ಹೂವನ್ನು ಕೆಡದಂತೆ ತಾಜಾವಾಗಿ ಇಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
— India in Dubai (@cgidubai) November 26, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.