ನವದೆಹಲಿ: ಹಿಂದೂಗಳ ಪವಿತ್ರ ಚಾರ್ಧಾಮ್ ಯಾತ್ರಾ ಸ್ಥಳಗಳ ಬಾಗಿಲುಗಳನ್ನು ಚಳಿಗಾಲದ ಕಾರಣಕ್ಕಾಗಿ ಸೋಮವಾರ ಮುಚ್ಚಲಾಗಿದೆ. ಕೇದಾರನಾಥ, ಬದ್ರೀನಾಥ, ಯಮುನೋತ್ರಿ ಮತ್ತು ಗಂಗೋತ್ರಿಗಳಿಗೆ ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದಾರೆ. ಭಕ್ತಾದಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲು ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.
“ಈ ವರ್ಷ, 34 ಲಕ್ಷ 81 ಸಾವಿರಕ್ಕೂ ಹೆಚ್ಚು ಭಕ್ತರು ಚಾರ್ಧಾಮ್ ಮತ್ತು ಹೇಮಕುಂಡ್ ಸಾಹಿಬ್ಗೆ ಭೇಟಿ ನೀಡಿದ್ದಾರೆ. ಕೇದಾರನಾಥ ಮತ್ತು ಬದ್ರಿನಾಥ ದೇಗುಲಗಳಿಗೆ ಭೇಟಿ ನೀಡಿದ ಮೋದಿಯವರು ಎಲ್ಲಾ ಭಕ್ತರಿಗೆ ಸ್ವಚ್ಛ ಮತ್ತು ಸುರಕ್ಷಿತ ಚಾರ್ಧಾಮ್ ಯಾತ್ರೆಯ ಸಂದೇಶವನ್ನು ನೀಡಿದರು, ಇದು ಹೆಚ್ಚಿನ ಸಂಖ್ಯೆಯ ಯಾತ್ರಿಕರನ್ನು ಇಲ್ಲಿಗೆ ಕರೆತಂದಿತು ”ಎಂದು ರಾವತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
“ಚಾರ್ಧಾಮ್ ದೇಗುಲಗಳಿಗೆ ಭೇಟಿ ನೀಡಿದ ಎಲ್ಲಾ ಭಕ್ತರಿಗೂ, ಗಣ್ಯ ವ್ಯಕ್ತಿಗಳಿಗೂ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಯಾತ್ರೆಯನ್ನು ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿಸಿದ ಎಲ್ಲ ಭದ್ರತಾ ಪಡೆಗಳಿಗೂ, ಅಧಿಕಾರಿಗಳಿಗೂ, ಪೊಲೀಸರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ” ಎಂದಿದ್ದಾರೆ.
ಈ ವರ್ಷ 10 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ, ಬದ್ರಿನಾಥಕ್ಕೆ 12.44 ಲಕ್ಷ ಯಾತ್ರಿಕರು ಆಗಮಿಸಿದ್ದಾರೆ. ಯಮುನೋತ್ರಿಗೆ 4.65 ಲಕ್ಷ ಯಾತ್ರಾರ್ಥಿಗಳು ಮತ್ತು ಗಂಗೋತ್ರಿಗೆ 5.30 ಲಕ್ಷ ಯಾತ್ರಿಕರು ಆಗಮಿಸಿದ್ದಾರೆ. ಹೇಮಕುಂಡ್ ಸಾಹಿಬ್ನ ಸಿಖ್ ದೇವಾಲಯವು ಈ ವರ್ಷ 2.40 ಲಕ್ಷ ಯಾತ್ರಾರ್ಥಿಗಳನ್ನು ಕಂಡಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.