ಕಾಬೂಲ್: ಅಫ್ಘಾನಿಸ್ಥಾನದ ಉತ್ತರ ಕುಂದೂಝ್ ಪ್ರಾಂತ್ಯದಲ್ಲಿ ಇಂದು ನಡೆದ ವೈಮಾನಿಕ ದಾಳಿಯಲ್ಲಿ 14 ಮಂದಿ ತಾಲಿಬಾನಿ ಭಯೋತ್ಪಾದಕರು ಹತರಾಗಿದ್ದಾರೆ. ಅಫ್ಘಾನ್ ವಾಯುಸೇನೆ ಈ ದಾಳಿಯನ್ನು ನಡೆಸಿದೆ. ತಾಲಿಬಾನ್ ಉಗ್ರ ಸಂಘಟನೆಯ ಪ್ರಾಂತ್ಯದ ಕಮಾಂಡರ್ ಕೂಡ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
“ಮಂಗಳವಾರ ಬೆಳಿಗ್ಗೆ ಅಫ್ಘಾನ್ ವಾಯುಸೇನೆಯು ಕುಂದೂಝ್ ಪ್ರಾಂತ್ಯದ ಆರ್ಚಿ ಜಿಲ್ಲೆಯ ಖುರ್ಲಖ್ ಪ್ರದೇಶದಲ್ಲಿ ತಾಲಿಬಾನಿ ಅಡಗು ತಾಣಗಳ ಮೇಲೆ ದಾಳಿಯನ್ನು ನಡೆಸಿದೆ. ಇದರಲ್ಲಿ 14 ಮಂದಿ ಉಗ್ರರು ಹತರಾಗಿದ್ದಾರೆ. ಹತರಾದವರಲ್ಲಿ ತಾಲಿಬಾನಿನ ಸ್ಥಳಿಯ ಕಮಾಂಡರ್ ಈಝಾತುಲ್ಲಾ ಮತ್ತು ಆತನ ಇಬ್ಬರು ಸಹಚರರು ಕೂಡ ಸೇರಿದ್ದಾರೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹತರಾದ ತಾಲಿಬಾನಿಗಳು, ಸರ್ಕಾರಿ ಕಛೇರಿ ಧ್ವಂಸ, ಸಾರ್ವಜನಿಕ ಆಸ್ತಿಗಳ ಧ್ವಂಸ ಸೇರಿದಂತೆ ಅನೇಕ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಸೇನೆಯು ತನ್ನ ಕಾರ್ಯಾಚರಣೆಯನ್ನು ಬಿಗಿಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.