ಜಕಾರ್ತ: ಇಂಡೋನೇಷ್ಯಾದ ಪ್ರಂಬನನ್ ದೇಗುಲದಲ್ಲಿ 1,163 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನವೆಂಬರ್ 12ರಂದು ಅಭಿಷೇಕ ಸಮಾರಂಭವು ನೆರವೇರಿತು. ಇದರಲ್ಲಿ ಇಂಡೋನೇಷ್ಯಾದಾದ್ಯಂತದ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದು ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯವಾಗಿದೆ ಮತ್ತು ಆಗ್ನೇಯ ಏಷ್ಯಾದ ಎರಡನೇ ಅತಿ ದೊಡ್ಡ ದೇಗುಲವಾಗಿದೆ.
ದೇವಾಲಯದ ಸ್ಥಳವನ್ನು ಸ್ವಚ್ಛಗೊಳಿಸಲು ಮತ್ತು ಶುದ್ಧೀಕರಿಸಲು ಅಭಿಷೇಕ ಕಾರ್ಯವನ್ನು 1,163 ವರ್ಷಗಳಲ್ಲೇ ಮೊದಲ ಬಾರಿಗೆ ಇಲ್ಲಿ ನೆರವೇರಿಸಲಾಯಿತು.
“ಕ್ರಿ.ಶ 856 ರ ನವೆಂಬರ್ 12ರಂದು ಈ ದೇವಾಲಯವನ್ನು ಸ್ಥಾಪಿಸಲಾಗಿದೆ ಎಂಬುದನ್ನು ನಾವು ಶಾಸನದ ಮೂಲಕ ಕಂಡುಹಿಡಿದ ನಂತರ, ದೇಗುಲದಲ್ಲಿ ಹಲವು ಪೂಜಾ ಕೈಂಕರ್ಯಗಳನ್ನು ನಡೆಸಲು ಹಿಂದೂಗಳು ಮುಂದಾದೆವು. ಇದರ ಭಾಗವಾಗಿ ಅಭಿಷೇಕವನ್ನೂ ನೆರವೇರಿಸಲಾಯಿತು. ಮೂಲತಃ ಈ ದೇಗುಲವನ್ನು ರಾಕೈ ಪಿಕಾಟನ್ ದಯಾ ಸೆಲಾಡು ಉದ್ಘಾಟಿಸಿದ್ದರು ಎಂದು ಹೇಳಲಾಗಿದೆ” ಎಂದು ಅಭಿಷೇಕ ಸಮಿತಿಯ ಸದಸ್ಯ ಮೇಧ ಅಸ್ತ್ರ ತನಯಾ ಹೇಳಿದರು.
ಅಭಿಷೇಕ ಎಂಬುದು ಸಂಸ್ಕೃತ ಪದವಾಗಿದ್ದು, ಇದು ಭಕ್ತಿಯ ಕಾರ್ಯವಾಗಿದೆ. ದೇವರ ಮೂರ್ತಿಯ ಮೇಲೆ ಮಂತ್ರಗಳ ಪಠಣದ ಮೂಲಕ ಅರ್ಚಕರು ಅಭಿಷೇಕವನ್ನು ಮಾಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.