ನವದೆಹಲಿ: ರಕ್ಷಣೆಯ ದೇಶೀಕರಣಕ್ಕೆ ಬಲವಾದ ಬೆಂಬಲವನ್ನು ನೀಡುತ್ತಿರುವ ವಾಯುಸೇನಾ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಅಭಿವೃದ್ಧಿಗೊಳ್ಳುತ್ತಿರುವ ಹಂತದಲ್ಲಿ ಇರುವ ಎಚ್ಟಿಟಿ -40 ತರಬೇತುದಾರ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.
“ಎಸಿಎಂ ಆರ್ಕೆಸ್ ಭದೌರಿಯಾ, ಸಿಎಎಸ್ ಎಚ್ಟಿಟಿ 40ನಲ್ಲಿ ಹಾರಾಟ ನಡೆಸಿದ್ದಾರೆ ಮತ್ತು ಅದರ ಹಾರುವ ಸಾಮರ್ಥ್ಯವನ್ನು ಒಂದು ಗಂಟೆಗಳ ಕಾಲ ಪರೀಕ್ಷಿಸಿದ್ದಾರೆ. ಈ ಮೂಲಕ ವಾಯುಪಡೆಯ ಮುಖ್ಯಸ್ಥರಾಗಿ ಮೂಲಮಾದರಿಯಲ್ಲಿ ಹಾರಾಟ ನಡೆಸಿದ ಮೊದಲ ಏರ್ ಚೀಫ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ” ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಟ್ವೀಟ್ನಲ್ಲಿ ತಿಳಿಸಿದೆ.
ಭದೌರಿಯಾ ಹಾರಾಟ ನಡೆಸುತ್ತಿರುವ ಕೆಲವು ಚಿತ್ರಗಳು ಮತ್ತು ವೀಡಿಯೊಗಳನ್ನು ಎಚ್ಎಎಲ್ ಟ್ವೀಟ್ ಮಾಡಿದೆ.
ಈ ವಿಮಾನವು ಇನ್ನೂ ಕೂಡ ಎಚ್ಎಎಲ್ನಲ್ಲಿ ಅಭಿವೃದ್ಧಿಯ ಹಂತದಲ್ಲಿದೆ. ವಾಯುಸೇನಾ ಮುಖ್ಯಸ್ಥರು ಈ ದೇಶೀಯ ತರಬೇತುದಾರ ವಿಮಾನ ಯೋಜನೆಯೊಂದಿಗೆ ದೀರ್ಘಕಾಲದಿದಲೂ ನಿಕಟವಾದ ಸಂಬಂಧವನ್ನು ಹೊಂದುತ್ತಾ ಬಂದಿದ್ದಾರೆ. ವಾಯುಸೇನಾ ಮುಖ್ಯಸ್ಥರಾಗಿ ಯೋಜನೆಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.