ಹೈದರಾಬಾದ್: ತೆಲಂಗಾಣದ ಮೊದಲ ‘ಮಕ್ಕಳ ಸ್ನೇಹಿ’ ಪೊಲೀಸ್ ಠಾಣೆಯು ಶುಕ್ರವಾರ ರಾಚಕೊಂಡ ಮೆಡಿಪಲ್ಲಿ ಠಾಣೆಯಲ್ಲಿ ಕಾರ್ಯಾರಂಭಗೊಂಡಿದೆ. ಭವಿಷ್ಯದಲ್ಲಿ ಪೊಲೀಸ್ ಆಯುಕ್ತನಾಗಲು ಬಯಸುತ್ತಿರುವ 7 ವರ್ಷದ ಡಿ.ಇಶಾನ್ ಎಂಬ ಬಾಲಕ ಈ ಠಾಣೆಯನ್ನು ಉದ್ಘಾಟನೆಗೊಳಿಸಿದ್ದಾನೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಐಪಿಎಸ್ ಅಧಿಕಾರಿ ಮಹೇಶ್ ಭಾಗವತ್, ರಾಚಕೊಂಡ ಆಯುಕ್ತ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ರಾಚಕೊಂಡ ಪೊಲೀಸ್ ಆಯುಕ್ತರ ಸಹಯೋಗದೊಂದಿಗೆ ಬಚ್ಪನ್ ಬಚಾವೊ ಆಂದೋಲನ್ (ಬಿಬಿಎ) ಈ ಪೊಲೀಸ್ ಠಾಣೆಯನ್ನು ಕಾರ್ಯಾರಂಭ ಮಾಡಿದೆ. ಎಲ್ಲಾ ಮಕ್ಕಳು ದುರುಪಯೋಗ, ನಿಂದನೆ ಮತ್ತು ಶೋಷಣೆಯಿಂದ ಮುಕ್ತರಾಗಬೇಕು ಎನ್ನುವ ಉದ್ದೇಶದೊಂದಿಗೆ, ಮಕ್ಕಳ ಸ್ನೇಹಿ ವಾತಾವರಣವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ‘ಮಕ್ಕಳ ಸ್ನೇಹಿ’ ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ.
“ತೆಲಂಗಾಣ ಪೊಲೀಸ್ ಇಲಾಖೆ ಕೈಗೊಂಡ ಈ ಉಪಕ್ರಮವನ್ನು ನಾವು ಶ್ಲಾಘಿಸುತ್ತೇವೆ. ಪ್ರತಿ ಮಗುವಿಗೂ ನ್ಯಾಯ ಸಿಗುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಮಕ್ಕಳ ಸ್ನೇಹಿ ಪೊಲೀಸ್ ಠಾಣೆಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಪೊಲೀಸ್ ಠಾಣೆಗಳು ಮಕ್ಕಳು ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಭರವಸೆ ನೀಡುತ್ತವೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಅಪರಾಧಗಳನ್ನು ತಡೆಗಟ್ಟುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ” ಎಂದು ಬಚ್ಪನ್ ಬಚಾವೋ ಆಂದೋಲನ್ ಸಿಇಒ ಸಮೀರ್ ಮಾಥುರ್ ಹೇಳಿದ್ದಾರೆ.
ಬಚ್ಪನ್ ಬಚಾವೋ ಆಂದೋಲನ್ ನೆರವಿನೊಂದಿಗೆ, ಮಕ್ಕಳ ಸ್ನೇಹಿ ಪೊಲೀಸ್ ಠಾಣೆಯನ್ನು ಗೋಡೆ ವರ್ಣಚಿತ್ರಗಳಿಂದ ಅಲಂಕರಿಸಲಾಗಿತ್ತು, ಹಾಸಿಗೆಗಳು, ವಾಟರ್ ಕೂಲರ್ಗಳನ್ನು ಅಳವಡಿಸಲಾಗಿತ್ತು, ಪುಸ್ತಕಗಳ ಜೊತೆಗೆ, ಆಟಿಕೆಗಳನ್ನು ಕೂಡ ಇಲ್ಲಿ ಇಡಲಾಗಿದೆ. ಪೊಲೀಸ್ ಠಾಣೆಗೆ ಭೇಟಿ ನೀಡುವ ಮಕ್ಕಳಿಗೆ ನಿರಾಳತೆ ಮತ್ತು ಆರಾಮದಾಯಕತೆಯನ್ನು ನೀಡುವ ಸಲುವಾಗಿ, ಅವರನ್ನು ಆತಂಕ ಮುಕ್ತರನ್ನಾಗಿಸುವ ಸಲುವಾಗಿ ಈ ವ್ಯವಸ್ಥೆಗಳನ್ನು ಮಾಡಲಾಗಿದೆ.
#ChildFriendlyPoliceStation Medipally. #Inauguration today 14th November 2019 @TelanganaDGP @cyberabadpolice @HMOIndia @IGWomenSafety pic.twitter.com/d3Vjg9HXfu
— Rachakonda Police (@RachakondaCop) November 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.