ತೆರಿಗೆದಾರರ ಅನುಕೂಲಕ್ಕಾಗಿ ಆದಾಯ ತೆರಿಗೆ ಇಲಾಖೆಯು ಈಗ ಪಾನ್ಕಾರ್ಡ್ ಬದಲಿಗೆ 12 ಅಂಕೆಗಳ ಬಯೋಮೆಟ್ರಿಕ್ ಐಡಿ ಸಂಖ್ಯೆ(ಆಧಾರ್ ಸಂಖ್ಯೆ)ಯನ್ನು ನಮೂದು ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ ಈ ಅವಕಾಶವನ್ನು ದುರಪಯೋಗಪಡಿಸಿಕೊಂಡರೆ ಅಥವಾ ಒಂದು ವೇಳೆ ತಪ್ಪಾಗಿ ಆಧಾರ್ ಸಂಖ್ಯೆ ಅನ್ನು ಉಲ್ಲೇಖ ಮಾಡಿದರೆ ಭಾರೀ ಪ್ರಮಾಣದಲ್ಲಿ ದಂಡವನ್ನು ಕಟ್ಟಬೇಕಾಗುತ್ತದೆ.
ಸದ್ಯ 22 ಕೋಟಿ ಪಾನ್ ಕಾರ್ಡ್ಗಳು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಆಗಿವೆ. 120 ಕೋಟಿಗೂ ಅಧಿಕ ಮಂದಿಯ ಬಳಿ ಆಧಾರ್ ಕಾರ್ಡ್ ಇದೆ. ಯಾವುದೇ ವ್ಯಕ್ತಿ ಪಾನ್ ಕಾರ್ಡ್ ಬಯಸಿದರೆ ಆತ ಮೊದಲು ಆಧಾರ್ ಮಾಡಿಸಿಕೊಂಡಿರಬೇಕಾಗುತ್ತದೆ. ನಂತರ ಪಾನ್ ನಂಬರ್ ಲಭ್ಯವಾಗಿ ಬಳಕೆ ಮಾಡಲು ಅವಕಾಶವಿದೆ. ಆಧಾರ್ ಕಾರ್ಡ್ನ್ನು ಪಾನ್ ಬದಲಾಗಿ ಬಳಕೆ ಮಾಡುವುದರಿಂದಾಗಿ ಹೊಸದಾಗಿ ಪಾನ್ ಮಾಡಿಸಿಕೊಂಡೇ ತೆರಿಗೆ ಪಾವತಿ ಮಾಡಬೇಕಾದ ಅಗತ್ಯವಿರುವುದಿಲ್ಲ. ಇದು ಸಾಕಷ್ಟು ಮಂದಿಗೆ ಅನುಕೂಲ ಮಾಡಿಕೊಡುತ್ತದೆ.
ಪಾನ್ ಕಾರ್ಡ್ ಇಲ್ಲದವರು ಆಧಾರ್ ಕಾರ್ಡ್ ಮೂಲಕ ಐ-ಟಿ ರಿಟರ್ನ್ಸ್ ಸಲ್ಲಿಸಬಹುದು. ಅಲ್ಲದೆ, ಪಾನ್ ಕಾರ್ಡ್ ಎಲ್ಲೆಲ್ಲಿ ಬಳಕೆ ಮಾಡಲಾಗುತ್ತದೆಯೋ ಅಲ್ಲಿ ಆಧಾರ್ ಕಾರ್ಡ್ ಬಳಕೆ ಮಾಡಬಹುದು ಎಂದು ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. ಅದರಂತೆ ತೆರಿಗೆದಾರರು ಪಾನ್ ಬದಲು ಆಧಾರ್ ತೋರಿಸಿ ತೆರಿಗೆ ಪಾವತಿ ಮಾಡಬಹುದು. ಆದರೆ ಈ ಅವಕಾಶದ ದುರುಪಯೋಗಪಡಿಸಿಕೊಂಡರೆ ದೊಡ್ಡ ಪ್ರಮಾಣದಲ್ಲೇ ದಂಡ ಬೀಳುತ್ತದೆ.
ಹೌದು, ತೆರಿಗೆ ಪಾವತಿಯ ಸಂದರ್ಭದಲ್ಲಿ ಒಂದು ವೇಳೆ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದು ಮಾಡಿದರೆ ಅಥವಾ ಬೇಕಂತಲೇ ನಕಲಿ ಸಂಖ್ಯೆ ನಮೂದು ಮಾಡಿದರೆ ರೂ.10,000ದವರೆಗೆ ದಂಡವನ್ನು ಕಟ್ಟಬೇಕಾಗುತ್ತದೆ.
2019ರಲ್ಲಿ ಮಂಡಿಸಿದ ಹಣಕಾಸು ಮಸೂದೆ, ಆದಾಯ ತೆರಿಗೆ ಕಾಯ್ದೆ 1961 ರ ಇತ್ತೀಚಿನ ತಿದ್ದುಪಡಿಗಳ ಅನ್ವಯ, ಜನರು ಪಾನ್ ಸಂಖ್ಯೆಗೆ ಬದಲಾಗಿ ಆಧಾರ್ ಬಳಸಲು ಅವಕಾಶ ನೀಡಿಲಾಗಿದೆ, ಮಾತ್ರವಲ್ಲದೇ ಸುಳ್ಳು ಆಧಾರ್ ಸಂಖ್ಯೆಯನ್ನು ನೀಡಿದರೆ ದಂಡವನ್ನು ಸಹ ಪರಿಚಯಿಸಲಾಗಿದೆ.
ಹೊಸ ದಂಡದ ನಿಯಮಗಳು ಪಾನ್ ಬದಲಾಗಿ ಆಧಾರ್ ಅನ್ನು ಬಳಸುತ್ತಿರುವ ಸಂದರ್ಭಗಳಲ್ಲಿ ಮತ್ತು ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ ಪಾನ್ ಅನ್ನು ಉಲ್ಲೇಖಿಸುವುದು ಕಡ್ಡಾಯವಾದ ಸಂದರ್ಭಗಳಲ್ಲಿ ಮಾತ್ರ ಅನ್ವಯಿಸುತ್ತದೆ. ಉದಾಹರಣೆಗೆ, ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವುದು, ಬ್ಯಾಂಕ್ ಖಾತೆ ತೆರೆಯುವುದು, ಡಿಮ್ಯಾಟ್ ಖಾತೆ ಮತ್ತು 50,000 ಕ್ಕಿಂತ ಹೆಚ್ಚು ಮೌಲ್ಯದ ಮ್ಯೂಚುಯಲ್ ಫಂಡ್, ಬಾಂಡ್ ಇತ್ಯಾದಿಗಳನ್ನು ಖರೀದಿಸುವ ಸಂದರ್ಭದಲ್ಲಿ ಅನ್ವಯವಾಗುತ್ತದೆ.
ಹೊಸ ಆಧಾರ್ ನಿಯಮ:
ಆಧಾರ್ ಅನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ನೀಡಿದ್ದರೂ, ದಂಡವನ್ನು ಯುಐಡಿಎಐ ವಿಧಿಸುವುದಿಲ್ಲ. ಬದಲಿಗೆ ಆದಾಯ ತೆರಿಗೆ ಇಲಾಖೆಯಿಂದ ವಿಧಿಸಲಾಗುತ್ತದೆ.
ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 272 ಬಿ ಅಡಿಯಲ್ಲಿ, ಪಾನ್ಗೆ ಸಂಬಂಧಿಸಿದ ನಿಬಂಧನೆಗಳನ್ನು ಅನುಸರಿಸುವಲ್ಲಿ ಡೀಫಾಲ್ಟ್ ಆದ ಸಂದರ್ಭದಲ್ಲಿ ಇಲಾಖೆಯು ದಂಡ ವಿಧಿಸಬಹುದು, ಅಂದರೆ, ಪಾನ್ ಪಡೆಯಲು, ಉಲ್ಲೇಖಿಸಲು ಅಥವಾ ದೃಢೀಕರಿಸಲು ವಿಫಲವಾದ ಸಂದರ್ಭದಲ್ಲಿ. ಪ್ರತಿ ಡೀಫಾಲ್ಟ್ಗೆ ದಂಡದ ಮೊತ್ತ ರೂ.10,000 ಆಗಿರುತ್ತದೆ.
ಈ ಮೊದಲು ದಂಡವನ್ನು ಪಾನ್ಗೆ ಸೀಮಿತಗೊಳಿಸಲಾಗಿತ್ತು ಆದರೆ ಕಳೆದ ಸೆಪ್ಟೆಂಬರ್ನಿಂದ ಪಾನ್-ಆಧಾರ್ ಪರಸ್ಪರ ಲಿಂಕ್ ಆಗುವ ನಿಯಮ ಜಾರಿಗೆ ಬಂದಾಗಿನಿಂದ, ದಂಡವನ್ನು ಆಧಾರ್ಗೂ ವಿಸ್ತರಿಸಲಾಗಿದೆ.
ಯಾವ ಸಂದರ್ಭದಲ್ಲಿ ದಂಡ ವಿಧಿಸಲಾಗುತ್ತದೆ:
1. ನಾವು ಪಾನ್ಗೆ ಬದಲಾಗಿ ಅಮಾನ್ಯ ಆಧಾರ್ ಸಂಖ್ಯೆಯನ್ನು ನೀಡಿದ ಪಕ್ಷದಲ್ಲಿ
2. ನಿಗದಿತ ವಹಿವಾಟಿಗೆ ನಮ್ಮ ಪಾನ್ ಅಥವಾ ಆಧಾರ್ ಒದಗಿಸಲು ನಾವು ವಿಫಲರಾದ ಪಕ್ಷದಲ್ಲಿ
3. ನಮ್ಮ ಬಯೋಮೆಟ್ರಿಕ್ ಗುರುತನ್ನು ದೃಢೀಕರಿಸುವ ಅಗತ್ಯವಿದ್ದ ಸಂದರ್ಭದಲ್ಲಿ ನಮ್ಮ ಆಧಾರ್ ಸಂಖ್ಯೆಯನ್ನು ನೀಡಿದರಷ್ಟೇ ಸಾಕಾಗುವುದಿಲ್ಲ, ಬಯೋಮೆಟ್ರಿಕ್ ದೃಢೀಕರಣ ನೀಡುವಲ್ಲಿನ ವಿಫಲತೆಯು ದಂಡಕ್ಕೆ ಕಾರಣವಾಗುತ್ತದೆ.
ನಿಯಮಗಳ ಪ್ರಕಾರ, ಪಾನ್ ಅಥವಾ ಆಧಾರ್ ಅನ್ನು ಸರಿಯಾಗಿ ಉಲ್ಲೇಖಿಸಲಾಗಿದೆಯೇ ಮತ್ತು ದೃಢೀಕರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ವಿಫಲವಾದ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಇತ್ಯಾದಿಗಳಿಗೆ ಕೂಡ ದಂಡ ವಿಧಿಸಬಹುದಾಗಿದೆ.
ಇಂತಹ ಪ್ರತಿಯೊಂದು ಪ್ರಕರಣದಲ್ಲೂ ನಿಯಮವು ರೂ. 10,000 ದಂಡವನ್ನುಪ್ರಸ್ತಾಪಿಸುತ್ತದೆ ಎಂಬುದನ್ನು ನಾವು ಗಮನಿಸಬೇಕು. ನಾವು 2 ಫಾರ್ಮ್ಗಳಲ್ಲಿ ತಪ್ಪಾದ ಆಧಾರ್ ಸಂಖ್ಯೆಯನ್ನು ನೀಡಿದ್ದರೆ ನಮಗೆ ರೂ. 20,000 ದಂಡ ವಿಧಿಸಬಹುದು. ಆದ್ದರಿಂದ ಫಾರ್ಮ್ಗಳನ್ನು ಭರ್ತಿ ಮಾಡುವಾಗ ಅತ್ಯಂತ ಜಾಗರೂಕರಾಗಿರಬೇಕಾಗುವುದು ಅತ್ಯಗತ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.