ನವದೆಹಲಿ: ಶೀಘ್ರದಲ್ಲೇ ಏಕೀಕೃತ ಪಾವತಿ ಸೇವೆ ‘ಫೇಸ್ಬುಕ್ ಪೇ’ ಅನ್ನು ಪ್ರಾರಂಭಿಸುವುದಾಗಿ ಫೇಸ್ಬುಕ್ ಇಂಕ್ ಮಂಗಳವಾರ ಘೋಷಣೆ ಮಾಡಿದೆ. ಇದರಿಂದಾಗಿ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಸೇರಿದಂತೆ ಅದರ ಎಲ್ಲಾ ವೇದಿಕೆಗಳಾದ್ಯಂತ ಬಳಕೆದಾರರು ಅಪ್ಲಿಕೇಶನ್ನಿಂದ ನಿರ್ಗಮಿಸದೆ ಪಾವತಿಗಳನ್ನು ಮಾಡಬಹುದು. ಈ ಸೇವೆಯು ಬಳಕೆದಾರರಿಗೆ ತಮ್ಮ ಸ್ಮಾರ್ಟ್ಫೋನ್ಗಳಲ್ಲಿ ಪಿನ್ ಅಥವಾ ಬಯೋಮೆಟ್ರಿಕ್ಸ್ನಂತಹ ಭದ್ರತಾ ಆಯ್ಕೆಗಳೊಂದಿಗೆ ಹಣವನ್ನು ಕಳುಹಿಸಲು ಅಥವಾ ಪಾವತಿ ಮಾಡಲು ಅನುಮತಿಸುತ್ತದೆ ಎಂದು ಸಂಸ್ಥೆ ಹೇಳಿದೆ.
ಫೇಸ್ಬುಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಮಾರ್ಕ್ ಜುಕರ್ಬರ್ಗ್ ಅವರು ಈ ವರ್ಷದ ಆರಂಭದಲ್ಲಿ ತಮ್ಮ ಸಂಸ್ಥೆಯು ವಿವಿಧ ಅಪ್ಲಿಕೇಶನ್ ಗಳಲ್ಲಿ ಪಾವತಿ ಸೌಲಭ್ಯವನ್ನು ತರಲಿದೆ ಎಂಬುದಾಗಿ ಹೇಳಿದ್ದರು. ಈ ವಾರ ಅಮೆರಿಕಾದಲ್ಲಿ ಫೇಸ್ಬುಕ್ ಪೇ ಫೇಸ್ಬುಕ್ ಮತ್ತು ಮೆಸೆಂಜರ್ನಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ.
ಭಾರತದಲ್ಲಿ ಇನ್ನು ಕೆಲವೇ ದಿನಗಲ್ಲಿ ಫೇಸ್ಬುಕ್ ಪೇ ಸೇವೆ ಆರಂಭಗೊಳ್ಳುವ ನಿರೀಕ್ಷೆ ಇದೆ.
ಹೊಸ ಸೇವೆಯು, ವಹಿವಾಟು ನಡೆಸಿದ ಸಂದರ್ಭದಲ್ಲಿ ಬಳಕೆದಾರರ ಪಾವತಿ ವಿಧಾನ, ದಿನಾಂಕ, ಬಿಲ್ಲಿಂಗ್ ಮತ್ತು ಸಂಪರ್ಕ ವಿವರಗಳನ್ನು ಸಂಗ್ರಹಿಸುತ್ತದೆ ಮತ್ತು ಬಳಕೆದಾರರಿಗೆ ಉದ್ದೇಶಿತ ಜಾಹೀರಾತುಗಳನ್ನು ತೋರಿಸಲು ಡಾಟಾವನ್ನು ಬಳಸುತ್ತದೆ ಎಂದು ಫೇಸ್ಬುಕ್ ಹೇಳಿದೆ.
ಕಳೆದ ಕೆಲವು ವರ್ಷಗಳಿಂದ ಗೌಪ್ಯತೆ ಮತ್ತು ಬಳಕೆದಾರರ ಡಾಟಾವನ್ನು ಸಂಗ್ರಹ ಮಾಡುತ್ತಿರುವ ಬಗ್ಗೆ ಫೇಸ್ಬುಕ್ ವಿರುದ್ಧ ಅಸಮಾಧಾನಗಳು ವ್ಯಕ್ತವಾಗುತ್ತಿವೆ. ಈ ಸಂದರ್ಭದಲ್ಲಿ ಅದು ಪಾವತಿ ಸೌಲಭ್ಯವನ್ನೂ ಆರಂಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.