ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸುವ ಮತ್ತು ಕರ್ತಾರ್ಪುರ ಕಾರಿಡಾರ್ ತೆರೆಯುವ ಕ್ರಮಗಳು ದೃಢ ನಿಶ್ಚಯದ ಸರ್ಕಾರದ ಲಕ್ಷಣಗಳಾಗಿವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸೋಮವಾರ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಕೆಲವು ದಿನಗಳ ಹಿಂದೆ, ಸುಪ್ರೀಂಕೋರ್ಟ್ ರಾಮ ಮಂದಿರದ ಬಗ್ಗೆ ತೀರ್ಪು ಪ್ರಕಟಿಸಿತ್ತು. ದೇಶಾದ್ಯಂತ ಎಲ್ಲರೂ ಇದನ್ನು ಸ್ವಾಗತಿಸಿದರು. ಈ ತೀರ್ಪನ್ನು ಸ್ವಾಗತಿಸಿದ್ದಕ್ಕಾಗಿ ಜನರನ್ನು ಅಭಿನಂದಿಸಲು ನಾನು ಬಯಸುತ್ತೇನೆ” ಎಂದು ಜಾವ್ಡೇಕರ್ ಹೇಳಿದರು.
“ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸುವುದು, ಸುಪ್ರೀಂಕೋರ್ಟ್ನ ಅಯೋಧ್ಯೆಯ ತೀರ್ಪು ಮತ್ತು ಕರ್ತಾರ್ಪುರ ಕಾರಿಡಾರ್ ತೆರೆಯುವುದು ದೃಢ ನಿಶ್ಚಯದ ಸರ್ಕಾರದ ಲಕ್ಷಣಗಳಾಗಿವೆ. ಈ ಹಿಂದೆ ವಿವಿಧ ನಗರಗಳಲ್ಲಿ ಬಾಂಬ್ ಸ್ಫೋಟಗಳು ನಡೆದವು, ಇಂದು ಅದು ನಡೆಯುತ್ತಿಲ್ಲ ಏಕೆಂದರೆ ಆಂತರಿಕ ಭದ್ರತೆ ಪ್ರಬಲವಾಗಿದೆ. ಅಲ್ಲದೆ, ನಕ್ಸಲರ ಚಟುವಟಿಕೆಗಳಲ್ಲಿ ಕುಸಿತ ಕಂಡುಬಂದಿದೆ “ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ‘ಹೊಸ ಭಾರತ’ ಕ್ಕಾಗಿ ಕರೆ ನೀಡಿದ ಬಗ್ಗೆ ಮಾತನಾಡಿದ ಜಾವ್ಡೇಕರ್, “ಹೊಸ ಭಾರತ ಎಂದರೇನು? ಭ್ರಷ್ಟಾಚಾರ ಮುಕ್ತ ಭಾರತ, ಜಾತಿ ಮುಕ್ತ ಭಾರತ, ಕೋಮುವಾದ ಮುಕ್ತ ಭಾರತ. ಅದು ಹೊಸ ಭಾರತ” ಎಂದು ಹೇಳಿದರು.
ದೇವಾಲಯ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿರುವ ವಿವಾದಿತ ಸ್ಥಳವನ್ನು ಹಸ್ತಾಂತರಿಸುವಂತೆ ಮತ್ತು ಇದಕ್ಕಾಗಿ ಟ್ರಸ್ಟ್ ಸ್ಥಾಪಿಸುವಂತೆ ನವೆಂಬರ್ 9 ರಂದು ಉನ್ನತ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಐದು ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಗುರುದಾಸ್ಪುರ ಮತ್ತು ಕರ್ತಾರ್ಪುರವನ್ನು ಸಂಪರ್ಕಿಸುವ ಕರ್ತಾರ್ಪುರ ಕಾರಿಡಾರ್ ಅನ್ನು ಉದ್ಘಾಟಿಸಿದರು, ಈ ಮೂಲಕ ಭಾರತೀಯ ಯಾತ್ರಿಕರಿಗೆ ಕರ್ತಾರಪುರ್ ಸಾಹಿಬ್ಗೆ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟರು.
ಕಳೆದ 5 ರಂದು 370ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.