ನವದೆಹಲಿ: ಭಾರತೀಯ ರೈಲ್ವೆಯು ಮಹತ್ವಾಕಾಂಕ್ಷೆಯ ನಿಲ್ದಾಣ ಪುನರಾಭಿವೃದ್ಧಿ ಯೋಜನೆಯು ವೇಗವನ್ನು ಪಡೆದುಕೊಂಡಿದೆ. ಹಬೀಬ್ಗಂಜ್ ಮತ್ತು ಗಾಂಧಿನಗರ ರೈಲು ನಿಲ್ದಾಣದ ಪುನರುಜ್ಜೀವನ ಕಾರ್ಯವು ಮುಂದಿನ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. ಇವುಗಳು ವಿಶ್ವದರ್ಜೆಯ ನಿಲ್ದಾಣಗಳಾಗಿ ಕಂಗೊಳಿಸಲಿವೆ.
ನಿಲ್ದಾಣದ ಸುತ್ತಮುತ್ತಲಿನ ಭೂಮಿ ಮತ್ತು ವಾಯು ಜಾಗದ ವಾಣಿಜ್ಯ ಅಭಿವೃದ್ಧಿಗೆ ಅನುವು ಮಾಡಿಕೊಡುವ ಮೂಲಕ ದೇಶದಾದ್ಯಂತದ ಪ್ರಮುಖ ನಿಲ್ದಾಣಗಳ ಪುನರಾಭಿವೃದ್ಧಿಯನ್ನು ಕಾರ್ಯಗತಗೊಳಿಸಲು ಯೋಜಿಸಲಾಗಿದೆ. ಈ ಕಾರ್ಯಕ್ರಮವು ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡುತ್ತದೆ ಮತ್ತು ರೈಲ್ವೆಗೆ ಹೆಚ್ಚುವರಿ ಆದಾಯವನ್ನು ತಂದುಕೊಡುತ್ತದೆ ಎಂಬ ನಿರೀಕ್ಷೆ ಇದೆ.
ಮುಂದಿನ ವರ್ಷದ ಜನವರಿಯೊಳಗೆ ಮಧ್ಯಪ್ರದೇಶದ ಹಬೀಬಗಂಜ್ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ, ಗಾಂಧಿನಗರ ರೈಲು ನಿಲ್ದಾಣದ ಪುನರಾಭಿವೃದ್ಧಿ 2020 ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ.
ಗೋಮತಿ ನಗರ (ಲಕ್ನೋ), ಚಾರ್ಬಾಗ್ (ಲಕ್ನೋ), ಪುದುಚೇರಿ, ತ್ರಿಪಾಠಿ ಮತ್ತು ಚಂಡೀಗಢದ ಇತರ ಐದು ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆಗಳಿಗೆ ಗುತ್ತಿಗೆ ನೀಡಲಾಗಿದೆ ಮತ್ತು ಅವುಗಳಲ್ಲಿ ಕೆಲವು ನಿಲ್ದಾಣಗಳ ಕೆಲಸಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ.
ಭಾರತೀಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ನಿಗಮ (ಐಆರ್ಎಸ್ಡಿಸಿ) ಮತ್ತು ಭೋಪಾಲ್ ಮೂಲದ ಬನ್ಸಾಲ್ ಗ್ರೂಪ್ ಹಬೀಬ್ಗಂಜ್ ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡುತ್ತಿವೆ. ಬನ್ಸಾಲ್ ಗುಂಪು ಎಂಟು ವರ್ಷಗಳ ಕಾಲ ನಿಲ್ದಾಣವನ್ನು ನಿರ್ವಹಿಸಲಿದೆ. ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗಾಗಿ 450 ಕೋಟಿ ರೂ. ಖರ್ಚು ಮಾಡಲಾಗಿದ್ದು, ಅದರಲ್ಲಿ 100 ಕೋಟಿ ರೂ.ಗಳನ್ನು ನಿಲ್ದಾಣದ ಅಭಿವೃದ್ಧಿಗೆ ಮತ್ತು 350 ಕೋಟಿ ರೂ.ಗಳನ್ನು ವಾಣಿಜ್ಯ ಜಾಗದ ಅಭಿವೃದ್ಧಿಗೆ ಮಂಜೂರು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.