ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸೋಮವಾರ ದೆಹಲಿಯಲ್ಲಿ ನಗರ ಭೂಕಂಪನ ಶೋಧ ಮತ್ತು ರಕ್ಷಣಾ ಕಾರ್ಯ 2019 ಮೇಲಿನ ಎಸ್ಸಿಒ (ಶಾಂಘೈ ಕಾರ್ಪೋರೇಶನ್ ಆರ್ಗನೈಝೇಶನ್) ಜಂಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
“ಶಾಂಘೈ ಕಾರ್ಪೋರೇಶನ್ ಆರ್ಗನೈಝೇಶನ್ ವಿಶ್ವದ ಅತೀದೊಡ್ಡ ಯೂನಿಯನ್ ಆಗಿದೆ. ವಿಶ್ವದ ಶೇ. 40 ರಷ್ಟು ಜನಸಂಖ್ಯೆಯನ್ನು, ಶೇ.20ರಷ್ಟು ಜಾಗತಿಕ ಆರ್ಥಿಕತೆಯನ್ನು ಮತ್ತು ಸುಮಾರು ಶೇ.22ರಷ್ಟು ಜಾಗತಿಕ ಭೂಪ್ರದೇಶವನ್ನು ಇದು ಒಳಗೊಂಡಿದೆ” ಎಂದು ಅಮಿತ್ ಶಾ ಹೇಳಿದರು.
“ಭಾರತವು ಬಹು ಆಯಾಮದ, ರಾಜನೀತಿ ಸುರಕ್ಷಿತೆಯ, ಆರ್ಥಿಕ ವಿಷಯಗಳ ಬಗೆಗಿನ ಪರಸ್ಪರ ಚರ್ಚೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಶಾಂಘೈ ಸಂಘಟನೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ” ಎಂದರು.
ಭಾರತವು ಕಳೆದ ಒಂದು ದಶಕದಿಂದ ಎಸ್ಸಿಒ ಜೊತೆ ಸಂಬಂಧ ಹೊಂದಿದೆ. ಭಾರತವು 2005 ರಿಂದ ಎಸ್ಸಿಒದಲ್ಲಿ ಮೇಲ್ವಿಚಾರಣಾ ಪಾತ್ರ ನಿಭಾಯಿಸುತ್ತಿದೆ ಎಂದರು.
1996 ರಿಂದ 2015 ರವರೆಗೆ ಎಸ್ಸಿಒ ದೇಶಗಳಲ್ಲಿನ ಸಂಭವಿಸಿದ ಪ್ರಾಕೃತಿಕ ವಿಕೋಪಗಳಿಂದ ಸುಮಾರು 3 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಭೂಕಂಪದಿಂದ 2 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ, ಎಸ್ಸಿಒ ದೇಶಗಳು ಭೂಕಂಪಗಳ ವಿಪತ್ತಿನಿಂದ ಪಾರಾಗಲು ಪ್ರಬಲವಾದ ಒಂದು ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ ಎಂದರು.
ಭಾರತದಲ್ಲಿ ನಾವು ಕೇವಲ ಪರಿಸರ ದುರಂತಗಳಿಂದ ಉಂಟಾಗುವ ಸಾವಿನ ಸಂಖ್ಯೆಯನ್ನು ನಿಯಂತ್ರಿಸಿಲ್ಲ, ಅಂತಹ ನಿದರ್ಶನಗಳ ವಿರುದ್ಧ ಕೆಲಸ ಮಾಡಲು ಮತ್ತು ಅವುಗಳ ವಿರುದ್ಧ ಉತ್ತಮವಾಗಿ ತಯಾರಿ ನಡೆಸಲು ಕೆಲಸ ಮಾಡುತ್ತಿದ್ದೇವೆ. ನೈಸರ್ಗಿಕ ವಿಪತ್ತು ನಿರ್ವಹಣಾ ಉಪಕ್ರಮವನ್ನು ಭಾರತ ಮುನ್ನಡೆಸುತ್ತಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.