ಡೆಹ್ರಾಡೂನ್: ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಉತ್ತರಾಖಂಡದಲ್ಲಿ ವಾಯುನೆಲೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಭಾರತೀಯ ಸೇನೆಯು ಕ್ಷಿಪ್ರಗತಿಯಲ್ಲಿ ಕಾರ್ಯೋನ್ಮುಖಗೊಂಡಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಅತಿ ಸುಂದರವಾದ ತೆಹ್ರಿ ಸರೋವರದ ಮೇಲೆ ನಡೆದ ರೈಬಾರ್ -2 ಅನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಸಂಪರ್ಕವನ್ನು ಸುಧಾರಿಸುವುದು ಸೇನೆಯ ಆದ್ಯತೆಯಾಗಿದೆ. ಭಾರತೀಯ ಸೇನೆ ಮತ್ತು ವಾಯುಸೇನೆ ಪೂರ್ಣ ಸಹಕಾರದೊಂದಿಗೆ ಈ ಭಾಗದಲ್ಲಿ ಅಗತ್ಯವಿರುವ ಸಂಪರ್ಕವನ್ನು ಸ್ಥಾಪನೆ ಮಾಡಲಿದೆ ಎಂದು ಅವರು ಭರವಸೆ ನೀಡಿದರು.
ಉತ್ತರಾಖಂಡದ ಅಭಿವೃದ್ಧಿಗೆ ಸೇನೆ ಸದಾ ಒಂದಾಗಿರುತ್ತದೆ. ವಿಶ್ವದಲ್ಲಿ ಎಲ್ಲಾದರು ಸ್ವರ್ಗ ಇದೆ ಎಂದಾದರೆ ಅದು ಇಲ್ಲಿ ಮಾತ್ರ. ಭಾರತೀಯ ಸೇನೆಯ ಪರವಾಗಿ, ಮುಖ್ಯಮಂತ್ರಿ ಕಾರ್ಯಾಲಯದಿಂದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಬೇಕಾದ ಪ್ರಯತ್ನಗಳನ್ನು ಮಾಡುತ್ತೇವೆ ಎಂದಿದ್ದಾರೆ.
ರೈಬಾರ್ -2 ಕಾರ್ಯಕ್ರಮದಲ್ಲಿ ಭಾಗಿಯಾದ 30 ವೀರ ತಾಯಂದಿರನ್ನು ಉಲ್ಲೇಖಿಸಿ ಮಾತನಾಡಿದ ಅವರು, ಅವರ ಪ್ರೀತಿ ಪಾತ್ರರ ತ್ಯಾಗದ ಫಲವಾಗಿ ಭಾರತ ಇಂದು ಸುರಕ್ಷಿತವಾಗಿದೆ. ಅವರನ್ನು ನಾವೆಂದೂ ಮರೆಯಲಾರೆವು. ಉತ್ತರಾಖಂಡದ ಭೂಮಿ ಅನೇಕ ಧೈರ್ಯಶಾಲಿ ಪುತ್ರರನ್ನು ದೇಶಕ್ಕೆ ನೀಡಿದೆ. ಉತ್ತರಾಖಂಡದ ಸೈನಿಕರು ಮತ್ತು ಮಹಿಳೆಯರು ಶತ್ರುಗಳನ್ನು ಎದುರಿಸುವುದರಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಪರಿಸರ ಸಂರಕ್ಷಣೆ, ಪ್ರವಾಸೋದ್ಯಮ ಉತ್ತೇಜನ ಮತ್ತು ಉದ್ಯೋಗಕ್ಕಾಗಿ ಉತ್ತರಾಖಂಡ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.