ಬಂಟ್ವಾಳ : ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ವಕ್ಫ್ ಇಲಾಖೆಯಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ಕಾರ್ಯಗಾರ ಬಿ.ಸಿ.ರೋಡಿನ ತಲಪಾಡಿ ಬಳಿಯ ಅಲ್-ಖಝಾನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್. ಎಂ. ರಶೀದ್ ಹಾಜಿ, ವಕ್ಫ್ ಮಂಡಳಿಯಿಂದ ಹಲವಾರು ಸವಲತ್ತುಗಳು ಸಿಗಲಿದ್ದು, ಈ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳುವಂತೆ ತಾಲೂಕಿನ ಎಲ್ಲಾ ಜುಮಾ ಮಸೀದಿ ಹಾಗೂ ಮದ್ರಸಗಳ ಪದಾಧಿಕಾರಿಗಳಿಗೆ ತಿಳಿಸುತ್ತಾ ಕರ್ನಾಟಕ ಹಿಂದುಳಿದ ವರ್ಗದವರ ವತಿಯಿಂದ ನಡೆಸಲ್ಫಡುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗಳ ಬಗ್ಗೆ ಎಲ್ಲಾ ಜಮಾಅತಿನ ಪದಾಧಿಕಾರಿಗಳು ಸಭೆ ಸೇರಿ ಈ ಬಗ್ಗೆ ತಮ್ಮ ಮೊಹಲ್ಲಾದ ಎಲ್ಲಾ ಮನೆಗಳಿಗೆ ಈ ಸಮಾಜಿಕ ಹಾಗೂ ಶೈಕ್ಷಣಿಕದ ಬಗ್ಗೆ ಸೂಕ್ತವಾದ ಸಲಹೆಗಳನ್ನು ನೀಡಲು ತಿಳಿಸಿದರು.
ಅಲ್ಫಸಂಖ್ಯಾತರ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಹಾಗೂ ಹಿಂದುಳಿದ ಆಯೋಗದಿಂದ ಅಲ್ಫಸಂಖ್ಯಾತರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗಳ ಬಗ್ಗೆ ಅಲ್ಫಸಂಖ್ಯಾತರ ಕಲ್ಯಾಣ ಅಧಿಕಾರಿ ಶಾಬಿರ್ ಮುಲ್ಲಾ, ವಕ್ಫ್ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ವಕ್ಫ್ ಅಧಿಕಾರಿ ಎಂ. ಅಬೂಬಕ್ಕರ್, ಮಸೀದಿ, ಮದ್ರಸ, ದಫನ ಸ್ಥಳಗಳ ದಾಖಲೆಗಳನ್ನು ಕ್ರಮ ಬದ್ಧಗೊಳಿಸುವ ಬಗ್ಗೆ ಬಂಟ್ವಾಳ ಉಪ ತಹಶೀಲ್ದಾರರಾದ ಪರಮೇಶ್ವರ ನಾಯ್ಕ್, ಮತ್ತು ಅಲ್ಫಸಂಖ್ಯಾತರ ಅಭಿವೃದ್ಧಿ ನಿಗಮದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ವ್ಯವಸ್ಥಾಪಕರಾದ ಸೋಮಪ್ಪರವರು ಮಾಹಿತಿ ನೀಡಿದರು, ವೇದಿಕೆಯಲ್ಲಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಹಾಜಿ ಮುಹಮ್ಮದ್ ಶರೀಫ್ ಚೊಕ್ಕಬೆಟ್ಟು, ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಎಸ್. ಅಬ್ಬಾಸ್ರವರು ಉಪಸ್ಥಿತರಿದ್ಧರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.