ನವದೆಹಲಿ: ಜಮ್ಮು ಮತ್ತು ಕಾಶ್ಮೀರದಿಂದ ಸಂವಿಧಾನದ 370ನೇ ವಿಧಿ ಮತ್ತು 35 ಎ ಅನ್ನು ತೆಗೆದು ಹಾಕಿದ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿರುವ ಜಾಗತಿಕ ಕಾಶ್ಮೀರಿ ಪಂಡಿತ್ ವಲಸೆ (ಜಿಕೆಪಿಡಿ) ಸಂಸ್ಥೆಯು, ಸಮುದಾಯದ ಸಂಪೂರ್ಣ ಪುನಃಶ್ಚೇತನಕ್ಕಾಗಿ ಗೃಹ ಸಚಿವರ ಆಶ್ರಯದಲ್ಲಿ ಕಾಶ್ಮೀರಿ ಪಂಡಿತರ ಪ್ರತಿನಿಧಿ ಸಲಹಾ ಸಮಿತಿಯನ್ನು ಸ್ಥಾಪಿಸುವಂತೆ ಮನವಿ ಮಾಡಿಕೊಂಡಿದೆ.
ಬ್ಯಾಂಕಾಕ್ ಕಾಶ್ಮೀರಿ ಪಂಡಿತ್ ಅಸೋಸಿಯೇಶನ್ ಅಧ್ಯಕ್ಷ ದಲೀಪ್ ಕುಮಾರ್ ಬಕ್ಷಿ ನೇತೃತ್ವದ ಐದು ಜಿಕೆಪಿಡಿ ಸದಸ್ಯರ ತಂಡವು ಶನಿವಾರ ಬ್ಯಾಂಕಾಕ್ನಲ್ಲಿ ನಡೆದ Sawasdee ಕಾರ್ಯಕ್ರಮದಲ್ಲಿ ಮೋದಿಯನ್ನು ಭೇಟಿಯಾಗಿ ಈ ಮನವಿಯನ್ನು ಸಲ್ಲಿಸಿದೆ.
ವಿಕಾಸ್ ಮರ್ಹತಾ, ಸರ್ಲಾ ಪಂಡಿತಾ, ಉಷಾ ಫೊಟೆದಾರ್ ಮತ್ತು ಉಷಾ ಬಕ್ಷಿ ಅವರನ್ನು ಒಳಗೊಂಡ ಗುಂಪು ಪ್ರಧಾನಮಂತ್ರಿಯವರಿಗೆ ಜ್ಞಾಪಕ ಪತ್ರವನ್ನು ಹಸ್ತಾಂತರಿಸಿತು ಮತ್ತು ಭಾರತ ಸರ್ಕಾರವು ಪ್ರತಿನಿಧಿ ಸಲಹಾ ಸಮಿತಿಯನ್ನು ರಚಿಸಬೇಕು ಎಂಬ ಬೇಡಿಕೆಯನ್ನು ಪುರಸ್ಕರಿಸುವಂತೆ ವಿನಂತಿಸಿತು ಎಂದು ಜಿಕೆಪಿಡಿ ಪ್ರಕಟಣೆ ತಿಳಿಸಿದೆ.
“ನಮ್ಮ ಜ್ಞಾಪಕ ಪತ್ರದಲ್ಲಿ ನಾವು ಗೌರವಾನ್ವಿತ ಪ್ರಧಾನ ಮಂತ್ರಿಯನ್ನು ನಮ್ಮ ಏಕಮುಖ ಬೇಡಿಕೆಯನ್ನು ಪರಿಗಣಿಸುವಂತೆ ಕೋರಿದ್ದೇವೆ. ಭಾರತ ಸರ್ಕಾರವು ಕಾಶ್ಮೀರಿ ಪಂಡಿತರ ಪ್ರತಿನಿಧಿ ಸಲಹಾ ಸಮಿತಿಯನ್ನು ರಚಿಸುವ ಅಗತ್ಯವಿದೆ, ಆ ಸಮಿತಿಯು ಗೃಹ ವ್ಯವಹಾರಗಳ ಸಚಿವ ಅಮಿತ್ ಶಾ ಅವರ ಆಶ್ರಯದಲ್ಲಿ ಕೆಲಸ ಮಾಡಬಹುದಾಗಿದೆ” ಎಂದು ಹೇಳಿದೆ.
“ಚೆಲ್ಲಾಪಲ್ಲಿಯಾಗಿರುವ 700,000 ಕಾಶ್ಮೀರಿ ಪಂಡಿತರ ಪರವಾಗಿ ನಾವು ನಿಮ್ಮ ಪ್ರಯತ್ನವನ್ನು ಬಲುವಾಗಿ ಪ್ರಶಂಸಿಸುತ್ತೇವೆ” ಎಂದು ಅದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.