ನವದೆಹಲಿ: ಸಾಂಪ್ರದಾಯಿಕ ಇಂಧನ ಚಾಲಿತ ಎಲ್ಲಾ 5 ಲಕ್ಷ ಸರ್ಕಾರಿ ವಾಹನಗಳನ್ನು ಹಂತಹಂತವಾಗಿ ಇ-ವೆಹಿಕಲ್ ಆಗಿ ಪರಿವರ್ತಿಸುವುದಾಗಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಘೋಷಿಸಿದ್ದಾರೆ.
ನವದೆಹಲಿಯಲ್ಲಿ ಎಂಐಬಿ ಖರೀದಿಸಿದ ಎಲೆಕ್ಟ್ರಿಕ್ ವಾಹನಗಳಿಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
“ವೆಚ್ಚ ಪರಿಣಾಮಕಾರಿತ್ವದ ಜೊತೆಗೆ, ಇ-ವಾಹನಗಳು ಪರಿಸರ ಸ್ನೇಹಿಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ತಪ್ಪಿಸುತ್ತದೆ. ಚಳಿಗಾಲದಲ್ಲಿ ದೆಹಲಿಯಲ್ಲಿ ಸಂಭವಿಸುವ ಹೆಚ್ಚಿನ ಮಟ್ಟದ ಮಾಲಿನ್ಯವನ್ನು ತಡೆಯುವಲ್ಲಿಯೂ ಇ-ವಾಹನಗಳು ಪ್ರಮುಖ ಪಾತ್ರ ವಹಿಸುತ್ತವ” ಎಂದು ಸಚಿವರು ಹೇಳಿದ್ದಾರೆ.
ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಹಿಂದಿನ ಸರ್ಕಾರದ 15 ವರ್ಷಗಳ ಅವಧಿಯಲ್ಲಿ ಮಾಲಿನ್ಯದ ಬಗ್ಗೆ ಚರ್ಚೆಗಳು ಮಾತ್ರ ನಡೆದಿತ್ತು, ಆದರೆ ಎನ್ಡಿಎ ನೇತೃತ್ವದ ಸರ್ಕಾರವು ಮಾಲಿನ್ಯದ ಅಪಾಯವನ್ನು ನಿವಾರಿಸಲು ದೃಢವಾದ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.
ಈಸ್ಟರ್ನ್ ಪೆರಿಫಿರಲ್ ಎಕ್ಸ್ಪ್ರೆಸ್ವೇ ನಿರ್ಮಾಣದಿಂದಾಗಿ ದೆಹಲಿ-ಎನ್ಸಿಆರ್ನಲ್ಲಿ ಕಡಿಮೆ ಮಟ್ಟದಲ್ಲಿ ಮಾಲಿನ್ಯ ಉಂಟಾಗಿದೆ ಎಂದು ಜಾವ್ಡೇಕರ್ ಮಾಹಿತಿ ನೀಡಿದ್ದಾರೆ.
Union Minister for Environment, Forest & Climate Change and Information & Broadcasting @PrakashJavdekar flags off the #ElectricVehicles procured by @MIB_India, at Shastri Bhawan, in #NewDelhi pic.twitter.com/sPsNvWIx5K
— PIB India (@PIB_India) November 1, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.