ನವದೆಹಲಿ: ಸಮುದಾಯ ಜಲ ಕಾರ್ಯಕ್ರಮಗಳ ಮೂಲಕ 17 ಶತಕೋಟಿ ಲೀಟರ್ ನೀರನ್ನು ಉಳಿಸಿದ ಮತ್ತು ಸಾವಿರಾರು ಸಮುದಾಯದ ಸದಸ್ಯರ ಮೇಲೆ ಧನಾತ್ಮಕ ಪರಿಣಾಮ ಬೀರುವ ಪ್ರಯತ್ನ ನಡೆಸಿದ ಪೆಪ್ಸಿಕೊ ಇಂಡಿಯಾಗೆ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಗುರುವಾರ ಕಾರ್ಪೋರೇಟ್ ಎಕ್ಸಲೆನ್ಸ್ ಅವಾರ್ಡ್ ಅನ್ನು ಪ್ರದಾನಿಸಿದರು.
ಈ ಬಗ್ಗೆ ಟ್ವಿಟರ್ ಮೂಲಕ ಸಂತೋಷ ವ್ಯಕ್ತಪಡಿಸಿರುವ ಪೆಪ್ಸಿಕೋ ಇಂಡಿಯಾ, “ಪೆಪ್ಸಿಕೋ ಇಂಡಿಯಾಗೆ ಪ್ರಶಸ್ತಿ ಪ್ರದಾನಿಸಿದ ಪಾಂಪಿಯೋ ಅವರಿಗೆ ಧನ್ಯವಾದಗಳು. ಸುಸ್ಥಿರ ನೀರಿಗಾಗಿ ನಡೆಸಿದ ಕಾರ್ಯಕ್ಕೆ ಅವಾರ್ಡ್ ಫಾರ್ ಕಾರ್ಪೋರೇಟ್ ಎಕ್ಸಲೆನ್ಸ್ ಪಡೆದುಕೊಂಡಿದ್ದೇವೆ. ಈ ಪ್ರಶಸ್ತಿ ಪಡೆದುಕೊಂಡಿದ್ದಕ್ಕಾಗಿ ಹೆಮ್ಮೆಪಡುತ್ತೇವೆ” ಎಂದಿದೆ.
1999ರಲ್ಲಿ ಅವಾರ್ಡ್ ಫಾರ್ ಕಾರ್ಪೋರೇಟ್ ಎಕ್ಸಲೆನ್ಸ್ ಅನ್ನು ಆರಂಭಿಸಲಾಗಿದೆ. ತಮ್ಮ ವ್ಯವಹಾರ ಪ್ರದೇಶದಲ್ಲಿನ ಸಮುದಾಯದ ಏಳಿಗೆಗಾಗಿ ಅನನ್ಯ ಕೊಡುಗೆಯನ್ನು ನೀಡುತ್ತಿರುವ ಯುಎಸ್ ಕಂಪನಿಗಳಿಗೆ ಈ ಪ್ರಶಸ್ತಿಯನ್ನು ಪ್ರದಾನಿಸಲಾಗುತ್ತದೆ.
“ಇಂದು ನಾವು ಪೆಪ್ಸಿಕೋದ ಪ್ರಾದೇಶಿಕ ಅಂಗಗಳಲ್ಲಿ ಒಂದಾದ ಪೆಪ್ಸಿಕೋ ಇಂಡಿಯಾವನ್ನು ಗೌರವಿಸುತ್ತೇವೆ. ಇದು ಭಾರತದ ಅತಿದೊಡ್ಡ ಆಲೂಗಡ್ಡೆ ಖರೀದಿದಾರ ಮತ್ತು ಇದು 24,000 ಸಣ್ಣ ಭಾರತೀಯ ರೈತರಿಂದ ಸುಸ್ಥಿರತೆಯನ್ನು ನೀಡುವ ಮೂಲಕ ತನ್ನ ಶಕ್ತಿಯನ್ನು ಉತ್ತಮ ಕಾರ್ಯಕ್ಕೆ ಬಳಸುತ್ತಿದೆ. ಒತ್ತಡಕ್ಕೊಳಗಾದ ಪ್ರದೇಶಗಳಲ್ಲಿ ನೀರನ್ನು ಮರುಪೂರಣಗೊಳಿಸುವ ಗುರಿಯನ್ನು ಇದು ಹೊಂದಿದೆ, ಇದರ ಮೂಲಕ ಈಗಾಗಲೇ ಸುಮಾರು ಐದು ಶತಕೋಟಿ ಲೀಟರ್ ನೀರನ್ನು ಉಳಿತಾಯ ಮಾಡಿದೆ” ಎಂದು ಪಾಂಪಿಯೋ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.