ಲಕ್ನೋ: ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಅಯೋಧ್ಯೆಯಲ್ಲಿ ಶ್ರೀರಾಮನ ಬಗೆಗಿನ ಡಿಜಿಟಲ್ ಮ್ಯೂಸಿಯಂ ಅನ್ನು ನಿರ್ಮಿಸುವ ಪ್ರಸ್ತಾಪಕ್ಕೆ ಉತ್ತರಪ್ರದೇಶ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಈ ಮಾಹಿತಿಯನ್ನು ಸಂಪುಟ ಸಚಿವ ಶ್ರೀಕಾಂತ್ ಶರ್ಮಾ ಸುದ್ದಿಗಾರರಿಗೆ ನೀಡಿದರು.
“ಅಯೋಧ್ಯೆಯನ್ನು ಸುಂದರಗೊಳಿಸುವ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಉತ್ತರಪ್ರದೇಶ ಸಂಪುಟ ಅಂಗೀಕರಿಸಿದೆ. ಶ್ರೀರಾಮನ ಜೀವನ ಆಧಾರಿತ ಡಿಜಿಟಲ್ ಮ್ಯೂಸಿಯಂ, ಫುಡ್ ಪ್ಲಾಜಾ, ಲ್ಯಾಂಡ್ ಸ್ಕೇಪಿಂಗ್ ಮತ್ತು ಶ್ರೀರಾಮ ಪ್ರತಿಮೆಯು ಅಯೋಧ್ಯಾದಲ್ಲಿ ನಿರ್ಮಾಣವಾಗಲಿದೆ. ಸಂಪುಟವು 446.46 ರೂಪಾಯಿ ವೆಚ್ಚದಲ್ಲಿ ಅಯೋಧ್ಯೆಯ ಸದರ್ ತಹಸಿಲ್ನ ಮೀರ್ಪುರ ಗ್ರಾಮದಲ್ಲಿ 61.3807 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನುಮೋದನೆಯನ್ನು ನೀಡಿದೆ.
ಸರ್ಕಾರವು 2019-20ರ ಸಾಲಿನ ಆರ್ಥಿಕ ವರ್ಷದಲ್ಲಿ ಯೋಜನೆಗೆ 100 ಕೋಟಿ ರೂಪಾಯಿಯನ್ನು ಅನುಮೋದಿಸಿದೆ.
ಅಲ್ಲದೇ, ಯುಪಿ ಸಂಪುಟವು ವಾರಣಾಸಿಯಲ್ಲಿ ಪ್ರವಾಸಿ ಪೊಲೀಸ್ ಠಾಣೆ ಸ್ಥಾಪಿಸಲು ಅನುಮೋದನೆ ನೀಡಿದ್ದು, ಇದು ಗೃಹ ಇಲಾಖೆಯ ವ್ಯಾಪ್ತಿಯಲ್ಲಿದೆ ಎಂದು ಶರ್ಮಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.