ನವದೆಹಲಿ: ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಲಡಾಖ್ನ ಕೈಮಗ್ಗ ಉಣ್ಣೆ ಖಾದಿ ಶಾಲ್ ಅನ್ನು ಮತ್ತು ರತ್ನಂ ಪೆನ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
‘ಕಾಲ್ ಆಫ್ ಲಡಾಖ್’ ಎಂದು ಕರೆಯಲ್ಪಡುವ ಶಾಲ್ ಲಡಾಖಿನ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ. ಇದರ ನಾಲ್ಕು ತುದಿಯಲ್ಲೂ ಅಲಂಕಾರಿಕ ಜರಿತಾರಿಗಳಿವೆ. ಹೊಂದಿದೆ. ಇದಕ್ಕೆ ಬಳಸಲಾದ ನೂಲನ್ನು ಅತ್ಯುತ್ತಮ ಕುರಿ ಉಣ್ಣೆಯನ್ನು ಬಳಸಿ ಕೈಯಿಂದ ತಯಾರಿಸಲಾಗಿದೆ. ಲಡಾಖ್ ಮಹಿಳೆಯರು ಚರಕವನ್ನು ಬಳಸಿ ನೂಲು ತೆಗೆದಿದ್ದಾರೆ.
ಕೆ.ವಿ.ರತ್ನಂ ಅವರ ಹೆಸರಿನ ರತ್ನಂ ಪೆನ್ (ಮೂಲತಃ ರಾಜಮಂಡ್ರಿಯಲ್ಲಿರುವ ಅಕ್ಕಸಾಲಿಗ ಕುಟುಂಬದವರು) ಅನ್ನು ಮಹಾತ್ಮ ಗಾಂಧಿಯವರು ಬಳಸಿ ಸುಪ್ರಸಿದ್ಧಗೊಳಿಸಿದ್ದರು. ಈ ಪೆನ್ ಈಗಲೂ ತಯಾರಾಗುತ್ತಿದೆ. ರತ್ನಂ ಅವರ ವಂಶಸ್ಥರ ಒಡೆತನದ ಕೆ.ವಿ.ರತ್ನಂ ಮತ್ತು ಸನ್ಸ್ – ರತ್ನಂ ಬಾಲ್ಪೆನ್ ವರ್ಕ್ಸ್ ಎಂಬ ಕಂಪನಿಯು ಇದನ್ನು ಇಂದಿಗೂ ಉತ್ಪಾದಿಸುತ್ತಿದೆ. ಇಂದು ಕೂಡ, ಇದು ಡ್ರಾಪ್ಪರ್ ಮತ್ತು ಜರ್ಮನಿಯ ಜೀನಿಯಸ್ ಇರಿಡಿಯಮ್ ನಿಬ್ ಬಳಸಿ ಶಾಯಿ ತುಂಬುವ ಬ್ಯಾರೆಲ್ ಹೊಂದಿದೆ. ಭಾರತದ ಸ್ವಾತಂತ್ರ್ಯದ ಸಂದರ್ಭದಲ್ಲಿ ಮಹಾತ್ಮ ಗಾಂಧಿ 31,000 ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದರು. ಇದರಲ್ಲಿನ ಅನೇಕ ಪತ್ರಗಳನ್ನು 1934 ರಲ್ಲಿ ರತ್ನಂ ಅವರು ತಯಾರಿಸಿದ ಪೆನ್ನು ಬಳಸಿ ಬರೆದಿದ್ದಾರೆ ಎಂಬುದು ವಿಶೇಷ. ತಮ್ಮ ಸ್ವದೇಶಿ ಚಳುವಳಿಗೆ ಪೂರಕವಾಗಿ ಅವರು ಇದನ್ನು ಬಳಸುತ್ತಿದ್ದರು.
ಮಾರ್ಕೆಲ್ ಅವರು ಮೂರು ದಿವಸಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದು, ಗುರುವಾರ ನವದೆಹಲಿಗೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹಲವು ಸುತ್ತಿನ ದ್ವಿಪಕ್ಷೀಯ ಮಾತುಕತೆಗಳನ್ನು ಅವರು ನಡೆಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.