ಭಾರತದ ಸುಂದರ ಮತ್ತು ಅಭಿವೃದ್ದಿ ಹೊಂದಿದ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ವೇಗವಾದ ಬೆಳವಣಿಗೆ ಮತ್ತು ಇಲ್ಲಿನ ಸುಂದರ ಹವಾಮಾನ ಲಕ್ಷಾಂತರ ವಲಸಿಗರಿಗೆ ಇದು ಮನೆಯಾಗಿ ಪರಿವರ್ತಿಸಿದೆ. ನಗರದ ಬೆಳವಣಿಗೆಯ ಆಧಾರದ ಮೇಲೆ ಹೇಳುವುದಾದರೆ ಬೆಂಗಳೂರು ವಿಶ್ವದ ಅಗ್ರಗಣ್ಯ ನಗರಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತದೆ ಎಂದರೆ ಅತಿಶಯೋಕ್ತಿಯಾಗದು.
ಆದರು, ಬಗೆಹರಿಸಿದರೂ ಮುಗಿಯದಷ್ಟು ಸಮಸ್ಯೆಯನ್ನು ನಗರ ಹೊಂದಿದೆ, ಅದು ಸಾಮಾಜಿಕ ಸಮಸ್ಯೆಯಿಂದ ಹಿಡಿದು ಪರಿಸರಕ್ಕೆ ಸಂಬಂಧಪಟ್ಟಂತ ಸಮಸ್ಯೆಯವರೆಗೂ. ನಗರದ ಮುನಿಸಿಪಾಲಿಟಿ ಸಂಸ್ಥೆಯಾದ ಬಿಬಿಎಂಪಿ ತನ್ನ ಅಸಾಧಾರಣ ಪರಿಶ್ರಮದಿಂದ ತೊಂದರೆಗಳನ್ನು ನಿವಾರಿಸಲು ಕಾರ್ಯಪ್ರವೃತ್ತವಾಗಿದೆ. ಈ ಕಾರ್ಯವನ್ನು ಸುಲಭವಾಗಿಸಲು ಪಕ್ಷೇತರ ನಾಗರೀಕ ಗುಂಪಾದ ಬೆಂಗಳೂರು ರಾಜಕೀಯ ಕಾರ್ಯಾಗಾರ ಸಮಿತಿ (Bangalore Political Action Committee, B.PAC) ಬೆಂಗಳೂರಿನ ಆಡಳಿತವನ್ನು ಸುಧಾರಿಸಲು ಮತ್ತು ಪ್ರತಿಯೊಬ್ಬ ಬೆಂಗಳೂರಿಗರ ಜೀವನ ಮಟ್ಟವನ್ನು ಹೆಚ್ಚಿಸಲು ಕಾರ್ಯನಿರ್ವಹಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಬೆಂಗಳೂರು ರಾಜಕೀಯ ಕಾರ್ಯಾಗಾರ ಸಮಿತಿಯು, ಸಾರ್ವಜನಿಕರ ಒಳಿತಿಗಾಗಿ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಅವರಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದೆ.
ಇಂದು ನಾವು ಬಿ.ಪ್ಯಾಕ್ ಗುರುತಿಸಿದಂತ ಹಲವು ನಾಯಕರುಗಳಲ್ಲಿ ಒಬ್ಬರಾದ ಜಕ್ಕೂರು ವಾರ್ಡಿನ ಗಿರೀಶ್ ಬಿ. ಪುಟ್ಟಣ್ಣನವರ ಕೆಲಸದ ಬಗ್ಗೆ ಒಂದು ಸಂದರ್ಶನವನ್ನು ಮಾಡಿದ್ದೇವೆ. ಗಿರೀಶ್ ಅವರು ಕಳೆದೆರಡು ವರ್ಷಗಳಿಂದ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಮುಖ್ಯವಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಅವರು ಸಾಮಾಜಿಕ ಸಮಸ್ಯೆಗಳ ವೇದಿಕೆ ಎಂದು ಹೆಸರು ನೀಡಿದ್ದಾರೆ. ಇವರು ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಅದನ್ನು ಬಗೆಹರಿಸಲು ವಾಟ್ಸಾಪ್ ಗುಂಪನ್ನು ಬಳಸುತ್ತಾರೆ.
ಯಾಕೆ ಸಾಮಾಜಿಕ ಸಮಸ್ಯೆಗಳ ವೇದಿಕೆ ಬೇರೆ ಎಲ್ಲದಕಿಂತ ವಿಭಿನ್ನ ?
ಉತ್ತರ ಬೆಂಗಳೂರಿನ ಅಮೃತಹಳ್ಳಿ ಕೆರೆಯ ಬಳಿ ರಾಜಕಾಲುವೆ ನಿರ್ಮಾಣದ ಸಮಯದಲ್ಲಿ ಕೊಳಚೆ ನೀರಿನ ಕೊಳವೆ ಆಕಸ್ಮಿಕವಾಗಿ ಒಡೆದುಹೋಗಿ ಶುದ್ದವಾಗಿದ್ದ ಕೆರೆಯ ನೀರು ಸಂಸ್ಕರಿಸದೆ ಇರದ ಕೊಳಚೆ ನೀರಿನಿಂದ ಕಲುಶಿತಗೊಂಡಿತು. ಬಿಬಿಎಂಪಿ ಕಾರ್ಮಿಕರು ತಕ್ಷಣಕ್ಕೆ ತಾತ್ಕಾಲಿಕ ಮಣ್ಣಿನ ಕಟ್ಟೆಯನ್ನು ಕಟ್ಟಿ ನೀರು ಕೆರೆಗೆ ಹೋಗದಂತೆ ತಡಿಯಲು ಪ್ರಯತ್ನಿಸಿದರೂ ನೀರಿನ ರಭಸ ಜೋರಾಗಿದ್ದ ಕಾರಣ ಅದು ಏನು ಉಪಯೋಗವಾಗಲಿಲ್ಲ. ಬದಲಿಗೆ ಸಮಸ್ಯೆಯನ್ನು ಇನ್ನು ದ್ವಿಗುಣ ಮಾಡಿತು.
ಈ ಸಮಸ್ಯೆ ದೊಡ್ಡದಾದಂತೆ ಕೆರೆ ಸುತ್ತಮುತ್ತಲ ಜನರು ಈ ಸಮಸ್ಯೆಯ ಬಗ್ಗೆ ಬಿಬಿಎಂಪಿಯ ಅಧಿಕಾರಿಗಳಿಗೆ ತಿಳಿಸಿದರು, ಆದರೆ ಅದರಿಂದ ಹೆಚ್ಚೇನೂ ಉಪಯೋಗವಾಗಲಿಲ್ಲ. ಆಗ ಸಾಮಾಜಿಕ ಸಮಸ್ಯೆಗಳ ವೇದಿಕೆ ಮಧ್ಯಸ್ಥಿಕೆ ವಹಿಸಿತು.
“ನಾವು ಸ್ಥಳಿಯರು, ಬಿಬಿಎಂಪಿ ಅಧಿಕಾರಿಗಳು, ಮತ್ತು ಆ ವಾರ್ಡಿನ ಬಿಬಿಎಂಪಿ ಸದಸ್ಯರನ್ನು ವಾಟ್ಸಾಪ್ ಗುಂಪಿನಲ್ಲಿ ಸೇರಿಸಿ ಅವರಿಗೆ ಅಲ್ಲಿನ ಸಮಸ್ಯೆಯ ಬಗ್ಗೆ ತಿಳಿಸಿದೆವು. ಇವರೆಲ್ಲರ ಪರಿಶ್ರಮ ಮತ್ತು ಸಹಾಯದಿಂದ ಆ ಸಮಸ್ಯೆ ಬಗೆಹರಿಯಿತು. ಈಗ ಕೆರೆಯನ್ನು ಸ್ವಚ್ಚಗೊಳಿಸಿ ರಾಜಕಾಲುವೆಯ ಕೊಳವೆಯನ್ನು ಬೇರೆಡೆಗೆ ಮಾರ್ಗ ಬದಲಾಯಿಸಲಾಗಿದೆ.” ಎಂದು ಗಿರೀಶ್ ಪುಟ್ಟಣ ಹೇಳುತ್ತಾರೆ.
ಎರಡು ವರ್ಷಗಳ ಅವಧಿಯಲ್ಲಿ 500 ಕ್ಕೂ ಹೆಚ್ಚು ಸಮಸ್ಯೆಯನ್ನು ಬಗೆಹರಿಸಲಾಗಿದೆ
ಈ ಸಮಸ್ಯೆಯು ಗಿರೀಶ್ ಬಿ. ಪುಟ್ಟಣ ಮತ್ತು ಅವರ 170 ಜನರ ತಂಡ ಮಾಡಿರುವ 500ಕ್ಕೂ ಹೆಚ್ಚು ಕೆಲಸಗಳಲ್ಲಿ ಒಂದು.
“ನಾನು ಗಮನಿಸಿದ ಹಾಗೆ ಅಧಿಕಾರಿಗಳಿಗೆ ಸಾರ್ವಜನಿಕರು ಅನುಭವಿಸುವ ಸಮಸ್ಯೆಗಳ ಬಗ್ಗೆ ಸ್ವಲ್ಪವೂ ಅರಿವೇ ಇರುವುದಿಲ್ಲ. ಇದೆ ಸಮಯದಲ್ಲಿ ಸಾರ್ವಜನಿಕರು ಅನುಭವಿಸುವ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರಗಳನ್ನು ಹೊಂದಿರುವ ಪ್ರಜ್ಞಾಪೂರ್ವ ನಾಗರೀಕರು ಇದ್ದರು. ಆದರೆ ಈ ಸಮಸ್ಯೆಗಳಿಗೆ ಪರಿಹಾರವನ್ನು ನಾವು ಯಾರಿಗೆ ತಿಳಿಸಬೇಕು ಎನ್ನುವುದರ ಅರಿವು ನಮಗಿರಲಿಲ್ಲ” ಎಂದು ಸಾಮಾಜಿಕ ಸಮಸ್ಯೆಗಳ ವೇದಿಕೆ ಪ್ರಾರಂಭವಾದ ಬಗ್ಗೆ ಹೇಳಿಕೊಂಡರು.
ಬೆಂಗಳೂರು ನಗರದಲ್ಲಿರುವ ಹಲವು ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ ಮತ್ತು ಹಲವು ಅಪಾರ್ಟ್ಮೆಂಟ್ ಸಂಘಗಳ ಜೊತೆ ಚರ್ಚೆ ನಡೆಸಿ, 2017ರಲ್ಲಿ ಸಾಮಾಜಿಕ ಸಮಸ್ಯೆಗಳ ವೇದಿಕೆಯನ್ನು ಆರಂಭಿಸಿದರು. ಅವರು ನಡೆಸಿದ ಚರ್ಚೆಗಳು, ನಗರದಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಹಿಡಿಯಲು ಸಹಾಯವಾಯಿತು. ಅವರು ಈ ಎಲ್ಲ ಸಂಘ ಸಂಸ್ಥೆಗಳಿಂದ ಆಯ್ದ 170 ಜನರನ್ನು ಒಳಗೊಂಡಂತೆ ಒಂದು ವಾಟ್ಸಾಪ್ ಗ್ರೂಪ್ ಮಾಡಿದರು.
ಇದರಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ಸ್ಥಳೀಯ ನಾಗರೀಕರ ಮತ್ತು ಸರ್ಕಾರಿ ಅಧಿಕಾರಿಗಳ ನಡುವಿನ ಸಂಪರ್ಕದಂತೆ ಕೆಲಸ ನಿರ್ವಹಿಸುತ್ತಾರೆ. ತಮ್ಮ ವಾರ್ಡಿನಲ್ಲಿ ನಾಗರೀಕರು ಅನುಭವಿಸುವ ಸಮಸ್ಯೆಗಳನ್ನು, ಅದು ಸರಿ ಇಲ್ಲದ ರಸ್ತೆಯಿಂದ ಹಿಡಿದು ಒಳಚರಂಡಿ ಸಮಸ್ಯೆ, ಅಥವಾ ಸರಿಯಾಗಿ ನೀರು ಬರದೆ ಇರುವುದು. ಈ ಸಮಸ್ಯೆಗಳನ್ನು ಸಾಮಾಜಿಕ ಸಮಸ್ಯೆಗಳ ವೇದಿಕೆ ವಾಟ್ಸಾಪ್ ಗ್ರೂಪ್ಗೆ ಕಳಿಸಿ ಅದರಲ್ಲಿ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅದು ಬಿಬಿಎಂಪಿ (Bruhat Bengaluru Mahanagar Palike) ಇರಲಿ, ಬಿಡಬ್ಲ್ಯೂಎಸ್ಎಸ್ ಬಿ (Bangalore Water Supply and Sewerage Board) ಇರಲಿ ಅಥವಾ ಬೆಸ್ಕಾಂ (Bangalore Electricity Supply Company) ಆಗಿರಲಿ ಬಗೆಹರಿಸಲು ಕ್ರಮ ಕೈಗೊಳ್ಳುತ್ತಾರೆ.
ವಿದ್ಯಾರಣ್ಯಪುರಂ ಇಂದ ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣವನ್ನು ತಲುಪಲು ಹರಸಾಹಸ ಪಡುತ್ತಿದ್ದ ವಿದ್ಯಾರಣ್ಯಪುರಂನ ನಿವಾಸಿಗಳು ಸಾಮಾಜಿಕ ಸಮಸ್ಯೆಗಳ ವೇದಿಕೆ ವಾಟ್ಸಾಪ್ ಗ್ರೂಪಿನ ಮೂಲಕ ಸಹಿ ಅಭಿಯಾನವನ್ನು ಪ್ರಾರಂಭಿಸಿ. ಬಿಎಂಟಿಸಿಗೆ ಪತ್ರವನ್ನು ಬರೆದು, 2018 ಡಿಸೆಂಬರ್ನಲ್ಲಿ ವಿದ್ಯಾರಣ್ಯಪುರಂ ಮತ್ತು ಗೊರಗುಂಟೆಪಾಳ್ಯದ ನಡುವೆ ಬಸ್ಸಿನ ಸಂಪರ್ಕವನ್ನು ಆರಂಭಿಸಲಾಯಿತು.
“ಕೆಲವೊಮ್ಮೆ ಆಗಿರುವ ಸಮಸ್ಯೆಯು ಯಾವ ಇಲಾಖೆಯ ಸುಪರ್ದಿಯ ಕೆಳಗೆ ಬರುತ್ತದೆಂಬ ಗೊಂದಲ ಅಧಿಕಾರಿಗಳ ನಡುವೆಯೇ ಉದ್ಭವಿಸಿದಾಗ ನಾವು ಚುನಾಯಿತ ಪ್ರತಿನಿಧಿಗಳನ್ನು ನಮ್ಮ ಸಾಮಾಜಿಕ ಸಮಸ್ಯೆಗಳ ವೇದಿಕೆ ವಾಟ್ಸಾಪ್ ಗ್ರೂಪಿನಲ್ಲಿ ಸೇರಿಸಿ ಸಮಸ್ಯೆಗೆ ಎಲ್ಲರೂ ಒಪ್ಪುವ ಪರಿಹಾರವನ್ನು ಸೂಚಿಸಿ ಬಗೆಹರಿಸುತ್ತಿದ್ದೆವು. ಏನೇ ಆದರು ನಮಗೆ ಎಂದಿಗೂ ನಾಗರೀಕರ ಸಮಸ್ಯೆ ಬಗೆಹರಿಸುವುದು ನಮ್ಮ ಏಕಮಾತ್ರ ಗುರಿಯಾಗಿತ್ತು” ಎಂದು ಗಿರೀಶ್ವ ಅವರು ಹೇಳುತ್ತಾರೆ.
ಸಾರ್ವಜನಿಕರಿಗೆ ನಮ್ಮ ಮೊದಲ ಆದ್ಯತೆ
ಸಾಮಾಜಿಕ ಸಮಸ್ಯೆಗಳ ವೇದಿಕೆಯಿಂದ ಪರಿಹರಿಸಲ್ಪಟ್ಟ ಇನ್ನೊಂದು ಬಹುಮುಖ್ಯ ಸಮಸ್ಯೆ ಎಂದರೆ, ಥಣಿಸಂದ್ರ ರೈಲು ಕೆಳ ರಸ್ತೆಯ ಬಳಿ ಉಕ್ಕಿ ಹರಿಯುತ್ತಿದ್ದ ಒಳ ಚರಂಡಿ ನೀರು. “ಅಲ್ಲಿ ಅಳವಡಿಸಿದ 6 ಇಂಚಿನ ಕೊಳವೆ ಸರಿಹೋಗದ ಕಾರಣ ಆ ರಸ್ತೆಗೆ ಎಷ್ಟು ಬಾರಿ ರಸ್ತೆ ಡಾಂಬರೀಕರಣ ಮಾಡಿ ಟಾರ್ ಹಾಕಿದರೂ ಒಳ ಚರಂಡಿ ನೀರು ಹರಿದು ಟಾರ್ ಕಿತ್ತು ಬರುತ್ತಿತು.” ಎಂದು ಆ ಸಮಸ್ಯೆಯ ಕುರಿತು ಹೇಳುತ್ತಾರೆ.
ಗಿರೀಶ್ ಪುಟ್ಟಣ್ಣನವರು ಸಮಸ್ಯೆಯನ್ನು ಬಗೆಹರಿಸಲು ಹೊಸ ಮಾರ್ಗವನ್ನು ಕಂಡು ಹಿಡಿದ ಕಾರಣ ಆ ಸಮಸ್ಯೆಯನ್ನು ಬಗೆಹರಿಸಲಾಯಿತು. ಇದೇ ರೀತಿಯ ಸಮಸ್ಯೆ ಜಕ್ಕೂರ್ ವಾರ್ಡಿನ ಎಂಸಿಇಸಿಎಚ್ಎಸ್ ಲೇಔಟ್ ಬಳಿ ಆದಾಗ ಸಾಮಾಜಿಕ ಸಮಸ್ಯೆಗಳ ವೇದಿಕೆಯ ಸದಸ್ಯರೊಬ್ಬರು ಆ ಸಮಸ್ಯೆಯನ್ನು ಬಗೆಹರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.