ಲಡಾಖ್: 17ನೇ ಶತಮಾನದ ಲಡಾಖ್ನ ರಾಜ ಸೆಂಗೆ ನಮ್ಗ್ಯಾಲ್ ಪ್ರತಿಮೆಯನ್ನು ಶುಕ್ರವಾರ ನೂತನ ಕೇಂದ್ರಾಡಳಿತ ಪ್ರದೇಶ ಲಡಾಖ್ನಲ್ಲಿ ಅನಾವರಣಗೊಳಿಸಲಾಗಿದೆ. 18 ಅಡಿ ಎತ್ತರದ ಪ್ರತಿಮೆ ಇದಾಗಿದೆ.
“ಲಡಾಖ್ಗೆ ಇತ್ತೀಚೆಗೆ ನೀಡಲಾದ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನದ ಸಂಭ್ರಮಾಚರಣೆಯ ಸಂದರ್ಭದಲ್ಲಿ, ಹೆಮಿಸ್ ಧಾರ್ಮಿಕ ಸಂಘವು ರಾಜ ಸೆಂಗೆ ನಮ್ಗ್ಯಾಲ್ ಅವರ ಹೊಸ ಪ್ರತಿಮೆಯನ್ನು ಈ ಪ್ರದೇಶದ ಜನರಿಗೆ ಅರ್ಪಣೆ ಮಾಡುತ್ತಿದೆ” ಎಂದು ವಜ್ರಯಾನ ಬೌದ್ಧಧರ್ಮದ ಡ್ರುಕ್ಪಾ ವಂಶಾವಳಿಯ ಆಧ್ಯಾತ್ಮಿಕ ಮುಖಂಡ ಗ್ಯಾಲ್ವಾಂಗ್ ಡ್ರುಕ್ಪಾ ಟ್ವೀಟ್ ಮಾಡಿದ್ದಾರೆ.
“ಈ ಪ್ರತಿಮೆಯು ಲಡಾಖ್ನ ಇತಿಹಾಸ, ಶಕ್ತಿ ಮತ್ತು ಗುರುತಿನ ಸಂಕೇತವಾಗಿದೆ. ಇದು ಸಿಲ್ಕ್ ರಸ್ತೆಯುದ್ದಕ್ಕೂ ದೊಡ್ಡ ಸಾಮ್ರಾಜ್ಯದ ಭವ್ಯ ಪರಂಪರೆಯನ್ನು ನೆನಪಿಸಿಕೊಡುತ್ತದೆ” ಎಂದು ಅವರು ಹೇಳಿದ್ದಾರೆ.
ಲಡಾಖಿನ ಯುವ ಕಲಾವಿದ ತ್ಸೆರಿಂಗ್ ಗ್ಯುರ್ಮೆಟ್ ಅವರು ಪ್ರತಿಮೆಯನ್ನು ಅದ್ಭುತವಾಗಿ ರಚಿಸಿದ್ದಾರೆ. ವರ್ಷಗಳ ಕಾಲ ಪರಿಶ್ರಮ ಪಟ್ಟು ಅವರು ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ. ಈ ಪ್ರತಿಮೆಯು ಲಡಾಖ್ನ ಏಕೀಕರಣ ಮತ್ತು ಅದರ ಸಂಸ್ಕೃತಿ ಮತ್ತು ಪರಂಪರೆಯ ಏಳಿಗೆಗಾಗಿ ಶ್ರಮಿಸಿದ ಸಿಂಗೇ ನಮ್ಗ್ಯಾಲ್ ನೀಡಿದ ಕೊಡುಗೆಗಳನ್ನು ಸ್ಮರಿಸುತ್ತದೆ.
ಲಡಾಖ್ ಅನ್ನು ಗುರುವಾರ ಕೇಂದ್ರಾಡಳಿತ ಪ್ರದೇಶವೆಂದು ಅಧಿಕೃತವಾಗಿ ಘೋಷಿಸಲಾಯಿತು. ಈ ಪ್ರತಿಮೆ ಲಡಾಖ್ ಜನರಿಗೆ ತಮ್ಮ ಸಾರ್ವಭೌಮತ್ವವನ್ನು ಮರಳಿ ಪಡೆಯುವುದನ್ನು ಮತ್ತು ಅವರ ಶ್ರೀಮಂತ ಸಾಂಸ್ಕೃತಿಕ ಗುರುತನ್ನು ಕಾಪಾಡಿಕೊಳ್ಳುವುದನ್ನು ನೆನಪಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.