ನವದೆಹಲಿ: ನವೆಂಬರ್ 1 ರಂದು ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರು ಭಾರತಕ್ಕೆ ಭೇಟಿಯನ್ನು ನೀಡಲಿದ್ದು, ಈ ಸಂದರ್ಭದಲ್ಲಿ ಭಾರತ ಮತ್ತು ಜರ್ಮನಿ ನಡುವೆ ಸುಮಾರು 20 ಒಪ್ಪಂದಗಳಿಗೆ ಸಹಿ ಬೀಳುವ ನಿರೀಕ್ಷೆ ಇದೆ.
ಐದನೇ ದ್ವೈವಾರ್ಷಿಕ ಅಂತರ್ ಸರ್ಕಾರಿ ಸಮಾಲೋಚನೆಗಳ (ಐಜಿಸಿ) ಅಂಗವಾಗಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮರ್ಕೆಲ್ ಅವರು ಮಾತುಕತೆಯನ್ನು ನಡೆಸಲಿದ್ದಾರೆ. ಮೋದಿ ಸಂಪುಟದ ಹಲವಾರು ಸಚಿವರುಗಳು, ಜರ್ಮನ್ ಸಚಿವರುಗಳು ಮತ್ತು 13 ಉದ್ಯಮ ದಿಗ್ಗಜರುಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಕೃಷಿ, ಹಸಿರು ನಗರ, ಆಯುರ್ವೇದ, ಮತ್ತು ಕೃತಕ ಬುದ್ಧಿಮತ್ತೆ ಮುಂತಾದ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಬೀಳಲಿದೆ.
ಗುರುವಾರ ಸಂಜೆ ವೇಳಗೆ ಆಗಮಿಸುವ ಮರ್ಕೆಲ್ ಮತ್ತು ಅವರ ನಿಯೋಗ, ಶುಕ್ರವಾರ ಪ್ರಧಾನಿ ಮೋದಿಯವರೊಂದಿಗೆ ಐಜಿಸಿ ಸ್ವರೂಪದಲ್ಲಿ ಮಾತುಕತೆ ನಡೆಸಲಿದೆ. ನಂತರ ಉಭಯ ಪಕ್ಷಗಳು ಹಲವಾರು ಒಪ್ಪಂದಗಳನ್ನು ಮಾಡಿಕೊಳ್ಳಲಿವೆ. ಸುಮಾರು 20 ಒಪ್ಪಂದಗಳಿಗೆ ಸಹಿ ಬೀಳಲಿದೆ ಎಂದು ಜರ್ಮನ್ ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಶನಿವಾರ, ಮಾರ್ಕೆಲ್ ಗುರುಗ್ರಾಮ್ನಲ್ಲಿನ ಬೃಹತ್ ಜರ್ಮನ್ ವಾಹನ ಸೌಲಭ್ಯಕ್ಕೆ ಭೇಟಿ ನೀಡಲಿದ್ದಾರೆ, ಇದು ಭಾರತದಾದ್ಯಂತ 15 ಕೇಂದ್ರಗಳನ್ನು ಹೊಂದಿದೆ.
ಶನಿವಾರ ಪ್ರಧಾನಿ ಮೋದಿ ಅವರೊಂದಿಗೆ ಮೆಟ್ರೋ ನಿಲ್ದಾಣಕ್ಕೂ ಭೇಟಿ ನೀಡಲಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.