ವಾಷಿಂಗ್ಟನ್: ಇದೇ ಮೊದಲ ಬಾರಿಗೆ ಅಮೆರಿಕ ರಾಜಧಾನಿ ವಾಷಿಂಗ್ಟನ್ನ ಪ್ರಸಿದ್ಧ ಡ್ಯುಲ್ಸ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದೆ. ಈ ಆಚರಣೆ ಪ್ರಯಾಣಿಕರಿಗೆ, ಕ್ಯಾಬಿನ್ಕ್ರೂ, ಏರ್ಪೋರ್ಟ್ ಸಿಬ್ಬಂದಿಗಳಿಗೆ ರಸದೌತಣ ನೀಡಿದೆ.
ಈ ದೀಪಾವಳಿ ಆಚರಣೆಯ ಹಿಂದಿನ ರೂವಾರಿಯಾದ ಮೆಟ್ರೋಪೊಲಿಟನ್ ವಾಷಿಂಗ್ಟನ್ ಏರ್ಪೋರ್ಟ್ ಅಥಾರಿಟಿಯ ಆಕಾಂಕ್ಷ ಶರ್ಮ ಅವರು, “ಈ ಪ್ರದೇಶ ಮತ್ತು ಏರ್ಪೋರ್ಟ್ ಎರಡಕ್ಕೂ ಈ ದೀಪಾವಳಿ ಆಚರಣೆ ಮೊದಲನೆಯದಾಗಿದೆ” ಎಂದಿದ್ದಾರೆ.
ಜಗತ್ತಿನ ಗೇಟ್ ವೇ ಎಂದೇ ಕರೆಯಲಾಗುವ ಡ್ಯುಲ್ಸ್ ಏರ್ಪೋರ್ಟ್, ವರ್ಷಕ್ಕೆ 24 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಣೆ ಮಾಡುತ್ತದೆ. 2017ರಲ್ಲಿ ಈ ಏರ್ಪೋರ್ಟ್ ಡ್ಯೂಲ್ಸ್ ಮತ್ತು ನವದೆಹಲಿ ನಡುವೆ ವಿಮಾನಯಾನ ಸಂಪರ್ಕವನ್ನು ಆರಂಭಿಸಿತ್ತು. ಈ ಪ್ರದೇಶದಲ್ಲಿ ಸುಮಾರು 65,000 ಅನಿವಾಸಿ ಭಾರತೀಯರು ವಾಸಿಸುತ್ತಿದ್ದಾರೆ.
ದೀಪಾವಳಿ ಆಚರಣೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶರ್ಮ ಅವರು, “ಭಾರತದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ನಾವು ಬಯಸಿದ್ದೆವು. ಭಾರತ ಮತ್ತು ಏಷ್ಯಾ ಮೂಲದ ಅನೇಕ ಪ್ರಯಾಣಿಕರನ್ನು ನಾವು ಹೊಂದಿದ್ದೇವೆ ಅವರೆಲ್ಲರೂ ಸೇರಿ ದೀಪಾವಳಿ ಆಚರಣೆ ಮಾಡಿದ್ದಾರೆ. ಆಚರಣೆಯನ್ನು ದೊಡ್ಡಮಟ್ಟದಲ್ಲಿ ಆಯೋಜನೆಗೊಳಿಸುವುದು ನಮ್ಮ ಉದ್ದೇಶವಾಗಿತ್ತು” ಎಂದಿದ್ದಾರೆ.
ಸ್ಟೆರ್ಲಿಂಗ್ ಮೂಲದ ನೃತ್ಯ ಡಾನ್ಸ್ ಅಕಾಡೆಮಿ ವತಿಯಿಂದ ಈ ಸಂದರ್ಭದಲ್ಲಿ ನೃತ್ಯವನ್ನು ಆಯೋಜಿಸಲಾಗಿತ್ತು. ಹೆನ್ನ ಆರ್ಟ್ ಪ್ರದರ್ಶನ, ವಿವಿಧ ಖಾದ್ಯಗಳ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.