ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಕಾಲ ಸೌದಿ ಅರೇಬಿಯಾ ಪ್ರವಾಸವನ್ನು ಹಮ್ಮಿಕೊಳ್ಳಲಿದ್ದು, ಈ ವೇಳೆ ಉಭಯ ದೇಶಗಳ ನಡುವೆ ಸುಮಾರು 12 ಒಪ್ಪಂದಗಳಿಗೆ ಸಹಿ ಬೀಳಲಿದೆ.
ಪ್ರಧಾನಿ ಮೋದಿಯವರ ಈ ಭೇಟಿಯು ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಅಭಿಪ್ರಾಯಿಸಿದ್ದಾರೆ.
“ರಕ್ಷಣಾ ಕೈಗಾರಿಕೆ, ನವೀಕರಿಸಬಹುದಾದ ಇಂಧನ, ನಾಗರಿಕ ವಿಮಾನಯಾನ ಮುಂತಾದ 12 ಒಪ್ಪಂದಗಳಿಗೆ ಸೌದಿಅರೇಬಿಯ ಮತ್ತು ಭಾರತ ಸಹಿ ಹಾಕುವ ಸಾಧ್ಯತೆ ಇದೆ. 2016ರ ಬಳಿಕ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಸೌದಿ ಅರೇಬಿಯಾಗೆ ಭೇಟಿ ನೀಡುವುದನ್ನು ನಾವು ಎದುರು ನೋಡುತ್ತಿದ್ದೇವೆ” ಎಂದು ರಿಯಾದ್ನಲ್ಲಿ ಇರುವ ಭಾರತದ ರಾಯಭಾರಿ ಅಸಫ್ ಸೈಯಿದ್ ಹೇಳಿದ್ದಾರೆ.
ಅಕ್ಟೋಬರ್ 28ರಂದು ಪ್ರಧಾನಿ ಮೋದಿ ಸೌದಿ ಅರೇಬಿಯಾಗೆ ತೆರಳಲಿದ್ದು, ಅಕ್ಟೋಬರ್ 29 ರಂದು ಅವರು ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ರನ್ನು ಭೇಟಿ ಮಾಡಲಿದ್ದಾರೆ. ಸೌದಿಯ ಸಾರ್ವಭೌಮ ಆಸ್ತಿ ನಿಧಿಯಾದ ‘ಪಬ್ಲಿಕ್ ಇನ್ವೆಸ್ಟೆಂಟ್ ಫಂಡ್’ ಆಯೋಜನೆಗೊಳಿಸುವ ಫ್ಯೂಚರ್ ಇನ್ವೆಸ್ಟೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.