ನವದೆಹಲಿ: ಭಾರತೀಯ ಸೇನಾ ಪಡೆಗಳನ್ನು ಆಧುನಿಕರಿಸುವ ಯಾವುದೇ ಅವಕಾಶವನ್ನು ಕಳೆದ ಐದು ವರ್ಷಗಳಲ್ಲಿ ನಮ್ಮ ಸರಕಾರ ವ್ಯರ್ಥ ಮಾಡಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿ ಮಾತನಾಡಿದ ಅವರು, ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಜಗತ್ತಿನಲ್ಲಿ ಯುದ್ಧಕ್ಕೆ ಸನ್ನದ್ಧವಾಗಿರುವ ಆಧುನಿಕ ಶಸ್ತ್ರಾಸ್ತ್ರಗಳನ್ನು, ಪರಿಕರಗಳನ್ನು ಸೇನಾಪಡೆಗಳು ಹೊಂದಿರುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದರು.
“ನಮ್ಮ ಶಾಸ್ತ್ರಾಸ್ತ್ರ ಪಡೆಗಳು ಆಧುನಿಕ ಪರಿಕರಗಳನ್ನು ಹೊಂದುವಂತೆ ಮಾಡುವ ಮತ್ತು ಸೇನಾಪಡೆಯನ್ನು ಬಲಿಷ್ಟಗೊಳಿಸುವ, ಸೈನಿಕರ ಆತ್ಮ ವಿಶ್ವಾಸವನ್ನು ವೃದ್ಧಿಸುವಂತಹ ಯಾವುದೇ ಅವಕಾಶವನ್ನು ನಾವು ಕೈಚೆಲ್ಲಲಿಲ್ಲ ಎಂಬುದನ್ನು ಕಳೆದ ಐದು ವರ್ಷಗಳಲ್ಲಿ ನೀವು ನೋಡಿದ್ದೀರಿ” ಎಂದಿದ್ದಾರೆ.
ಸೇನಾಪಡೆಗಳ ಆಧುನಿಕರಣ ಅನಿವಾರ್ಯ ಎಂದು ಹೇಳಿರುವ ಅವರು,” ಕಾಲ ಬದಲಾಗಿದೆ, ನಮ್ಮ ಸೇನಾಪಡೆಗಳು ಆಧುನಿಕರಣಗೊಳ್ಳಬೇಕಿದೆ, ನಮ್ಮ ಶಸ್ತ್ರಾಸ್ತ್ರ ಪರಿಕರಗಳು ಕೂಡ ಆಧುನಿಕವಾಗಬೇಕಿದೆ” ಎಂದಿದ್ದಾರೆ.
“ನಮ್ಮ ತರಬೇತಿಗಳು ಕೂಡ ಜಾಗತಿಕ ಗುಣಮಟ್ಟಕ್ಕೆ ಸಮಾನವಾಗಿರಬೇಕು. ಸಂಪನ್ಮೂಲಗಳ ಕೊರತೆಯಿಂದಾಗಿ ನಮ್ಮ ಸೈನಿಕರ ಮುಖದಲ್ಲಿ ಒತ್ತಡದ ಭಾವ ಮೂಡಬಾರದು” ಎಂದಿದ್ದಾರೆ.
ಸರ್ಕಾರ ಸೇನೆಗೆ ಆಧುನೀಕರಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಕ್ಷಿಪ್ರಗತಿಯಲ್ಲಿ ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.