ದುಬೈ : ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ದೀಪಾವಳಿ ಸಂಭ್ರಮ ಮನೆಮಾಡಿದೆ. ವಿವಿಧ ದೇಶಗಳಲ್ಲಿ ನೆಲೆಸಿರುವ ಹಿಂದುಗಳು, ಸಿಖ್ರು, ಬೌದ್ಧ ಧರ್ಮದವರು, ಜೈನರು ದೀಪಾವಳಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಿದ್ದಾರೆ.
ದುಬೈಯಲ್ಲಿ ನಡೆದ ದೀಪಾವಳಿ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ದುಬೈ ಪೊಲೀಸರು ಭಾರತದ ರಾಷ್ಟ್ರಗೀತೆಯನ್ನು ಮೊಳಗಿಸಿದ್ದಾರೆ. ಫೈಯರ್ ಮತ್ತು ಲೇಸರ್ ಶೋ, ಡಾನ್ಸ್ ಶೋ ಮುಂತಾದ ಹಲವು ಆಕರ್ಷಕ ಶೋಗಳ ಮೂಲಕ ದುಬೈ ಪೊಲೀಸರು ದೀಪಾವಳಿಯನ್ನು ಆಚರಿಸಿಕೊಂಡಿದ್ದಾರೆ.
ಈ ದೀಪಾವಳಿ ಆಚರಣೆಯನ್ನು ದುಬೈ ಪ್ರವಾಸೋದ್ಯಮ ಇಲಾಖೆಯು ಭಾರತದ ರಾಯಭಾರ ಕಚೇರಿಯ ಸಹಭಾಗಿತ್ವದಲ್ಲಿ ಆಯೋಜನೆಗೊಳಿಸಿತ್ತು.
ಈ ಬಗೆಗಿನ ವಿಡಿಯೋವನ್ನು ಗಲ್ಫ್ ನ್ಯೂಸ್ ಟ್ವಿಟರ್ ಮೂಲಕ ಹಂಚಿಕೊಂಡಿದೆ. ದುಬೈ ಪೊಲೀಸರು ಮೊಳಗಿಸಿದ ರಾಷ್ಟ್ರಗೀತೆಯನ್ನು ನೆರೆದಿದ್ದ ಅಪಾರ ಭಾರತೀಯ ಜನಸ್ತೋಮ ಪುನರುಚ್ಚರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ವಿವಿಧ ಸಂಗೀತಗಳೊಂದಿಗೆ ವರ್ಣರಂಜಿತವಾಗಿ ಪಟಾಕಿಗಳನ್ನು ಈ ವೇಳೆ ಸಿಡಿಸಲಾಗಿದೆ, ಆಕರ್ಷಕ ನೃತ್ಯಗಳನ್ನು ಪ್ರದರ್ಶನ ಮಾಡಲಾಗಿದೆ. ಸಾವಿರಾರು ಮಂದಿ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಂಡಿದ್ದಾರೆ.
ದುಬೈಯಲ್ಲಿ ಜರಗಿದ ಈ ದೀಪಾವಳಿ ಸಂಭ್ರಮವನ್ನು ನೋಡಿ ಜಗತ್ತಿನಾದ್ಯಂತ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
Viral: Dubai Police band plays India’s national anthem https://t.co/qaXylYCzcQ
— Gulf News (@gulf_news) October 26, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.