ನವದೆಹಲಿ: 17 ವರ್ಷದ ಶಾಟ್ ಪುಟ್ ಆಟಗಾರ ಇಂದ್ರಜಿತ್ ಸಿಂಗ್ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ.
ಈ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತಕ್ಕೆ ದೊರೆತ ಪ್ರಥಮ ಚಿನ್ನದ ಪದಕ ಇದಾಗಿದೆ. ಫೈನಲ್ ಪಂದ್ಯದಲ್ಲಿ 20.27 ಮೀ ದೂರ ಶಾಟ್ ಪುಟ್ ಎಸೆದು ಇಂದ್ರಜಿತ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಈಗಾಗಲೇ ಇಂದ್ರಜಿತ್ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಥಾಯ್ಲೆಂಡ್ನಲ್ಲಿ ಗ್ರ್ಯಾಂಡ್ ಪಿಕ್ಸ್ನಲ್ಲಿ ಅವರು ಮೂರು ಪದಕಗಳನ್ನು ಗೆದ್ದಿದ್ದಾರೆ, 2016ರ ರಿಯೋ ಒಲಿಂಪಿಕ್ಸ್ಗೂ ಅವರು ಆಯ್ಕೆಗೊಂಡಿದ್ದಾರೆ. ಅಲ್ಲದೇ ಚೀನಾದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಬಂಗಾರದ ಸಾಧನೆಯನ್ನು ಮಾಡಿದ್ದಾರೆ.
ಆದರೆ ದುರಾದೃಷ್ಟವೆಂದರೆ ಇಷ್ಟೆಲ್ಲಾ ಸಾಧನೆ ಮಾಡಿದ ಆಟಗಾರ ಇಂದ್ರಜಿತ್ ನಿರುದ್ಯೋಗಿ, ಅವರ ಕೈಯಲ್ಲಿ ಕೆಲಸವಿಲ್ಲ. ಚಿಕ್ಕ ವಯಸ್ಸಿನಲ್ಲೇ ತಂದೆ ತೀರಿಕೊಂಡ ಪರಿಣಾಮ ಅವರು ಆರ್ಥಿಕ ಸಂಕಷ್ಟ ಎದುರಿಸಬೇಕಾಯಿತು. ಆದರೂ ಅವರು ಕಷ್ಟಪಟ್ಟು ಕ್ರೀಡಾಪಟುವಾಗಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಆದರೆ ಅವರಿಗೊಂದು ಉದ್ಯೋಗ ನೀಡುವ ಸೌಜನ್ಯವನ್ನೂ ನಮ್ಮ ಸರ್ಕಾರ ತೋರಿಸಿಲ್ಲ ಎಂಬುದು ವಿಪರ್ಯಾಸ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.