ವಾಷಿಂಗ್ಟನ್: ಸುಲಲಿತ ವ್ಯಾಪಾರ ಶ್ರೇಯಾಂಕದಲ್ಲಿ ಭಾರತ ಕಳೆದ ಬಾರಿಗಿಂತ 14 ಸ್ಥಾನಗಳ ಜಿಗಿತವನ್ನು ಕಂಡು 63ನೇ ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ಮಹತ್ವದ ‘ಮೇಕ್ ಇನ್ ಇಂಡಿಯಾ’ ಯೋಜನೆ ಮತ್ತು ಇತರ ಸುಧಾರಣಾ ಕ್ರಮಗಳಿಂದಾಗಿ ಭಾರತ ಅಭೂತಪೂರ್ವ ಜಿಗಿತವನ್ನು ಕಂಡಿದೆ. ಮಾತ್ರವಲ್ಲದೇ, ಸತತ ಮೂರನೇ ಬಾರಿಗೆ ಭಾರತ ಟಾಪ್ 10 ಅತ್ಯುತ್ತಮ ಪ್ರದರ್ಶಕರಲ್ಲಿ ಒಬ್ಬನಾಗಿ ಹೊರಹೊಮ್ಮಿದೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದ ಚುಕ್ಕಾಣಿ ಹಿಡಿದಾಗ ಭಾರತವು ಸುಲಲಿತ ವ್ಯಾಪಾರ ಶ್ರೇಯಾಂಕದಲ್ಲಿ 142ನೇ ಸ್ಥಾನದಲ್ಲಿತ್ತು. ನಾಲ್ಕು ವರ್ಷಗಳ ಮೋದಿ ಸರ್ಕಾರದ ಸುಧಾರಣಾ ಕ್ರಮಗಳ ಬಳಿಕ 2018ರಲ್ಲಿ 100ನೇ ಸ್ಥಾನಕ್ಕೆ ಜಿಗಿತವನ್ನು ಕಂಡಿತು. ಕಳೆದ ವರ್ಷ 23 ಸ್ಥಾನಗಳ ಜಿಗಿತವನ್ನು ಕಂಡು 77ನೇ ಸ್ಥಾನವನ್ನು ಪಡೆದುಕೊಂಡಿತ್ತು. ತೆರಿಗೆ ಸುಧಾರಣೆ, ದಿವಾಳಿತನ ಕಾಯ್ದೆ ಸೇರಿದಂತೆ ಅನೇಕ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದ್ದು ಈ ಮಹತ್ವದ ಜಿಗಿತಕ್ಕೆ ಕಾರಣವಾಗಿತ್ತು.
ವಿಶ್ವ ಬ್ಯಾಂಕ್ ತನ್ನ 2020 ರ ವರದಿಯಲ್ಲಿ, ಭಾರತದ ಆರ್ಥಿಕತೆಯ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ದೇಶ ಕೈಗೊಂಡ ಸುಧಾರಣಾ ಪ್ರಯತ್ನಗಳನ್ನು ಶ್ಲಾಘಿಸಿದೆ.
ಇದು ಸತತ ಮೂರನೇ ವರ್ಷ ಸುಲಲಿತ ವ್ಯಾಪಾರ ಪಟ್ಟಿಯಲ್ಲಿ ಭಾರತ ಅಗ್ರ 10 ಪ್ರದರ್ಶಕರಲ್ಲಿ ಸ್ಥಾನಗಳನ್ನು ಗಳಿಸಿರುವುದು ಇನ್ನೊಂದು ಮಹತ್ವದ ಸಾಧನೆಯಾಗಿದೆ.
ಒಂದು ವರ್ಷದಲ್ಲಿ 14 ಸ್ಥಾನಗಳಷ್ಟು ಜಿಗಿತವನ್ನು ಕಾಣುತ್ತಿರುವ ಕೆಲವೇ ಕೆಲವು ದೇಶಗಳ ಪೈಕಿ ಭಾರತವೂ ಒಂದು ಎಂಬುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.