ಲಕ್ನೋ: ಹೊಸದಾಗಿ ಪ್ರಾರಂಭಿಸಲಾದ ತೇಜಸ್ ಎಕ್ಸ್ಪ್ರೆಸ್ ಕಳೆದ ಶನಿವಾರ ಮೂರು ಗಂಟೆಗಳ ಕಾಲ ಪ್ರಯಾಣವನ್ನು ವಿಳಂಬ ಮಾಡಿದೆ. ಈ ಹಿನ್ನಲೆಯಲ್ಲಿ ಇದರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಪರಿಹಾರವನ್ನು ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ರೈಲು ವಿಳಂಬವಾಗಿರುವುದಕ್ಕೆ ಪ್ರಯಾಣಿಕರಿಗೆ ಪರಹಾರವನ್ನು ನೀಡಲಾಗುತ್ತಿದೆ. ತೇಜಸ್ ಎಕ್ಸ್ಪ್ರೆಸ್ ಭಾರತೀಯ ರೈಲ್ವೆಯ ಮೊದಲ ಕಾರ್ಪೊರೇಟೆಡ್ ರೈಲು. ಇದನ್ನು ಅಕ್ಟೋಬರ್ 4 ರಂದು ಲಕ್ನೋದಿಂದ ಪ್ರಾರಂಭಿಸಲಾಯಿತು ಮತ್ತು ಇದನ್ನು ಭಾರತೀಯ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೋರೇಶನ್ (ಐಆರ್ಸಿಟಿಸಿ) ನಿರ್ವಹಿಸುತ್ತದೆ.
ಶನಿವಾರ ಈ ರೈಲಿನ ಪ್ರಯಾಣ ಉಭಯ ಬದಿಗಳಿಂದಲೂ ಮೂರು ಗಂಟೆಗಳ ಕಾಲ ವಿಳಂಬಗೊಂಡಿದೆ.
ಐಆರ್ಸಿಟಿಸಿ ಪ್ರಕಾರ, ಲಕ್ನೋದಿಂದ ಈ ರೈಲನ್ನು ಹತ್ತಿದ 451 ಪ್ರಯಾಣಿಕರಿಗೆ ಮತ್ತು ನವದೆಹಲಿಯಿಂದ ಈ ರೈಲು ಹತ್ತಿದ 500 ಪ್ರಯಾಣಿಕರಿಗೆ ಪರಿಹಾರವನ್ನು ನೀಡಲಾಗುತ್ತಿದೆ. ನಿಯಮಗಳ ಪ್ರಕಾರ, ತೇಜಸ್ ಎಕ್ಸ್ಪ್ರೆಸ್ನ ಪ್ರಯಾಣಿಕರಿಗೆ ರೈಲು 1 ಗಂಟೆ ವಿಳಂಬವಾದರೆ 100 ರೂಪಾಯಿ ಮತ್ತು ರೈಲು ಎರಡು ಗಂಟೆ ಮತ್ತು ಅದಕ್ಕಿಂತ ಹೆಚ್ಚು ವಿಳಂಬವಾದರೆ 250 ರೂಪಾಯಿ ಪರಿಹಾರವನ್ನು ನೀಡಬೇಕಾಗುತ್ತದೆ.
ಅಕ್ಟೋಬರ್ 19 ರ ಶನಿವಾರ ತೇಜಸ್ ರೈಲು, ಲಕ್ನೋದಿಂದ ಬೆಳಿಗ್ಗೆ 6.10 ಕ್ಕೆ ಹೊರಡುವ ಬದಲು ಬೆಳಿಗ್ಗೆ 8.55 ಕ್ಕೆ ಹೊರಟಿದೆ ಮತ್ತು ಮಧ್ಯಾಹ್ನ 12.25ಕ್ಕೆ ತಲುಪುವ ಬದಲು ಮಧ್ಯಾಹ್ನ 3.40 ಕ್ಕೆ ನವದೆಹಲಿಗೆ ತಲುಪಿದೆ. ಮಧ್ಯಾಹ್ನ 3.35 ಕ್ಕೆ ನವದೆಹಲಿಯಿಂದ ಹೊರಡುವ ಬದಲು ಸಂಜೆ 5.30 ಕ್ಕೆ ಹೊರಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.