ನವದೆಹಲಿ: ಕಳೆದ ವರ್ಷ ಭಾರತದ ಮೊದಲ ವಿಮಾನ ಕಾರ್ಖಾನೆಗೆ ರೂ.35,000 ಕೋಟಿ ಒಪ್ಪಂದವನ್ನು ಪಡೆದುಕೊಂಡ ಮಹಾರಾಷ್ಟ್ರ ಪೈಲಟ್ ಅಮೋಲ್ ಯಾದವ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಭೇಟಿಯಾದರು. 6 ಆಸನಗಳ ದೇಶೀಯ ಪ್ರಾಯೋಗಿಕ ವಿಮಾನವನ್ನು ನಿರ್ಮಿಸಿರುವ ಯಾದವ್ ಅವರ ಯೋಜನೆಗೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ.
ಮೋದಿಯವರನ್ನು ದೆಹಲಿಯಲ್ಲಿ ಭೇಟಿಯಾದ ಬಳಿಕ ಹೇಳಿಕೆಯನ್ನು ನೀಡಿರುವ ಯಾದವ್ ಅವರು, ಪ್ರಧಾನಿ ಮೋದಿ ತಮ್ಮ ಯೋಜನೆಯನ್ನು ಗಮನಿಸುತ್ತಿದ್ದಾರೆ ಎಂಬುದನ್ನು ತಿಳಿದು ನನಗೆ ಸಂತೋಷವಾಯಿತು ಎಂದು ಹೇಳಿದ್ದಾರೆ.
“ಅವರು ನನ್ನ ಯೋಜನೆಯನ್ನು ಗಮನಿಸುತ್ತಿರುವುದು ಮತ್ತು ನನ್ನನ್ನು ಅವರ ಮನೆಗೆ ಆಹ್ವಾನಿಸಿದ್ದು ನನಗೆ ತುಂಬಾ ಸಂತೋಷವನ್ನು ತಂದಿದೆ. ನಿಮ್ಮ ಕನಸು ಈಗ ಈಡೇರಿದೆಯೇ ಎಂದು ಅವರು ನನ್ನನ್ನು ಕೇಳಿದರು. ಇದು ನನಗೆ ಅನಿರೀಕ್ಷಿತವಾಗಿತ್ತು. ನನ್ನ ಯೋಜನೆಯ ಬಗ್ಗೆ ಅವರಿಗೆ ಸಾಕಷ್ಟು ತಿಳಿದಿದೆ” ಎಂದು ಯಾದವ್ ಮೋದಿ ಭೇಟಿ ಕುರಿತು ಹೇಳಿಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ನನ್ನ ಯೋಜನೆಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು ಎಂದು ಯಾದವ್ ಹೇಳಿದ್ದಾರೆ. “ಅವರು ಯೋಜನೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು ಮತ್ತು ನನಗೆ ಬೆಂಬಲ ನೀಡುವ ಭರವಸೆ ನೀಡಿದರು. ನಾನು ಈ ವಿಮಾನದಲ್ಲಿ 19 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ” ಎಂದಿದ್ದಾರೆ.
ಆವಿಷ್ಕಾರಿಯಾಗಿರುವ ಯಾದವ್ ಅವರು 19 ವರ್ಷಗಳ ಅವಧಿಯಲ್ಲಿ ಮುಂಬಯಿಯಲ್ಲಿರುವ ತಮ್ಮ ಮನೆಯ ಟೆರೇಸ್ನಲ್ಲಿ ಆರು ಆಸನಗಳ ಪ್ರಾಯೋಗಿಕ ವಿಮಾನವನ್ನು ನಿರ್ಮಿಸಿದರು.
ಆದರೆ ಅವರು ವಾಯುಯಾನ ವಾಚ್ಡಾಗ್ ಡಿಜಿಸಿಎಯಿಂದ ನಿಯಂತ್ರಕ ಅನುಮತಿ ಪಡೆಯಲು ಅಡೆತಡೆಗಳನ್ನು ಎದುರಿಸಿದರು.
ಅವರ ಯೋಜನೆಯ ಬಗ್ಗೆ ತಿಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಈ ಬಗ್ಗೆ ಪ್ರಧಾನಿ ಮೋದಿಯವರ ಗಮನಕ್ಕೆ ತಂದರು, ಬಳಿಕ ಮೋದಿ ಯಾದವ್ ಅವರ ಮನವಿಯನ್ನು ಪ್ರಕ್ರಿಯೆಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಯಾದವ್ ಸರ್ಕಾರದ ಯಾವುದೇ ಸಹಾಯವಿಲ್ಲದೆ ಮೂಲಮಾದರಿಯ ವಿಮಾನವನ್ನು ನಿರ್ಮಾಣ ಮಾಡಿದರು, ಇದರ ಅಭಿವೃದ್ಧಿಗಾಗಿ ರೂ.4 ಕೋಟಿಗಳನ್ನು ವ್ಯಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.