ಮಾಜಿ ಹಿಂದೂ ಮಹಾಸಭಾ ನಾಯಕ, ಹಿಂದೂವಾದಿ ಕಮಲೇಶ್ ತಿವಾರಿ ಅವರ ಭೀಕರ ಹತ್ಯೆ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ವರದಿಯ ಪ್ರಕಾರ, ಉತ್ತರಪ್ರದೇಶ ರಾಜಧಾನಿ ಲಕ್ನೋದ ನಾಕಾ ಹಿಂದೋಲಾದ ಖುರ್ಷಿದ್ಬಾಗ್ ಪ್ರದೇಶದಲ್ಲಿ 45 ವರ್ಷದ ಅವರು ತಮ್ಮ ಮನೆಯೊಳಗೆ ಕ್ರೂರವಾಗಿ ಹತ್ಯೆಗೊಳಗಾಗಿದ್ದಾರೆ. ಗುಂಪು ಹಲ್ಲೆ ನಡೆದಾಗ ದೊಡ್ಡ ಮಟ್ಟದಲ್ಲಿ ಬೊಬ್ಬಿಟ್ಟು ಒಂದು ಧರ್ಮವನ್ನು ಟೀಕೆಗೊಳಪಡಿಸುವ ಮಾಧ್ಯಮಗಳು ಕಮಲೇಶ್ ಪ್ರಕರಣದಲ್ಲಿ ಶಾಂತವಾಗಿವೆ.
ಕಮಲೇಶ್ ಕೊಲೆಗೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಶಮೀಮ್ ಪಠಾಣ್, ಫೈಜಾನ್ ಪಠಾಣ್ ಮತ್ತು ಮೊಹ್ಸಿನ್ ಶೇಖ್ ಮೂವರನ್ನು ಬಂಧಿಸಿದ್ದಾರೆ. ಮೂವರು ಆರೋಪಿಗಳು ಕೊಲೆ ಮಾಡಿರುವುದನ್ನು ಈಗಾಗಲೇ ಒಪ್ಪಿಕೊಂಡಿದ್ದಾರೆ. ಈ ನಡುವೆ, ಫರೀದ್-ಉದ್-ದಿನ್ ಶೇಖ್ ಮತ್ತು ಅಶ್ಫಾಕ್ ಶೇಖ್ ಎಂದು ಗುರುತಿಸಲ್ಪಟ್ಟ ಇಬ್ಬರು ಕೊಲೆಯ ರೂವಾರಿಗಳಿದ್ದು, ಇವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಕಮಲೇಶ್ ತಿವಾರಿ ಅವರನ್ನು ಹತ್ಯೆ ಮಾಡುವವರಿಗೆ ರೂ.51 ಲಕ್ಷ ಬಹುಮಾನವನ್ನು ನೀಡುವುದಾಗಿ 2015 ರ ಡಿಸೆಂಬರ್ 4 ರ ಶುಕ್ರವಾರದಂದು ಮುಸ್ಲಿಂ ಸಂಘಟನೆಯಾದ ಜಮಿಯತ್ ಶಬಾಬುಲ್ ಇಸ್ಲಾಂನ ಪಶ್ಚಿಮ ಪ್ರಧಾನ ಕಾರ್ಯದರ್ಶಿ ಮೌಲಾನಾ ಅನ್ವಾರೂಲ್ ಹಕ್ ಘೋಷಣೆ ಮಾಡಿದ್ದ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ನಾಲ್ಕು ವರ್ಷಗಳ ಹಿಂದೆ ಯುಪಿ ಪೊಲೀಸರು ಬಂಧಿಸಿದ್ದರು.
ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬನನ್ನು ಕಮಲೇಶ್ ಅವರ ಕೊಲೆ ಮಾಡುವುದಕ್ಕೆಂದೇ ದುಬೈನಿಂದ ಕರೆಸಿಕೊಳ್ಳಲಾಗಿದೆ. ಎರಡು ತಿಂಗಳುಗಳಿಂದ ಕೊಲೆಗೆ ಸಂಚು ನಡೆದಿತ್ತು ಎನ್ನಲಾಗಿದೆ.
ಆರ್ ಎಸ್ ಎಸ್ ಮತ್ತು ಇತರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಲಿಂಗಕಾಮಿಗಳು ಎಂದು ಸಮಾಜವಾದಿ ನಾಯಕ ಅಜಮ್ ಖಾನ್ ಹೇಳಿಕೆ ನೀಡಿದ್ದಕ್ಕೆ ತಿರುಗೇಟು ನೀಡಿದ್ದ ಕಮಲೇಶ್ ಅವರು, ಪ್ರವಾದಿ ಮೊಹಮ್ಮದ್ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಮೌಲ್ವಿಗಳು ಕಿಡಿಕಾರಲಾರಂಭಿಸಿದ್ದರು, ಅವರಿಗೆ ತಲೆಗೆ ಬಹುಮಾನ ಘೋಷಣೆಯನ್ನೂ ಮಾಡಿದರು.
ಪ್ರವಾದಿ ವಿರುದ್ಧ ಕಮಲೇಶ್ ತಿವಾರಿ ಅವರು ನೀಡಿದ ಹೇಳಿಕೆಗೆ ದೇಶದ ಎಲ್ಲ ಭಾಗಗಳಿಂದಲೂ ಭಾರೀ ಖಂಡನೆಗಳು ವ್ಯಕ್ತವಾದವು, ಬುದ್ಧಿಜೀವಿಗಳ ಸಮುದಾಯವು ಲುಧಿಯಾನ, ಲಕ್ನೋ, ಇಂದೋರ್, ಬೆಂಗಳೂರು, ಭೋಪಾಲ್ ಮತ್ತು ಇತರ ಹಲವಾರು ನಗರಗಳಲ್ಲಿ ಬೀದಿಗಿಳಿದು ಖಂಡನೆಯನ್ನು ವ್ಯಕ್ತಪಡಿಸಿತು. ಆದರೆ ಇಂದು ಮತಾಂಧರಿಂದ ಹಿಂದೂ ಮಹಾಸಭಾ ನಾಯಕ ಕಮಲೇಶ್ ತಿವಾರಿ ಸತ್ತರು, ಆದರೆ ಇದನ್ನು ಖಂಡಿಸಲು ಯಾರೂ ಬೀದಿಗಿಳಿಯಲೇ ಇಲ್ಲ. ಕೊಲೆಯಾದವ ಧರ್ಮಕ್ಕೆ ಸೇರಿದವನು, ಕೊಲೆ ಮಾಡಿದವರು ಯಾವ ಧರ್ಮಕ್ಕೆ ಸೇರಿದವರು ಎಂಬುದನ್ನು ಸರಿಯಾಗಿ ಗಮನಿಸಿಕೊಂಡೇ ಬುದ್ಧಿಜೀವಿಗಳು ರಸ್ತೆಗಿಳಿಯುತ್ತಾರೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.
ಪ್ರವಾದಿ ವಿರುದ್ಧ ಹೇಳಿಕೆಯನ್ನು ನೀಡಿದ್ದಕ್ಕೆ, ಆಗಿನ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ತಿವಾರಿ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯ (ಎನ್ಎಸ್ಎ) ಅನ್ವಯ ಪ್ರಕರಣವನ್ನು ದಾಖಲಿಸಿ, ಅವರನ್ನು ಜೈಲಿಗೆ ಹಾಕಿತ್ತು. 2016 ರ ಸೆಪ್ಟೆಂಬರ್ನಲ್ಲಿ ಅಲಹಾಬಾದ್ ಹೈಕೋರ್ಟ್ ಅವರ ವಿರುದ್ಧದ ಎನ್ಎಸ್ಎ ಆರೋಪಗಳನ್ನು ರದ್ದುಪಡಿಸಿ ಬಳಿಕ, ಅಂದರೆ ಸುಮಾರು ಒಂದು ವರ್ಷಗಳ ಬಳಿಕ ತಿವಾರಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಇದೀಗ ರಾಮ ಜನ್ಮಭೂಮಿ ಪ್ರಕರಣದ ತೀರ್ಪು ಹೊರ ಬೀಳಲು ಕೆಲವೇ ದಿನಗಳು ಬಾಕಿ ಇರುವಂತೆ ಕಮಲೇಶ್ ಅವರ ಹತ್ಯೆಯಾಗಿದೆ, ಇದರ ಒಳ ಮರ್ಮ ಏನಿರಬಹುದು, ಮತ್ತೊಮ್ಮೆ ಗಲಭೆ ಸೃಷ್ಟಿಸುವ ಹುನ್ನಾರ ಇರಬಹುದಾ ಎಂಬ ಶಂಕೆಗಳು ಗೋಚರಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.