ನವದೆಹಲಿ: ನವದೆಹಲಿ ಇಂಧನ ನಿರ್ವಹಣೆ ಮತ್ತು ಅಟೊಮೇಶನ್ ಡಿಜಿಟಲ್ ರೂಪಾಂತರದ ದಿಗ್ಗಜ ಸಂಸ್ಥೆ ಷ್ನೇಯ್ಡರ್ ಎಲೆಕ್ಟ್ರಿಕ್ (Schneider Electric) ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜನೆಗೊಳಿಸಿದ್ದ ಕೇಸ್ ಸ್ಟಡಿ ಸ್ಪರ್ಧೆ ‘ಗೋ ಗ್ರೀನ್ ಇನ್ ದಿ ಸಿಟಿ 2019’ ನಲ್ಲಿ ರಾಜಸ್ಥಾನ ತಾಂತ್ರಿಕ ವಿಶ್ವವಿದ್ಯಾಲಯದ ಟೀಮ್ ಅಲೋ ಇ-ಸೆಲ್ನ ನಿಮಿಶಾ ವರ್ಮಾ ಮತ್ತು ನವೀನ್ ಸುಮನ್ ವಿಜಯಶಾಲಿಗಳಾಗಿ ಹೊರಹೊಮ್ಮಿದ್ದಾರೆ.
ಷ್ನೇಯ್ಡರ್ ಎಲೆಕ್ಟ್ರಿಕ್ ಇಂಡಿಯಾವು ದೇಶದಿಂದ ಗೋ ಗ್ರೀನ್ ಸ್ಪರ್ಧೆಗೆ 8000 ಕ್ಕೂ ಹೆಚ್ಚು ನೋಂದಣಿಗಳನ್ನು ಪಡೆದುಕೊಂಡಿತ್ತು. ಅನೇಕ ಕ್ಷೇತ್ರಗಳ ತಾಂತ್ರಿಕ ತಜ್ಞರ ಮೌಲ್ಯಮಾಪನದ ನಂತರ ಅಗ್ರ 49 ತಂಡಗಳು ಭಾರತ ಸೆಮಿಫೈನಲ್ಗೆ ಪ್ರವೇಶಿಸಿದವು. ಈ ಪ್ರಕ್ರಿಯೆಯಲ್ಲಿ, ಅಗ್ರ 14 ತಂಡಗಳು ತಮ್ಮ ಕಲ್ಪನೆಯನ್ನು ಸಿಟಿ ಇಂಡಿಯಾ ಫಿನಾಲೆಯಲ್ಲಿ ಗೋ ಗ್ರೀನ್ನಲ್ಲಿರುವ ತಾಂತ್ರಿಕ ಮುಖಂಡರಿಗೆ ಪ್ರಸ್ತುತಪಡಿಸಿದವು.
ಭಾರತದ ಫೈನಲಿಸ್ಟ್ಗಳು ಬಾರ್ಸಿಲೋನಾದಲ್ಲಿ ನಡೆದ ಜಾಗತಿಕ ಫೈನಲ್ಗೆ ಆಯ್ಕೆಯಾದರು, ಅಲ್ಲಿ ಅವರು ಎಂಟು ತಂಡಗಳೊಂದಿಗೆ ಸ್ಪರ್ಧೆ ನಡೆಸಿದರು. ಗೋ ಗ್ರೀನ್ ಗ್ಲೋಬಲ್ ಫಿನಾಲೆಯಲ್ಲಿ ಟೀಮ್ ಅಲೋ ಇ-ಸೆಲ್ ವಿಜೇತವಾಗಿ ಹೊರಹೊಮ್ಮಿತು. ಟೀಮ್ ಅಲೋ ಇ-ಸೆಲ್ ವಿದ್ಯಾರ್ಥಿಗಳಾದ ನಿಮಿಶಾ ಮತ್ತು ನವೀನ್ ಅಲೋವೆರಾ ಗಿಡಮೂಲಿಕೆಗಳ ಸಾರಗಳಿಂದ ಮಾಡಿದ 1.5v ಬ್ಯಾಟರಿಗಳನ್ನು ರಚಿಸಿದರು. ಈ ಬ್ಯಾಟರಿಗಳು ಪರಿಸರ ಸ್ನೇಹಿಯಾಗಿರುತ್ತವೆ ಮತ್ತು ಸೀಸ ಮತ್ತು ಪಾದರಸದಂತಹ ಯಾವುದೇ ಅಪಾಯಕಾರಿ ಲೋಹಗಳನ್ನು ಬಳಸದ ಕಾರಣ ಅವುಗಳು ಮಣ್ಣು, ನೀರು ಅಥವಾ ವಾಯುವನ್ನು ಮಲಿನ್ಯಗೊಳಿಸುವುದಾಲೀ ಮಾಡುವುದಿಲ್ಲ. ಇದಲ್ಲದೆ, ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ನಂತಹ ಸ್ಫೋಟಕ ವಿದ್ಯುದ್ವಿಚ್ಛೇದಕಗಳು ಇರದ ಕಾರಣ ಇದು ಸ್ಫೋಟಕವಲ್ಲ ಮತ್ತು ಮಾನವ ಬಳಕೆಗೆ ಸುರಕ್ಷಿತವಾಗಿದೆ.
“ನಮ್ಮ ಸುತ್ತಲಿನ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರಗಳನ್ನು ನಾವು ನಿಜವಾಗಿಯೂ ಕಂಡುಕೊಳ್ಳಬಹುದು. ಸ್ವಚ್ಛ, ಹಸಿರು ಮತ್ತು ಸುಸ್ಥಿರ ಇಂಧನ ಬಳಕೆಗೆ ಷ್ನೇಯ್ಡರ್ ಎಲೆಕ್ಟ್ರಿಕ್ ಒತ್ತು ನೀಡುವುದು ನಮ್ಮ ಉತ್ಸಾಹ್ಕೆ ಕಾರಣವಾಗಿದೆ” ಎಂದು ಟೀಮ್ ಅಲೋ ಇ-ಸೆಲ್ ಹೇಳಿದೆ. ” ಗೋ ಗ್ರೀನ್ ಇನ್ ಸಿಟಿ ಸ್ಪರ್ಧೆಯು ಕಲಿಯಲು ಮತ್ತು ಪ್ರಪಂಚದಾದ್ಯಂತದ ಬಹಳಷ್ಟು ಜನರೊಂದಿಗೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಒಂದು ಅದ್ಭುತ ಅನುಭವವಾಗಿದೆ” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.