ವಾಷಿಂಗ್ಟನ್: 1990ರಿಂದ ಭಾರತವು ತನ್ನ ಬಡತನದ ಪ್ರಮಾಣವನ್ನು ತಗ್ಗಿಸಿದ್ದು, ಪ್ರಗತಿ ದರವನ್ನು ಶೇಕಡಾ 7ರಷ್ಟು ಕಾಪಾಡಿಕೊಂಡು ಬಂದಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಬಡತನವನ್ನು ನಿರ್ಮೂಲನೆ ಮಾಡುವುದು ಸೇರಿದಂತೆ, ಜಾಗತಿಕ ಅಭಿವೃದ್ಧಿ ಪ್ರಯತ್ನದ ಯಶಸ್ಸಿಗೆ ಭಾರತವು ಕಠಿಣ ಸಾಧನೆಯನ್ನು ಮಾಡಿದೆ. ಹವಾಮಾನ ವೈಪರಿತ್ಯ ಸಮಸ್ಯೆಯನ್ನು ಎದುರಿಸುವ ವಿಷಯದಲ್ಲೂ ಜಾಗತಿಕ ಮಟ್ಟದ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಭಾರತವು ತನ್ನ ಬಡತನವನ್ನು ಕಳೆದ 15 ವರ್ಷಗಳಿಂದ ಕುಗ್ಗಿಸುತ್ತಾ ಬಂದಿದ್ದು, ವಾರ್ಷಿಕ ಪ್ರಗತಿ ದರವನ್ನು ಶೇಕಡಾ.7ರಷ್ಟು ಕಾಪಾಡಿಕೊಂಡು ಬಂದಿದೆ. ಮಾನವ ಅಭಿವೃದ್ಧಿ ಫಲಿತಾಂಶಗಳಲ್ಲಿ ಬಲವಾದ ಬೆಳವಣಿಗೆಯನ್ನು ಸಾಧಿಸಿದೆ ಎಂದಿದೆ.
ಮುಂಬರುವ ಒಂದು ದಶಕದ ಒಳಗಡೆ ಭಾರತವು ತನ್ನ ಬಡತನವನ್ನು ನಿರ್ಮೂಲನೆಗೊಳಿಸುವಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಲಿದೆ, ಇದೇ ಅವಧಿಯಲ್ಲಿ ಭಾರತದ ಅಭಿವೃದ್ಧಿಯ ಓಟದ ವೇಗವೂ ವೃದ್ಧಿಯಾಗಲಿದೆ ಮತ್ತು ಹಲವಾರು ಸವಾಲುಗಳು ಕೂಡ ಎದುರಾಗಲಿದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.