ನವದೆಹಲಿ: ಭಾರತದ ಜನನಾಯಕ, ದೇಶಪ್ರೇಮಿ, ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದ ಜೆಪಿ ಎಂದೇ ಖ್ಯಾತರಾಗಿದ್ದ ಜಯ ಪ್ರಕಾಶ್ ನಾರಾಯಣ್ ಅವರ ಜನ್ಮ ದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಹಾನ್ ಹೋರಾಟಗಾರನಿಗೆ ಗೌರವಗಳನ್ನು ಅರ್ಪಣೆ ಮಾಡಿದ್ದಾರೆ.
ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, “ಭಾರತ ಮಾತೆಯ ನಿಜವಾದ ಸುಪುತ್ರ ಲೋಕಮಾನ್ಯ ಜಯಪ್ರಕಾಶ್ ನಾರಾಯಣ್ ಅವರಿಗೆ ಅವರ ಜನ್ಮದಿನದ ವಿನಮ್ರ ಶ್ರದ್ಧಾಂಜಲಿ. ಅವರು ಸ್ವಾತಂತ್ರ ಸಂಘರ್ಷದ ವೇಳೆ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಸ್ವಾತಂತ್ರ್ಯದ ಬಳಿಕವೂ ಲೋಕತಂತ್ರದ ರಕ್ಷಣೆಗಾಗಿ ಅಸಾಧಾರಣ ಪಾತ್ರವನ್ನು ನಿಭಾಯಿಸಿದರು. ಅವರ ತ್ಯಾಗ ಮತ್ತು ಸಮರ್ಪಣೆ ಎಲ್ಲರಿಗೂ ಸದಾ ಪ್ರೇರಣೆಯಾಗಲಿದೆ” ಎಂದಿದ್ದಾರೆ.
1902ರ ಅಕ್ಟೋಬರ್ 11 ರಂದು ಬಿಹಾರ ರಾಜ್ಯದ ಸರನ್ ಜಿಲ್ಲೆಯ ಸಿತಾಬ್ ದಿಯಾರಾದಲ್ಲಿ ಜನಿಸಿದ ಜೆಪಿ ಅವರು, ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಸರಿಪಡಿಸಲು ಜೀನದುದ್ದಕ್ಕೂ ಹೋರಾಡಿದರು. ದೇಶದಲ್ಲಿ ಸಂಪೂರ್ಣ ಕ್ರಾಂತಿಯಾಗಬೇಕು, ಭ್ರಷ್ಟಾಚಾರ ತೊಲಗಬೇಕು, ನಿಜವಾದ ಜನಶಕ್ತಿಯ ಆಳ್ವಿಕೆ ಆರಂಭವಾಗಬೇಕು. ಆಡಳಿತದ ವಿಕೇಂದ್ರಿಕರಣವಾಗಬೇಕು, ಹೊಸ ಶಿಕ್ಷಣ ರೂಪುಗೊಳ್ಳಬೇಕು ಎಂಬುದು ಅವರ ಹೆಬ್ಬಯಕೆಯಾಗಿತ್ತು.
ಜಯಪ್ರಕಾಶರಿಗೆ ಹಿಂಸಾತ್ಮಕ ಕ್ರಾಂತಿಯಲ್ಲಿ ನಂಬಿಕೆಯಿರಲಿಲ್ಲ. ಜೆ.ಪಿ.ಯವರ ಅಹಿಂಸಾತ್ಮಕವಾದ ಪ್ರಾಮಾಣಿಕ ಸಮಾಜವಾದಿ ಕಾರ್ಯಕ್ರಮಗಳು ಸಮಾಜದಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದೆ.
ಭಾರತ ಸರ್ಕಾರ ಇವರಿಗೆ 1999ರಲ್ಲಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. 1965ರಲ್ಲಿ ಇವರಿಗೆ ರೋಮನ್ ಮ್ಯಾಗ್ಸೇಸೆ ಪ್ರಶಸ್ತಿ ದೊರೆತಿದೆ.
मां भारती के सच्चे सपूत लोकनायक जयप्रकाश नारायण को उनकी जन्म-जयंती पर विनम्र श्रद्धांजलि। उन्होंने स्वतंत्रता संघर्ष में अपना बहुमूल्य योगदान तो दिया ही, आजादी के बाद लोकतंत्र की रक्षा में भी अतुलनीय भूमिका निभाई। उनका त्याग और समर्पण हम सबके लिए सदा प्रेरणास्रोत रहेगा। pic.twitter.com/MVZ068OcPD
— Narendra Modi (@narendramodi) October 11, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.