ವಾಷಿಂಗ್ಟನ್: ಮಾನಸಿಕ ಆರೋಗ್ಯದ ಬಗ್ಗೆ ಕಾರ್ಯನಿರ್ವಹಿಸುವ ಅಮೆರಿಕಾದ ಪ್ರಮುಖ ಆರೋಗ್ಯ ಸಂಸ್ಥೆಯ ರಾಷ್ಟ್ರೀಯ ಸಲಹಾ ಸಮಿತಿಯಲ್ಲಿ ಸೇವೆ ಸಲ್ಲಿಸುವ ಸಲುವಾಗಿ ಭಾರತೀಯ ಅಮೆರಿಕನ್ ಸಮುದಾಯದ ಪ್ರಭಾವಿ ಮುಖಂಡರಾದ ಸಂಪತ್ ಶಿವಾಂಗಿ ಅವರಿಗೆ ಆಹ್ವಾನವನ್ನು ನೀಡಲಾಗಿದೆ.
ಶಿವಾಂಗಿ ವೈದ್ಯರಾಗಿದ್ದು, ಇವರಿಗೆ ಯುಎಸ್ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಅಲೆಕ್ಸ್ ಎಂ. ಅಜರ್ ಅವರು ಮಾದಕವಸ್ತು ದುರುಪಯೋಗ ಮತ್ತು ಮಾನಸಿಕ ಆರೋಗ್ಯ ಸೇವೆಗಳ ಆಡಳಿತ (SAMHSAದ) ಮಾನಸಿಕ ಆರೋಗ್ಯ ಸೇವೆಗಳ ರಾಷ್ಟ್ರೀಯ ಸಲಹಾ ಮಂಡಳಿಯಲ್ಲಿ ಸೇವೆ ಸಲ್ಲಿಸುವಂತೆ ಆಹ್ವಾನವನ್ನು ನೀಡಿದ್ದಾರೆ.
“ಮಾದಕವಸ್ತು ಮತ್ತು ಮಾನಸಿಕ ಆರೋಗ್ಯ ಸೇವೆಗಳ ಆಡಳಿತದ ಮಾನಸಿಕ ಆರೋಗ್ಯ ಸೇವೆಗಳ ಕೇಂದ್ರ, ರಾಷ್ಟ್ರೀಯ ಸಲಹಾ ಮಂಡಳಿಯಲ್ಲಿ ಸೇವೆ ಸಲ್ಲಿಸಲು ನಿಮ್ಮನ್ನು ಆಹ್ವಾನಿಸಲು ನಾನು ಸಂತೋಷಪಡುತ್ತೇನೆ” ಎಂದು ಅಜರ್ ಅವರು ಶಿವಾಂಗಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
“ಅವರ ನೇಮಕಾತಿ ತತ್ ಕ್ಷಣದಿಂದ ಪ್ರಾರಂಭವಾಗಿದ್ದು, 2023ರ ಜುಲೈ 30ಕ್ಕೆ ಕೊನೆಗೊಳ್ಳುತ್ತದೆ” ಎಂದು ಅಜರ್ ಹೇಳಿದ್ದಾರೆ.
ಮಾನಸಿಕ ಆರೋಗ್ಯದ ರಾಷ್ಟ್ರೀಯ ಸಲಹಾ ಸಂಸ್ಥೆಗೆ ಆಹ್ವಾನಿಸಲ್ಪಡಲು ಅತೀವ ಗೌರವ ಎನಿಸುತ್ತಿದೆ ಎಂದು ಶಿವಾಂಗಿ ಹೇಳಿದ್ದಾರೆ.
“ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಮತ್ತು ಯುಎಸ್ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಅಲೆಕ್ಸ್ ಎಂ ಅಜರ್, ನಾಲ್ಕು ವರ್ಷಗಳ ಅವಧಿಗೆ ರಾಷ್ಟ್ರೀಯ ಆರೋಗ್ಯ ಸಲಹಾ ಕೇಂದ್ರ, ರಾಷ್ಟ್ರೀಯ ಸಲಹಾ ಮಂಡಳಿಯಲ್ಲಿ ಸೇವೆ ಸಲ್ಲಿಸಲು ನನ್ನನ್ನು ಹುದ್ದೆಗೆ ನೇಮಕ ಮಾಡಿರುವುದು ನನಗೆ ಗೌರವವಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.